ಮೈಸೂರು ಡಿಸಿಗೆ ಕರೋನಾ ಪಾಸಿಟಿವ್
1 min readಮೈಸೂರು ಡಿಸಿ & ಫ್ಯಾಮಿಲಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಡಿಸಿ ಡಾ.ಬಗಾದಿ ಗೌತಮ್ರಿಗು ಕೊರೊನಾ ದೃಢವಾಗಿದೆ. ಬಗಾದಿ ಗೌತಮ್ರ ತಂದೆ, ಐದು ವರ್ಷದ ಮಗನಿಗೆ ಸೋಂಕು ದೃಢವಾಗಿದೆ. ನಿನ್ನೆ ಸಂಜೆ ಕೊರೊನಾ ತಪಾಸಣೆಗೊಳಗಾಗಿದ್ದ ಬಗಾದಿ ಗೌತಮ್ ಅವರು ಕಳೆದ ಹಲವಾರು ದಿನಗಳಿಂದ ಮೈಸೂರಿನ ವಿವಿಧ ಆಸ್ಪತ್ರೆ, ತಾಲ್ಲೂಕುಗಳಿಗೆ ಭೇಟಿ ನೀಡಿದ್ದರು. ನಿನ್ನೆ ಸೋಂಕಿನ ಲಕ್ಷಣ ಕಂಡು ಬಂದ ಹಿನ್ನೆಲೆ, ಫ್ಯಾಮಿಲಿ ಸಮೇತ ಕೊರೊನಾ ಟೆಸ್ಟ್ ಮಾಡಿಸಿದ್ದಾರೆ. ಆದರೆ ಪತ್ನಿ ಅಶ್ವಥಿ ಅವರು ಮಂಡ್ಯ ಜಿಲ್ಲಾಧಿಕಾರಿಯಾಗಿರುವ ಕಾರಣ ಮಂಡ್ಯದಲ್ಲೇ ಉಳಿದಿದ್ದರು.