ಮೈಸೂರಿನ ಚಿಕ್ಕ ತಿರುಪತಿ ಎಂದೇ ಖ್ಯಾತಿ ಪಡೆದ ಒಂಟಿಕೊಪ್ಪಲ್ ದೇಗುಲಕ್ಕೆ ಭಕ್ತರ ಪ್ರವೇಶ ಇಲ್ಲ!
1 min readಮೈಸೂರಿನಲ್ಲಿ ಹೆಚ್ಚಾದ ಕೋವಿಡ್ ಪ್ರಕರಣ ಹೆಚ್ಚಾದ ಹಿನ್ನಲೆಯಲ್ಲಿ ನಾಳೆ ನಡೆಯಬೇಕಿರುವ ಪವಿತ್ರ ವೈಕುಂಠ ಏಕಾದಶಿ ಆಚರಣೆಗೆ ದೇಗುಲಗಳಲ್ಲಿ ಭಕ್ತರು ಭಾಗಿಯಾಗದಂತೆ ಕಡಿವಾಣ ಹಾಕಲಾಗಿದೆ. ಪ್ರಸಿದ್ದಿ ಚಿಕ್ಕ ತಿರುಪತಿ ಎಂದೇ ಖ್ಯಾತಿ ಪಡೆದಿರುವ
ಒಂಟಿಕೊಪ್ಪಲಿನ ವೆಂಕಟರಮಣ ದೇವಾಲಯಕ್ಕೆ ಭಕ್ತಾಧಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಇತಿಹಾಸ ಪ್ರಸಿದ್ದ ವೆಂಕಟರಮಣ ದೇವಾಲಯಕ್ಕೆ ಪ್ರತಿ ವರ್ಷವೂ ಸಾವಿರಾರು ಭಕ್ತಾದಿಗಳು ಆಗಮಿಸುತ್ತಿದ್ದರು. ಆದರೆ ಕೋವಿಡ್ ಕಾರಣ, ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದ್ದು, ದೇವಾಲಯದಲ್ಲೇ ಆಗಮಿಕರಿಂದ ಧಾರ್ಮಿಕ ಕಾರ್ಯಕ್ರಮಗಳು ಮಾತ್ರ ನಡೆಯಲಿದೆ.
ದೇವಾಲಯದ ಅವರಣದಲ್ಲಿಯೇ ಅರ್ಚಕರು ಸಿಬಂದ್ದಿಗಳಿಂದಲೇ ಉತ್ಸವ ನಡೆಯಲಿದೆ ಎಂದು ದೇವಾಲಯದ ಅಡಳಿತ ಮಂಡಳಿ ಮಾಹಿತಿ ನೀಡಿದೆ.