ಒಂದು ಪಾಲಿಕೆ’ 65 ವಾರ್ಡ್’ ಎಲ್ಲಾ ರಸ್ತೆಗಳು ಗುಂಡಿಮಯ!

1 min read

ಸ್ವಚ್ಛ ನಗರಿ ಎನಿಸಿಕೊಂಡ ಮೈಸೂರು ಇದೀಗಾ ಗುಂಡಿಗಳ ನಗರಿ ಎಂಬ ಖ್ಯಾತಿಗೆ ಒಳಗಾಗುತ್ತಿದೆ. ಇದಕ್ಕೆ ಕಾರಣ ಅಧಿಕಾರಿಗಳು ಹಾಗೂ ನಾವು, ನೀವೆ ಆಯ್ಕೆ ಮಾಡಿ ಕಳುಹಿಸಿದ ಜನಪ್ರತಿನಿಧಿಗಳು. ಹೌದು ಮೈಸೂರಿನ 65 ವಾರ್ಡ್‌ಗಳಲ್ಲಿಯು ಸಹ ಗುಂಡಿಮಯವಾಗಿದ್ದು, ಜನರು ವಾಹನ ಸವಾರರು ಈ ಗುಂಡಿಯಲ್ಲೇ ನಿತ್ಯದ ಸಂಚಾರ ಮಾಡುತ್ತಿದ್ದಾರೆ. ನಿತ್ಯವೂ ಇಡೀ ಶಾಪ ಹಾಕಿ ತಿರುಗುವ ಜನರು, ಎಷ್ಟೇ ಹೇಳಿದ್ರು ಯಾವುದೇ ಪ್ರಯೋಜನ ಇಲ್ಲ. ಇದೀಗಾ ಮಣ್ಣು ಹಾಕಿ ಗುಂಡಿ ಮುಚ್ಚುವ ಕೆಲಸ ಮಾಡಿ ನಂತರ ಗುಂಡಿ ಮುಚ್ಚಲು ನೀಡುವ ಅನುದಾನ ಕೂಡ ಅದೇ ಮಣ್ಣಿನಲ್ಲಿ ಮುಚ್ಚು ಹೋಗುತ್ತಿದೆ.

ಪಾಲಿಕೆ ಮುಂಭಾಗದಲ್ಲೇ ಮಣ್ಣಿನಲ್ಲಿ ಗುಂಡಿ ಮುಚ್ಚುತ್ತಿರುವ ಚಿತ್ರ

ಮಳೆಗಾಲದಲ್ಲಿ ಆರಂಭ ಮಾಡೋ ಕಾಮಗಾರಿ !

ನಮ್ಮ ಅಧಿಕಾರಿಗಳು ಹೇಗೆ ಅಂದ್ರೆ ಇನ್ನೇನು ಮಳೆಗಾಲ ಆರಂಭ ಆಗ್ತಿದೆ ಅನ್ನೋದನ್ನ ನೋಡಿ ಕೆಲಸ ಆರಂಭ ಮಾಡ್ತಾರೆ ಅನ್ಸುತ್ತೆ. ವರ್ಷದ ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಡಾಂಬರೀಕರಣ ಮಾಡುವ ಬಗ್ಗೆ ಚಿಂತನೆ ಮಾಡುತ್ತಾರೆ.

ಈ ವೇಳೆ ಅರೆಬರೆ ಕಾಮಗಾರಿ, ಕಳಪೆ ಕಾಮಗಾರಿ ಮಾಡಿದರು, ಮಾಡಿಸಿದರು ಮಳೆಯ ನೆಪ್ಪವೊಡ್ಡಿ ಸುಮ್ಮನಾಗುತ್ತಾರೆ. ಸರಿಯಾದ ಡಾಂಬರೀಕರಣ ರಸ್ತೆ ಇಲ್ಲದಿದ್ರು ಕೂಡ ಜನರು ಇವರಿಗೆ ಮತ ಹಾಕಬೇಕು.

ವಿಧಿ ಇಲ್ಲದ ಜನರ ಸಂಚಾರ!

ಇನ್ನು ಜನರಿಗೆ ಪಾಲಿಕೆ ಅಧಿಕಾರಿಗಳಿಗೆ ಹೇಳಿ ಹೇಳಿ ಬೇಸರವಾಗಿದೆ. ಹಾಗಾಗಿಯೇ ಇತ್ತಿಚ್ಚಿಗೆ ಜನರು ತಮ್ಮ ಪಾಡಿಗೆ ತಾವು ಜೀವನ ನಡೆಸೋದೆ ಸೂಕ್ತ ಎಂದು ಸುಮ್ಮನಾಗಿದ್ದಾರೆ.

ಕೆಲ ಹೋರಾಟಗಾರರು ಏನೋ ಬದಲಾಗಬಹುದು ಎಂದು ಹೋರಾಟ ಮಾಡ್ತಿದ್ದಾರೆ. ದೇವರು, ಪ್ರಮಾಣ, ಜನರಿಗೆ ಬಗ್ಗದ ನಮ್ಮ‌ ಕೆಲ ಜನಪ್ರತಿನಿಧಿಗಳು, ನಿಜವಾಗಿ ಹೋರಾಟಕ್ಕೆ ಮಣಿಯುತ್ತಾರೆ ಎಂಬುದು ಸುಳ್ಳೆ ಹೌದು.

ಅದೇನು ಇದ್ದರು ಜನರ ಕಷ್ಟಕ್ಕೆ ಸ್ಪಂದಿಸುತ್ತೇವೆ ಎನ್ನುವ ನಾಲಿಗೆಯೇ ನಿಜಕ್ಕು ತನ್ನ ನೀಚ ಬುದ್ದಿ ಬಿಟ್ಟು ಸರಿಯಾದ ಶುದ್ಧ ಮಾತನಾಡಬೇಕಿದೆ.

About Author

Leave a Reply

Your email address will not be published. Required fields are marked *