ಮೈಸೂರಿನಲ್ಲಿ ಎರಡನೇ ಓಮಿಕ್ರಾನ್ ಕೇಸ್!
1 min readಮೈಸೂರಿನಲ್ಲಿ ಮತ್ತೊಂದು ಓಮಿಕ್ರಾನ್ ಪ್ರಕರಣ ಪತ್ತೆಯಾಗಿದ್ದು ತಾಂಜೇನಿಯಾ ದೇಶದಿಂದ ಬಂದಿದ್ದ ವಿದ್ಯಾರ್ಥಿನಿಗೆ ಓಮಿಕ್ರಾನ್ ಕಂಡಿ ಬಂದಿದೆ. ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದಿದ್ದ 29 ವರ್ಷದ ವಿದ್ಯಾರ್ಥಿನಿಗೆ ತಪಾಸಣೆ ವೇಳೆ ಓಮಿಕ್ರಾನ್ ಪತ್ತೆಯಾಗಿದೆ. ಈ ಬಗ್ಗೆ ಮೈಸೂರು ಆರೋಗ್ಯ ಇಲಾಖೆಯಿಂದ ಅಧಿಕೃತವಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಇನ್ನು ಡಿ.20ರಂದು ತಾಂಜೇನಿಯಾ ದೇಶದಿಂದ ಹೈದರಾಬಾದ್‌ಗೆ ಬಂದಿದ್ದ ವಿದ್ಯಾರ್ಥಿನಿಗೆ ವಿಮಾನ ನಿಲ್ದಾಣದಲ್ಲಿ ತಪಾಸಣೆ ಮಾಡಲಾಗಿದೆ. ಈ ವೇಳೆ ನಿನ್ನೆ ವರದಿ ಬಂದಿದ್ದು ವಿದ್ಯಾರ್ಥಿನಿಗೆ ಪ್ರತ್ಯೇಕವಾಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ. ಆದರೆ ವಿದ್ಯಾರ್ಥಿನಿ ಹೈದರಾಬಾದ್ ಮೂಲಕ ಬೆಂಗಳೂರು ಹಾಗೂ ಮೈಸೂರಿಗೆ ಬಂದಿರುವುದಾಗಿ ಹೇಳಿದ್ದಾಳೆ ಎನ್ನಲಾಗಿದೆ. ಸದ್ಯ ಆಕೆಯ ಸಂಪರ್ಕದಲ್ಲಿದ್ದವರ ಮಾಹಿತಿ ಕಲೆ ಹಾಕುತ್ತಿದ್ದು, ಅವರನ್ನು ಸಹ ಸ್ಕ್ರೀನಿಂಗ್ ಮಾಡುವ ಸಾಧ್ಯತೆ ಇದೆ.
ಹಾಸ್ಟೆಲ್ ವಿದ್ಯಾರ್ಥಿನಿಯರ ಆತಂಕ!?
ಇನ್ನು ವಿದೇಶದಿಂದ ಬಂದ ವಿದ್ಯಾರ್ಥಿನಿ ಹಾಸ್ಟೆಲ್‌ನಲ್ಲಿದ್ದ ಕಾರಣ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಇದೀಗಾ ಭೀತಿ ಶುರುವಾಗಿದೆ. ಇಡೀ ಮಾನಸ ಗಂಗೋತ್ರಿ ಹಾಟ್ ಸ್ಪಾಟ್ ಆಗುವ ಭೀತಿ ಎದುರಾಗಿದ್ದು ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ. ಆದರು ಕೂಡ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದು ಅವರಿಗೆ ಧೈರ್ಯ ಹೇಳುವ ಕೆಲಸವು ಆಗ್ತಿದೆ.
ಈ ನಡುವೆ ಮೊದಲ ಪ್ರಕರಣದಲ್ಲಿ 9 ವರ್ಷದ ಬಾಲಕಿಗು ಓಮಿಕ್ರಾನ್ ಕಂಡು ಬಂದಿದ್ದು, ಯಾವುದೇ ರೋಗದ ಲಕ್ಷಣ ಇಲ್ಲದಿದ್ದರು ವೈರಸ್ ಕಾಣಿಸಿಕೊಂಡಿರೋದು ಆತಂಕ ತಂದಿದೆ. ಸದ್ಯ ಆ ಬಾಲಕಿ ಕೂಡ ಚೇತರಿಕೆ ಕಂಡಿದ್ದು ವಿದೇಶದಿಂದ ಬಂದವರ ಮೇಲೆ ತೀವ್ರ ನಿಗಾ ವಹಿಸಲಾಗ್ತಿದ್ದು, ಬಾಲಕಿ ಆರೋಗ್ಯ ಸ್ಥಿರವಾಗಿರುವ ಬಗ್ಗೆ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೇರಳ ಗಡಿ ಹೈ ಅಲರ್ಟ್!
ಈ ನಡುವೆ ಕೇರಳದಲ್ಲಿ ಒಮಿಕ್ರಾನ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಕೇರಳ ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಲಾಗಿದೆಮ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಗಡಿ ಭಾಗವಾದ ಬಾವಲಿಯಲ್ಲಿ ಅಲರ್ಟ್ ಮಾಡಲಾಗಿದ್ದು, ಬಾವಲಿ ಚೆಕ್ ಪೋಸ್ಟ್ ಗೆ ಭೇಟಿ ನೀಡಿ ತಾಲೂಕು ಆರೋಗ್ಯಾಧಿಕಾರಿ ಪರಿಶೀಲನೆ ನಡೆಸಿದ್ದಾರೆ. ಕೇರಳದಿಂದ ಕ್ರಿಸ್ ಮಸ್ ಹಾಗೂ ಹೊಸ ವರ್ಷಾಚರಣೆಗೆ ಮೈಸೂರಿಗೆ ಹೆಚ್ಚಿನ ಜನರು ಆಗಮಿಸುತ್ತಿರುವ ಕಾರಣ ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಅಲ್ಲದೆ ಕೋವಿಡ್ ವರದಿಯನ್ನ ಕ್ಯೂ ಆರ್ ಕೋಡ್ ಮೂಲಕ ಸ್ಕ್ಯಾನ್ ಮಾಡಬೇಕೆಂದು ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ. ಹಾಗಾಗಿ ನಮ್ಮಲ್ಲಿ ಕಡ್ಡಾಯ ವರದಿ, ಕಟ್ಟು ನಿಟ್ಟಿನ ಕ್ರಮ ವಹಿಸಲಾಗಿದೆ ಅಂತಾರೆ ಆರೋಗ್ಯಾಧಿಕಾರಿಗಳು.
ಅರಮನೆಯಲ್ಲಿ ಫಲ ಪುಷ್ಪಾ ಪ್ರದರ್ಶನ- ಸಾವಿರಾರು ಜನ ಭಾಗಿ!
ಈ ನಡುವೆ ಮೈಸೂರು ಅರಮನೆಯಲ್ಲಿ ಫ್ಲವರ್ ಶೋ ಆಯೋಜನೆಯಾಗಿದೆ. ಇದನ್ನ ನೋಡಲೆಂದು ಸಾವಿರಾರು ಸಂಖ್ಯೆಯ ಜನರು ಆಗಮಿಸುತ್ತಿದ್ದಾರೆ. ಗುಂಪುಗುಂಪಾಗಿ ಜನರು ಬರುತ್ತಿದ್ದು ಯಾವುದೇ ಕೋವಿಡ್ ಮಾರ್ಗಸೂಚಿ ಪಾಲನೆ ಆಗ್ತಿಲ್ಲ. ಎರಡು ಡೋಸ್ ವಾಕ್ಸಿನ್ ಕಡ್ಡಾಯ ಪಾಲನೆಯು ಇಲ್ಲ, ಸರಿಯಾದ ಕ್ರಮವು ಇಲ್ಲದಂತೆ ಫ್ಲವರ್ ಶೋ ನಡೆಯುತ್ತಿದೆ. ಇದರಿಂದ ಹೊರಗಿನಿಂದ ಬರುವವರಿಂದ ಸಮಸ್ಯೆ ಆದರೆ ಏನು ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಕಟ್ಟುನಿಟ್ಟಿನ ನೈಟ್ ಕರ್ಫ್ಯೂ ಜಾರಿ
ಈ ನಡುವೆ ಮೈಸೂರಿನಲ್ಲಿ ನೈಟ್ ಕರ್ಫ್ಯೂ ಕಟ್ಟು ನಿಟ್ಟಾಗಿ ಜಾರಿಯಾಗಿದ್ದು, ಪೊಲೀಸ್ ಆಯುಕ್ತರು ಕುದುರೆ ಏರಿ ರೌಂಡ್ಸ್ ಹಾಕಿದ್ದಾರೆ. ಇಂದಿನಿಂದ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ ಅವರು ತಿಳಿಸಿದ್ದಾರೆ.
ಸದ್ಯ ಮೈಸೂರಿನಲ್ಲಿ ಓಮಿಕ್ರಾನ್ ಆತಂಕ ಶುರುವಾಗಿದ್ದು ಜನರು ಹಾಗೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ. ಇದರ ಮಧ್ಯೆ ಕೆಲ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ವಾರ್ನ್ ಮಾಡಿದ್ದಾರೆ.
ನನ್ನೂರು ಮೈಸೂರು ಟೀಂ..