17 ಲಕ್ಷ ರೂ ವೆಚ್ಚದ ಕಾಮಗಾರಿಗೆ ಶಾಸಕ ರಾಮದಾಸ್ ಚಾಲನೆ.

1 min read

17 ಲಕ್ಷ ರೂಗಳ ನಗರಪಾಲಿಕೆ ಅನುದಾನದಡಿಯಲ್ಲಿ ವಾರ್ಡ್ ನಂಬರ್ 63 ಜೆಪಿನಗರದ 20ನೇ ಮೇನ್ ಪುಟ್ಟರಾಜ ಗವಾಯಿ ಸ್ಟೇಡಿಯಂ ಮುಖ್ಯರಸ್ತೆ ಡಾಂಬರೀಕರಣಕ್ಕೆ ಮಾನ್ಯ ಶಾಸಕರಾದ ಎಸ್ ಎ ರಾಮದಾಸ್ ರವರು ಚಾಲನೆ ನೀಡಿದರು.

ಚಾಲನೆ ನೀಡಿ ಮಾತನಾಡಿದ ಶಾಸಕರು ರಸ್ತೆಯ ಸೇಫ್ಟಿಗಾಗಿ ನಾಗರಿಕ ಸಮಿತಿಗಳನ್ನು ಕ್ಷೇತ್ರದಾದ್ಯಂತ ಮಾಡುವವರಿದ್ದೇವೆ ಅವರೇ ಆ ರಸ್ತೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವವರಿದ್ದಾರೆ. ಇನ್ನೊಂದು ವಾರದಲ್ಲಿ 25 ಕೋಟಿ ರೂ ಕಾಮಗಾರಿಗೆ ಚಾಲನೆ ನೀಡುವವರಿದ್ದೇವೆ ಎಂದರು.

ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯರಾದ ಶಾರದಮ್ಮ ಈಶ್ವರ್ ರವರು ಸ್ಥಳೀಯ ಮುಖಂಡರುಗಳಾದ ದೇವರಾಜೇಗೌಡರು, ಈಶ್ವರ್, ರೇವತಿ,ಭಾಗ್ಯ, ರೇಣುಕಾ,ಮೈನಾವತಿ,ಅಕ್ಷಯ್ ಸುಬ್ರಮಣ್ಯ,ಕುಮಾರ,ಬೋವಿ ಸಮಾಜದ ಅಧ್ಯಕ್ಷರಾದ ರಾಜು, ಒಕ್ಕಲಿಗರ ಸಂಘದ ಅಧ್ಯಕ್ಷರಾದ ಕೃಷ್ಣರವರು ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು

About Author

Leave a Reply

Your email address will not be published. Required fields are marked *