ನಕಲಿ ನಂದಿನಿ ತುಪ್ಪ ತಯಾರಿಕೆ ಪ್ರಕರಣ FIR ದಾಖಲು!
1 min readಮೈಸೂರು : ನಕಲಿ ತುಪ್ಪ ತಯಾರಿಕೆಯಲ್ಲಿ ಯಾರೇ ಬಾಗಿಯಾದ್ರೂ ಕ್ರಮ. ಮೈಮುಲ್ ಸಿಬ್ಬಂದಿ ಭಾಗಿಯಾಗಿದ್ರೆ ನಿರ್ಧಾಕ್ಷಿಣ್ಯ ಕ್ರಮ ತಗೊತೀವಿ. ನಕಲಿ ತುಪ್ಪ ತಯಾರಿಕಾ ಘಟಕ ಪತ್ತೆ ಪ್ರಕರಣ ವಿಚಾರವಾಗಿ ಮೈಸೂರಿನಲ್ಲಿ ಮೈಮುಲ್ ಅಧ್ಯಕ್ಷ ಪ್ರಸನ್ನ ಹೇಳಿಕೆ ನೀಡಿದ್ದಾರೆ. ನಮ್ಮ ಸಿಬ್ಬಂದಿ ಈ ಪ್ರಕರಣದಲ್ಲಿ ಭಾಗಿಯಾಗಿದ್ರೆ ಅವರನ್ನ ಸೇವೆಯಿಂದಲೇ ವಜಾ ಮಾಡುತ್ತೇವೆ, ಜೈಲಿಗೂ ಕಳುಹಿಸುತ್ತೇವೆ. ಈ ಸಂಬಂಧ ಈಗಾಗಲೇ ಎಸ್.ಪಿ.ಯವರಿಗೆ ದೂರೂ ನೀಡಲಾಗಿದೆ.
ಮೈಸೂರಿನ ಹೊರವಲಯದ ಹೊಸಹುಂಡಿಯಲ್ಲಿ ನಕಲಿ ತುಪ್ಪ ತಯಾರಿಕೆ ಕಂಡು ಬಂದಿದೆ. ಅಲ್ಲಿಗೂ ನಾವು ಭೇಟಿ ನೀಡಿ, ನಕಲಿ ತುಪ್ಪ ತಯಾರಿಕೆ ಘಟಕವನ್ನ ಸೀಜ್ ಮಾಡಿಸಿದ್ದೇವೆ. ಅಲ್ಲಿ ಸಿಕ್ಕಂತಹ ದಾಖಲೆಗಳ ಸಹಾಯದಿಂದ ಈಗಾಗಲೇ ಕೆಲವರ ಮೇಲೆ ಎಫ್‌ಐಆರ್ ಆಗಿದೆ. ಇದೇ ಮೊದಲು ಈ ಇಂತಹ ಕಲಬೆರಕೆ ಜಾಲ ಕಂಡು ಬಂದಿರೋದು. ಸರ್ಕಾರದ ಮಟ್ಟದಲ್ಲಿ ತನಿಖೆಗೆ ಮನವಿ ಮಾಡಿದ್ದೇವೆ. ಗೋದಾಮಿನಲ್ಲಿ ಸಿಕ್ಕಂತಹ ಎಲ್ಲಾ ನಕಲಿ ವಸ್ತುಗಳನ್ನ ಸೀಜ್ ಮಾಡುವಂತಹ ಕೆಲಸವಾಗಿದೆ. ಫುಡ್ ಡಿಪಾರ್ಟ್‌ಮೆಂಟ್‌ಗೂ ಮಾದರಿಯನ್ನ ಕಲುಹಿಸಲಾಗಿದೆ.
ಮೇಲ್ನೋಟಕ್ಕೆ ಡಾಲ್ಡಾ, ಪಾಮ್ ಆಯಿಲ್‌ನಂತಹ ಪ್ರಾಡಕ್ಟ್ ಬಳಸಿದ್ದಾರೆ. ಎಲ್ಲೇಲಿ ಸಪ್ಲೈ ಆಗ್ತಿತ್ತು, ಯಾರೆಲ್ಲಾ ಭಾಗಿಯಾಗಿದ್ದಾರೆ ಅನ್ನುವುದರ ತನಿಖೆಯಾಗುತ್ತದೆ. ಯಾರೇ ಪ್ರಭಾವಿಗಳಿದ್ರೂ ಬಿಡಲ್ಲ, ಜೈಲಿಗೆ ಕಳುಹಿಸುತ್ತೇವೆ. ಇಂತಹ ಅಕ್ರಮಗಳನ್ನ ತಡೆಯಲು ವಿಶ್ಯುಲಿಯನ್ಸ್ ಟೀಂ ಚುರುಕುಗೊಳಿಸುತ್ತೇವೆ. ಪ್ರತಿ ವಾರಕ್ಕೊಮ್ಮೆ ಎಲ್ಲಾ ಪಾರ್ಲರ್‌ಗಳಿಗೆ ಭೇಟಿ ಕೊಟ್ಟು ಪರಿಶೀಲಿಸಬೇಕು.
ಗುಣಮಟ್ಟ ಕಾಯ್ದುಕೊಳ್ಳುವ ಬಗ್ಗೆ ಪ್ರತಿ ವಾರ ಉತ್ಪನ್ನಗಳನ್ನ ಲ್ಯಾಬ್‌ಗೆ ತಂದು ಪರಿಶೀಲಿಸುತ್ತೇವೆ. ಕೂಲಂಕುಶವಾಗಿ ತನಿಖೆ ನಡೆಸಿ ಸತ್ಯಾಸತ್ಯತೆ ಹೊರ ತರುವಂತೆ. ನಾವು ಕೂಡ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ರೈತರು, ಗ್ರಾಹಕರು ಮೈಮುಲ್‌ಗೆ ಎರಡು ಕಣ್ಣುಗಳಿದ್ದಂತೆ. ಇಬ್ಬರ ವಿಶ್ವಾಸವನ್ನ ಮೈಮುಲ್ ಕಾಪಾಡಿಕೊಳ್ಳಲಿದೆ ಅಂತ ಮೈಮುಲ್ ಅಧ್ಯಕ್ಷ ಪ್ರಸನ್ನ ಹೇಳಿಕೆ ನೀಡಿದ್ದಾರೆ.