ಅಧಿವೇಶನಕ್ಕು ಹೋದರು ವಿಶೇಷ ಮಕ್ಕಳ ಕಾಳಜಿ ವಹಿಸಿದ ಶಾಸಕ!
1 min readಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು ಶಾಸಕ ಎಸ್.ಎ.ರಾಮದಾಸ್ ಅವರು ಭಾಗವಹಿಸಿದ್ದಾರೆ.
ಬೆಳಗಾವಿಗೆ ಹೋದರು ಅಧಿವೇಶನದ ಬಿಡುವಿನ ವೇಳೆಯಲ್ಲಿ ಎ.ಆರ್.ಟಿ ಸೆಂಟರ್ ಗೆ ಭೇಟಿ ನೀಡುವುದು ಶಾಸಕರು ಕಳೆದ ಹಲವಾರು ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ. ಇಂದು ಕೂಡಾ ಬಿಡುವಿನ ವೇಳೆಯಲ್ಲಿ ಎ.ಆರ್.ಟಿ ಸೆಂಟರ್ ಗೆ ಭೇಟಿ ನೀಡಿ ಅಲ್ಲಿನ ಮುಖಸ್ಥರೊಂದಿಗೆ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿದರು.
ವಿಶೇಷವಾಗಿ ಹೆಣ್ಣುಮಕ್ಕಳು ಈ ವೃತ್ತಿಗೆ ಇಳಿಲಿಕ್ಕೆ ಆರೋಗ್ಯದ ದೃಷ್ಟಿಯಿಂದ ಜಾಗೃತಿ ಕೊಡುವಂತದ್ದು ಎರಡನೆಯದಾಗಿ msm ನ ಸಂಖ್ಯೆ ಹೆಚ್ಚಾಗುತ್ತಿದೆ. ಪುಟ್ಟ ಪುಟ್ಟ ಮಕ್ಕಳಿನಿಂದ ಹಿಡಿದು ದೊಡ್ಡವರ ವರೆಗೂ ಈ ಸಮಸ್ಯೆ ಹೆಚ್ಚಾಗುತ್ತಿದೆ ಈ ಸಮಸ್ಯೆಯಿಂದ ಹೊರಬರಲು ವಿಶೇಷವಾಗಿ ಜಾಗೃತಿ ನಿರ್ಮಾಣ ಮಾಡುವುದು ಹಾಗೂ ಆರೋಗ್ಯದ ದೃಷ್ಟಿಯಿಂದ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಬೇಕು, ಮತ್ತೆ ಮುಂದೆ ಮಕ್ಕಳುಗಳು ಈ ರೀತಿ ಚಟಕ್ಕೆ ಬಲಿಯಾಗದೆ ಇರುವ ರೀತಿಯಲ್ಲಿ ಶಾಲಾ ಮಟ್ಟದಲ್ಲಿಯೇ ಒಂದು ಕೌನ್ಸೆಲಿಂಗ್ ಅನ್ನು ನಡೆಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಯಿತು.
- ಈಗ ಮಕ್ಕಳುಗಳಲ್ಲಿ HIV ನಿಯಂತ್ರಣ ಮಾಡುವ ವಿಧಾನ ಇದ್ದರೂ ಕೂಡಾ ಮಕ್ಕಳಲ್ಲಿ 0.27 ಇದೆ ಅದನ್ನು ಶೂನ್ಯಕ್ಕೆ ತರುವ ಪ್ರಯತ್ನ ಮಾಡಬೇಕು ಎಂದು ಚರ್ಚಿಸಲಾಯಿತು. ಸರಿಯಾದ ಉದ್ಯೋಗ ಅವಕಾಶಗಳು ಇಲ್ಲದ ಕಾರಣ HIV ಸೋಂಕು ಇದ್ದರೂ ಕೂಡಾ ಅವರು ಸೆಕ್ಸ್ ವರ್ಕರ್ಸ್ ಆಗಿ ಭಾಗಿಯಾಗುತ್ತಾರೆ ಇವರಿಗೂ ಕೂಡಾ ಒಂದು ಪಿಂಚಣಿ ಸೌಲಭವನ್ನು ಜಾರಿ ತರಬೇಕೆಂದು ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಬೇಕೆಂದು ನಿರ್ಧರಿಸಲಾಯಿತು. ಮಕ್ಕಳಲ್ಲಿ ಸ್ಯಾಮ್, ಮ್ಯಾಮ್ ಇರುವ ಕಾರಣ ಅಂತಹ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಕಾರ್ಯಕ್ರಮವನ್ನು ಸರ್ಕಾರದಿಂದಲೇ ಜಾರಿ ಮಾಡಬೇಕು ಹಾಗೂ ಅಂತಹ ಮಕ್ಕಳನ್ನು ಉಳಿಸಿಕೊಳ್ಳುವ ಯೋಜನೆಯನ್ನು ಸರ್ಕಾರ ಮಾಡಬೇಕಾಗಿದೆ.
-ರಾಜ್ಯದಲ್ಲಿ ಹಾಗೂ ದೇಶದಲ್ಲಿ ಈ ರೀತಿಯಾದಂತಹ ಕೆಟ್ಟ ಪದ್ಧತಿ ಮೂಲಕ ಸಣ್ಣ ವಯಸ್ಸಿನ ಮಕ್ಕಳು ಅಡ್ಡ ದಾರಿ ಹಿಡಿಯುತ್ತಿರುವುದು ಶೋಚನೀಯ, ಇದನ್ನು ತಡೆಯಲು ಸರ್ಕಾರದೊಂದಿಗೆ NGO ಹಾಗೂ ಸಮಾಜದ ಜವಾಬ್ದಾರಿ ಇದೆ. MSM ಜೊತೆಯಲ್ಲೇ ಯುವ ಜನಾಂಗ ಡ್ರಗ್, ಮಧ್ಯಪಾನದಿಂದ ದೂರವಿಡಲು ಒಂದು ನಿಯಮ ತರುವ ಅವಶ್ಯಕತೆ ಇದೆ, ಗೊತ್ತೋ ಗೊತ್ತಿಲ್ಲದೆಯೂ ಅಡಲ್ಟ್ ಆಗಿರುವ MSM ಗಳನ್ನು ದಾರಿ ತಪ್ಪಿಸುತ್ತಿರುವುದು ಕಂಡು ಬಂದಿದೆ, ಈಗಾಗಲೇ 40 ಶಾಲೆಗಳಲ್ಲಿ ನಡೆಸಿರುವ ಸರ್ವೇಯ ಪ್ರಕಾರ ಇದರ ಸಂಖ್ಯೆ ಹೆಚ್ಚುತ್ತಿರುವುದು ಕಂಡು ಬಂದಿದೆ. ಹೆಚ್ ಐ ವಿ ಇರುವ ಮಕ್ಕಳಿಗೆ ಮಹಾರಾಷ್ಟ್ರ ಸರ್ಕಾರದಂತೆ ಒಂದು ಪ್ರೋತ್ಸಾಹ ಧನದ ರೀತಿಯಲ್ಲಿ ನೀಡಿದರೆ ಬದುಕಲು ಸಹಾಯವಾಗುತ್ತದೆ, ಅಲ್ಲದೇ ಅವರಿಗೆ ಒಂದು ಮಟ್ಟದ ಶಿಕ್ಷಣ ದೊರಕುತ್ತಿದ್ದು ಹೆಚ್ಚಿನ ಶಿಕ್ಷಣಕ್ಕಾಗಿ ವಿಶೇಷ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸುವುದರ ಜೊತೆಯಲ್ಲಿ ಕೌಶಲ್ಯವನ್ನೂ ನೀಡುವ ಮೂಲಕ ಸರ್ಕಾರದ ಮುಖ್ಯವಾಹಿನಿಗೆ ತರುವ ದೊಡ್ಡ ಜವಾಬ್ದಾರಿ ನಮ್ಮದಿದೆ.
- ಇವೆಲ್ಲಾ ಮುಖ್ಯವಾದ ಕ್ರಮಗಳನ್ನು ತೆಗೆದುಕೊಂಡು 10 ವರ್ಷಗಳ ಗುರಿಯೊಂದಿಗೆ 2030 ರ ಒಳಗೆ ಹೆಚ್ ಐ ವಿ ಸೋಂಕು ಮಕ್ಕಳಿಗೆ ತಗುಲದಂತೆ ನೋಡಿಕೊಳ್ಳಬೇಕು.
ಸದರಿ ವಿಷಯವನ್ನು ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಇವೆಲ್ಲರ ಜೊತೆಯಲ್ಲಿ ಒಂದು ಸಂಯುಕ್ತವಾಗಿ ಸಮಾಲೋಚನೆ ಮಾಡಿ ವರದಿಯನ್ನು ಮುಖ್ಯಮಂತ್ರಿಗಳಿಗೆ ತಲುಪಿಸುವ ಅಗತ್ಯವಿದೆ ಅಲ್ಲದೇ ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳಿಗೆ ವರದಿಯನ್ನು ಸಲ್ಲಿಸಲಿದ್ದೇವೆ.
ಈ ಸಮಯದಲ್ಲಿ ಜಿಲ್ಲಾ ಸರ್ಜನ್ ಡಾ.ಸುಧಾಕರ್, ಆರ್.ಎಂ.ಓ ಡಾ.ಕೇಶವ್, ಮೆಡಿಕಲ್ ಆಫೀಸರ್, ಹೆಚ್ ಐ ವಿ ಸೋಂಕಿತರ ಕೌನ್ಸಿಲರ್ ರತ್ನ , ಡಾ.ವೀರೇಶ್, MSM ಪ್ರತಿನಿಧಿ ಗಣೇಶ್, ಸ್ಪಂದನಾ ನೆಟ್ವರ್ಕ್ ನ ಕಸ್ತೂರಿ, ಹಾಗೂ ಎ.ಆರ್.ಟಿ ಸೆಂಟರ್ ನ ಕಚೇರಿ ಸಿಬ್ಬಂದಿ ಹಾಜರಿದ್ದರು.