ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ನೇತೃತ್ವದಲ್ಲಿ ಭರ್ಜರಿ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ

1 min read

ಮೈಸೂರು: ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ ಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ದರಾಮಯ್ಯನವರ ಆದೇಶದ ಮೇರೆಗೆ ನನ್ನ ಮತ ಒಳಪಡುವ ಚಾಮರಾಜ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ 23 ರ ಸುಬ್ಬರಾಯನಕೆರೆ ಪಕ್ಕದ ದಿವಾನ್ಸ್ ರಸ್ತೆಯಲ್ಲಿ ಜರುಗಿದ ಕಾಂಗ್ರೆಸ್ ಸದಸ್ಯತ್ವ ಅಭಿಯಾನದಲ್ಲಿ ನಾನು ಸದಸ್ಯತ್ವ ಪಡೆಯುವ ಮೂಲಕ ಚಾಲನೆ ನೀಡಿದೆ.

ಇದೆ ವೇಳೆ ಮಾಜಿ ಪಾಲಿಕೆ ಸದಸ್ಯರಾದ ನಾಗಭೂಷಣ್,ಕಾಂಗ್ರೆಸ್ ಮುಖಂಡರಾದ ರಾಜೀವ್,ಮಂಜುನಾಥ್,ಮಹದೇವು,ಉತ್ತನಹಳ್ಳಿ ಶಿವಣ್ಣ,ಸಾಮಾಜಿಕ ಜಾಲತಾಣ ಉಸ್ತುವಾರಿ ಅರುಣ್ ಗಂಗಾಧರ್, ಐಟಿ ಸೆಲ್ ನಿರಾಲ್ ಹಾಜರಿದ್ದರು.ನಂತರದಲ್ಲಿ ನಾನು ಪ್ರತಿನಿಧಿಸುವ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೃಷ್ಣರಾಜ ಹಾಗೂ ದೇವರಾಜ ಅರಸು ಬ್ಲಾಕ್ ನಲ್ಲಿ 13 ಸ್ಥಳದಲ್ಲಿ ಅದೇ ವಾರ್ಡುಗಳ ಕಾಂಗ್ರೆಸ್ ಹಿರಿಯ ಮುಖಂಡರುಗಳು, ಪಾಲಿಕೆ ಸದಸ್ಯರು,ಮಾಜಿ ಮಹಾಪೌರರುಗಳು,ಮಾಜಿ ಸದಸ್ಯರು,ಕೆಪಿಸಿಸಿ ಸದಸ್ಯರು ಹಾಗೂ ಮಾಜಿ ನಿಗಮ ಮಂಡಳಿಗಳ ಅಧ್ಯಕ್ಷರು,ಮಾಜಿ ನಿರ್ದೇಶಕರುಗಳ ಉಪಸ್ಥಿತಿಯಲ್ಲಿ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ ಭರ್ಜರಿಯಾಗಿ ಜರುಗಿತು.

ಕೆ ಆರ್ ಕ್ಷೇತ್ರ ವ್ಯಾಪ್ತೀಯ ಕೃಷ್ಣರಾಜ ಹಾಗೂ ದೇವರಾಜ ಅರಸು ಬ್ಲಾಕ್ ಕಾಂಗ್ರೆಸ್ ಸಮಿತಿಯಡಿಲ್ಲಿ ಜರುಗಿದ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ನಡೆದ ಸ್ಥಳಗಳ ವಿವರ.

1.ಆರ್ ಟಿ ಓ ವೃತ್ತ – ಕೆಪಿಸಿಸಿ ಸದಸ್ಯರಾದ ಶ್ರೀಮತಿ ವೀಣಾ,ಭಾಸ್ಕರ್ ಮತ್ತು ತ್ಯಾಗರಾಜ್

2.ಹುಲ್ಲಿನಬೀದಿ ಆದಾಂಖಾನ್ ಮಸೀದಿ ವೃತ್ತ – ಹರೀಶ್,ಫಾರುಖ್,ವಿಜಯ್ ಕುಮಾರ್

3.ಗಾಡಿ ಚೌಕ – ಶಾದಿಖ್ ಉಲ್ಲಾ ರೆಹಮಾನ್

4.ಅಗ್ರಹಾರ ವೃತ್ತ – ಶ್ರೀನಾಥ್ ಬಾಬು

5.ಕಂಸಾಳೆ ಮಹದೇವಯ್ಯ ವೃತ್ತ- ಹೆಚ್ ಶೇಖರ್,ವಿನಯ್ ಕುಮಾರ್ ಜೆ,ಗುಣಶೇಖರ್,ವಸಂತ್ ನಾಯಕ್,ಶಿವಕುಮಾರ್

6.ಚಾಮುಂಡಿವನ – ಶ್ರೀಮತಿ ಶೋಭಾ ಸುನೀಲ್,ಎಂ ಸುನೀಲ್,ಶಂಕರ್

7.ಧರ್ಮಸಿಂಗ್ ಕಾಲೋನಿ -ನಾಗರತ್ನ ಮಂಜುನಾಥ್,ಮಾಜಿ ಮಹಾಪೌರ ನಾರಯಣ್,ಮಾಜಿ ಪಾಲಿಕೆ ಸದಸ್ಯ ಶಿವಣ್ಣ

8.ಅಶೋಕಪುರಂ 13ನೇ ಕ್ರಾಸ್ – ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಧರ್,ಮಾಜಿ ಪಾಲಿಕೆ ಸದಸ್ಯ ಪ್ರಭುಮೂರ್ತಿ,ಮಂಜುನಾಥ್

9.ಅಶೋಕಪುರಂ 4ನೇ ಕ್ರಾಸ್ -ಜೋಗಿ ಮಹೇಶ್,ಈಶ್ವರ ಚಕ್ಕಡಿ,ರವಿ,ದಾಸ್,ದೀನು

10.ಶ್ರೀರಾಂಪುರ ವಿವೇಕಾನಂದ ವೃತ್ತ – ವಿದ್ಯಾ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ,ರೂಪೇಶ್,ಮೊಗಣ್ಣಾಚಾರ್

11.ಎಂ ಬ್ಲಾಕ್ ಕುವೆಂಪುನಗರ -ಆನಂದ್,ಸಿದ್ದರಾಜು,ಶಾಂತಮ್ಮ

12.ತೊಣಚಿಕೊಪ್ಪಲು-ಜೆ ಗೋಪಿ ಪಾಲಿಕೆ ಸದಸ್ಯ

13.ಚಾಮರಾಜ ಜೋಡಿ ರಸ್ತೆ – ರಾಜೀವ್,ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ಮತ ಸೇರುವ ಬೂತ್

ಹೀಗೆ ಹಲವಾರು ಪ್ರದೇಶಗಳಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಜಿ ಸೋಮಶೇಖರ್,ಶ್ರೀಧರ್ ರವರ ಮಾರ್ಗದರ್ಶನದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.ಸಾಮಾಜಿಕ ಜಾಲತಾಣದ ಮೈಸೂರು ನಗರ ಕಾರ್ಯಾಧ್ಯಕ್ಷರುಗಳಾದ ಅರುಣ್ ಗಂಗಾಧರ್,ರಮ್ಯ ಎಲ್ಲಾ ರೀತಿಯ ಡಿಜಿಟಲ್ ಸಹಕಾರ ನೀಡಿದರು.ಕೆಪಿಸಿಸಿ ಯಿಂದ ವೀಕ್ಷಕರಾಗಿ ನೇಮಕಗೊಂಡಿದ್ದ ಶ್ರೀ ಚಂದ್ರಮೌಳಿ ರವರು ಕುವೆಂಪುನಗರದ ಎಂ ಬ್ಲಾಕ್ ಅಭಿಯಾನ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.ಇದೇ ವೇಳೆ ನಗರಾಧ್ಯಕ್ಷರಾದ ಆರ್ ಮೂರ್ತಿ,ಪ್ರಧಾನ ಕಾರ್ಯದರ್ಶಿ ಶಿವಣ್ಣ,ಸೇವಾದಳ ಗಿರೀಶ್, ಮೈಸೂರು ನಗರ ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಅತೆಸಾಮ್ ಮಹಮ್ಮದ್ ರವರು ಹಾಜರಿದ್ದರು.

13 ಕೇಂದ್ರಗಳಲ್ಲಿ ಕೆಪಿಸಿಸಿ ಸಾಮಾಜಿಕ ಜಾಲತಾಣದ ಜೂಮ್ ತಂತ್ರಾಂಶದಲ್ಲಿ ಸಂಪರ್ಕದಲ್ಲಿದ್ದು ನೋಂದಣಿ ಅಭಿಯಾನವನ್ನು ಗಮನಿಸಿದರು.ಆರ್ ಟಿ ಓ ವೃತ್ತದ ಅಭಿಯಾನದಲ್ಲಿ ಬಿಜೆಪಿಯಲ್ಲಿ ಸಕ್ರೀಯರಾಗಿದಾದ ವಿಜಯಲಕ್ಷ್ಮಿ ಹಾಗೂ ಅಂಬಿಕಾ ಎಂಬ ಮಹಿಳಾ ಮುಖಂಡರು ಪ್ರಾರಂಭದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆದರೆ,ಕಂಸಾಳೆ ಮಹದೇವಯ್ಯ ವೃತ್ತದಲ್ಲಿ ಪುಟ್ಟಮ್ಮ ಎಂಬ 68 ವರ್ಷದ ವೃದ್ಧೆ ಉತ್ಸಾಹದಿಂದ ಸದಸ್ಯತ್ವ ಪಡೆದಿದ್ದು ವಿಶೇಷವಾಗಿತ್ತು.

About Author

Leave a Reply

Your email address will not be published. Required fields are marked *