ಬಿಪಿನ್ ರಾವತ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಕೆ!

1 min read

ತಮಿಳುನಾಡಿನ ಕೂನೂರು ಬಳಿ ಹೆಲಿಕಾಪ್ಟರ್ ಅಪಘಾತದಲ್ಲಿ ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮತ್ತು ಹುತಾತ್ಮರಾದ 11 ವೀರ ಯೋಧರಿಗೆ ಕೆ.ಆರ್ ಕ್ಷೇತ್ರದ ಭಾಜಪಾ ವತಿಯಿಂದ ಇಂದು ಬೆಳಗ್ಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಎರಡು ನಿಮಿಷ ಮೌನಾಚಾರಣೆ ಮಾಡಿ, ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಶಾಸಕರಾದ ಎಸ್.ಎ.ರಾಮದಾಸ್ ಅವರು ನಿನ್ನೆ ನಡೆದ ಭೀಕರ ಘಟನೆ ನಿಜಕ್ಕೂ ಎಲ್ಲರನ್ನೂ ದುಃಖಿತರನ್ನಾಗಿ ಮಾಡಿದೆ. ಬಿಪಿನ್ ರಾವತ್ ಅವರು ತಮ್ಮ 20 ನೆ ವಯಸ್ಸಿನಲ್ಲಿಯೇ ಸೈನ್ಯವನ್ನು ಸೇರಿ 40 ವರ್ಷ ಸೇವೆಯನ್ನು ಸಲ್ಲಿಸಿದ್ದಾರೆ. ಅವರ ಸೇವೆಯನ್ನು ಪರಿಗಣಿಸಿ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಭಾರತದ ಮೊದಲ ಸೇನಾ ಪಡೆಗಳ ಮುಖ್ಯಸ್ಥರನ್ನಾಗಿ ಆಯ್ಕೆಮಾಡಿ ದೊಡ್ಡ ಜವಾಬ್ದಾರಿಯನ್ನು ನೀಡಿತ್ತು.

ಮೂರು ಸೇನೆಗಳ ಜವಾಬ್ದಾರಿಯನ್ನು ಹೊತ್ತು ಕಠಿಣ ಸಂದರ್ಭದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಚಾಕಚಕ್ಯತೆಯನ್ನು ಅವರು ಹೊಂದಿದ್ದರು. ವಿಶೇಷವಾಗಿ ಅವರ ತಂದೆ, ತಾತ ಕೂಡಾ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು ಎಂದು ಕೇಳಲು ಹೆಮ್ಮೆ ಎನಿಸುತ್ತದೆ. 2019 ರಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜ | ರಾವತ್ ಅವರನ್ನು ಅಮೆರಿಕದ ಆರ್ಮಿ ಕಮಾಂಡ್ ಮತ್ತು ಜನರಲ್ ಸ್ಟಾಫ್ ಕಾಲೇಜ್ ಇಂಟರ್‌ನ್ಯಾಷನಲ್ ಹಾಲ್ ಆಫ್ ಫೇಮ್‌ಗೆ ಸೇರಿಸಲಾಯಿತು ಹಾಗೂ ನೇಪಾಳ ಸೇನೆಯ ಗೌರವ ಜನರಲ್ ಕೂಡ ಆಗಿದ್ದರು ಎಂಬುದು ಭಾರತಕ್ಕೇ ಹೆಮ್ಮೆ ತರುವ ವಿಷಯವಾಗಿದೆ.

  • ನಾವು ಕೆ.ಆರ್ ಕ್ಷೇತ್ರದಲ್ಲಿ ಥೀಮ್ ಆಧಾರದಲ್ಲಿ ಪಾರ್ಕ್ ಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಅದೇ ರೀತಿ ಆರ್ಮಿ ಪಾರ್ಕ್ ನಿರ್ಮಿಸಿ ಅದರ ಉದ್ಘಾಟನೆಗೆ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಹಾಗೂ ಜನರಲ್ ಬಿಪಿನ್ ರಾವತ್ ಅವರನ್ನು ಕರೆಯಬೇಕು ಎಂದುಕೊಂಡಿದ್ದೆವು, ಆದರೆ ವಿಧಿ ಆಟ ಬೇರೆ ಇತ್ತು ಎನಿಸುತ್ತದೆ. ಹಾಗಾಗಿ ಇಂದು ನಿರ್ಧಾರ ಮಾಡಿದ್ದೇವೆ ಆ ಪಾರ್ಕ್ ಗೆ ಬಿಪಿನ್ ರಾವತ್ ಅವರ ಹೆಸರಿಟ್ಟು ಅವರ ಸೇವೆಯ ವಿಚಾರವನ್ನು ಅಲ್ಲಿ ತರುವವರಿದ್ದೇವೆ ಇದರಿಂದ ಮುಂದಿನ ಪೀಳಿಗೆಗೆ ಒಂದು ಸಂದೇಶ ನೀಡುವ ಕಾರ್ಯವಾಗುತ್ತದೆ ಎಂಬುದು ನಮ್ಮ ಆಶಯವಾಗಿದೆ. ಅವರ ಆತ್ಮಕ್ಕೆ ಹಾಗೂ ಅವರೊಂದಿಗೆ ಮೃತಪಟ್ಟ ಎಲ್ಲಾ ಸೇನಾಧಿಕಾರಿಗಳ ಆತ್ಮಕ್ಕೆ ಭಗವಂತ ಚಿರ ಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸೋಣ ಎಂದರು.

ಸದರಿ ಕಾರ್ಯಕ್ರಮದಲ್ಲಿ ಕೆ.ಆರ್ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಎಂ.ವಡಿವೇಲು, ಪ್ರಧಾನ ಕಾರ್ಯದರ್ಶಿ ಓಂ ಶ್ರೀನಿವಾಸ್, ಕೆ.ಆರ್ ಕ್ಷೇತ್ರದ ಭಾಜಪಾ ಉಪಾಧ್ಯಕ್ಷರಾದ ಜೆ.ರವಿ, ದೇವರಾಜೇ ಗೌಡರು, ರಾಜ್ಯ ಒಬಿಸಿ ಕಾರ್ಯಕಾರಿಣಿ ಸದಸ್ಯ ಮೈ.ಪು.ರಾಜೇಶ್, ಎಸ್.ಸಿ. ಮೋರ್ಚಾ ನಗರಾಧ್ಯಕ್ಷರಾದ ಈಶ್ವರ್, ಕಾರ್ಯದರ್ಶಿಗಳಾದ ಪಿ.ಟಿ.ಕೃಷ್ಣ(ನಗರಪಾಲಿಕಾ ನಾಮನಿರ್ದೇಶಿತ ಸದಸ್ಯರು), ಗಿರೀಶ್ ಗೌಡ, ನಾಗರತ್ನ , ಬಿಎಲ್ಎ 1 ಆದ ಪ್ರಸಾದ್ ಬಾಬು ಪ್ರಮುಖರಾದ ನೂರ್ ಫಾತಿಮಾ, ಅನ್ನಪೂರ್ಣ, ಮುರುಳಿ, ನಾಗಶಂಕರ್, ಜಯಂತಿ, ನಗಾರಾಜ್, ಮಧು ,ಆದರ್ಶ
ಇನ್ನಿತರರು ಹಾಜರಿದ್ದರು.

About Author

Leave a Reply

Your email address will not be published. Required fields are marked *