ಪರಿಷತ್ ಚುನಾವಣೆ ಹಿನ್ನೆಲೆ- ಮದ್ಯ ಮಾರಾಟಕ್ಕೆ ಬ್ರೇಕ್! ಸಂತೆ, ಜಾತ್ರೆ ಇಲ್ಲ- 144 ಸೆಕ್ಷನ್ ಜಾರಿ!

1 min read

MYSURU : ವಿಧಾನ ಪರಿಷತ್ ಚುನಾವಣೆಯ ಮತದಾನ ಹಿನ್ನಲೆಯಲ್ಲಿ ಡಿ.10ರಂದು ಮದ್ಯ ಮಾರಾಟ ನಿಷೇಧಿಸಿ‌ ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ. ನಾಳೆ ಸಂಜೆ 4 ರಿಂದ ಡಿ.10ರ ಮಧ್ಯರಾತ್ರಿ 12ರ ವರೆಗು ಮದ್ಯ ಮಾರಾಟ ನಿಷೇಧ ಮಾಡಿ ಆದೇಶ ಹೊರಡಿಸಿದ್ದಾರೆ. ಜೊತೆಯಲ್ಲಿ ಸಂತೆ ಹಾಗೂ ಜಾತ್ರೆಯನ್ನು ನಿಷೇಧ‌ ಮಾಡಿ ಆದೇಶ ಹೊರಡಿಸಿದ್ದಾರೆ.

ಅಲ್ಲದೆ ಮತದಾರರು, ಶಾಂತಿಯುತವಾಗಿ ಮತದಾನ ಮಾಡುವ ಸಲುವಾಗಿ ಮದ್ಯಮಾರಾಟ ನಿಷೇಧ ಮಾಡಲಾಗಿದೆ. ಮದ್ಯದಂಗಡಿ ಮಾಲೀಕರು ಈ ಕಟ್ಟುನಿಟ್ಟಿನ ನಿಯಮ ಪಾಲಿಸುವಂತೆ ಸೂಚನೆ ನೀಡಿದ್ದು, ಡಿ.9 ರ ಮಧ್ಯರಾತ್ರಿ 12ರಿಂದ ಡಿ.10 ರ ಮಧ್ಯರಾತ್ರಿ 12ರ ವರೆಗೆ 144 ಸೆಕ್ಷನ್ ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ‌.

About Author

Leave a Reply

Your email address will not be published. Required fields are marked *