ಮೈಸೂರು – ಕೇರಳ ಗಡಿಯಲ್ಲಿ ಹೈ ಅಲರ್ಟ್!

1 min read

ಕೇರಳ ಮತ್ತು ಕರ್ನಾಟಕ ಗಡಿ ಭಾಗವಾದ ಮೈಸೂರಿನ ಎಚ್‌ಡಿ ಕೋಟೆಯ ಬಾವಲಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ತೀವ್ರವಾಗಿದ್ದು, ಪ್ರತಿನಿತ್ಯವೂ ತಾಲೂಕು ಅಧಿಕಾರಿಗಳು ಗಡಿಭಾಗದಲ್ಲಿ ರೌಂಡ್ಸ್ ಹಾಕ್ತಿದ್ದಾರೆ.

ಹೌದು, ಇಂದು ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ಗಡಿ ಭಾಗ ಬಾವಲಿಗೆ ಭೇಟಿ ನೀಡಿ ಕೋರೋನ ವೈರಸ್ ಮತ್ತು ನೋರೋ ವೈರಸ್ ಬಗ್ಗೆ ಪರಿಶೀಲನೆ ನಡೆಸಿದರು. ಈ ವೇಳೆ ಸಾಕಷ್ಟು ಜನರು ಮೊಬೈಲ್‌‌ನಲ್ಲೇ ಕೋವಿಡ್ ನೆಗೆಟಿವ್ ರಿಪೋರ್ಟ್ ತಂದಿದ್ದರು. ಈ ವೇಳೆ ಅದನ್ನು ಸಹ ಸ್ಕ್ಯಾನ್ ಮಾಡಿ ಅದು ನಕಲಿಯಾ ಅಥವಾ ಅಸಲಿಯಾ ಎಂದು ತಪಾಸಣೆ ಮಾಡಿದರು. ಈ ವೇಳೆ ಬೀಚನಹಳ್ಳಿಯ ಪೊಲೀಸರು ಸೇರಿ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ರವಿಕುಮಾರ್ ಅವರು, ಕೋವಿಡ್ ವೈರಸ್ ಮತ್ತು ನೊರೋ ವೈರಸ್ ಬಗ್ಗೆ ಎಚ್ಚರಿಕೆ ವಹಿಸುತ್ತಿದ್ದೇವೆ. 72 ಗಂಟೆಗಳಲ್ಲಿ ಕೋವಿಡ್ ಟೆಸ್ಟ್ ಆಗಿ ನೆಗೆಟಿವ್ ರಿಪೋರ್ಟ್ ಇರುವವರನ್ನು QR ಬಾರ್ ಕೋಡಿಂಗ್ ನಿಂದ ಪರಿಶೀಲನೆ ನಡೆಸಲಾಗುತ್ತಿದೆ. ನಿತ್ಯವೂ ಬೆಳ್ಳಗೆ 6 ಗಂಟೆಯಿಂದ ಸಂಜೆ 6ರ ತನಕ ಎಲ್ಲಾ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದೇವೆ.

ವಾಹನದಲ್ಲಿ ಓಡಾಡುವ ಎಲ್ಲ ಜನರು ಹೆಸರುಗಳನ್ನು ನೊಂದಣಿ ಮಾಡಿ ಜಿಲ್ಲಾ ಸರ್ವೇಕ್ಷಣಾದಿಕಾರಿಗಳ ಕಚೇರಿಗೆ ವರದಿಯನ್ನು ನೀಡಿದ್ದೇವೆ. ಅವರು ಎಲ್ಲರಿಗೂ ದೂರವಾಣಿ ಮೂಲಕ ಕರೆ ಮಾಡಿ ಕ್ರಮ ಕೈಗೊಳ್ಳುತ್ತಿದ್ದಾರೆ. ಕೋವಿಡ್ ಮತ್ತು ನೂರೋ ವೈರಸ್ ಬಗ್ಗೆ ಎಲ್ಲಾ ರೀತಿಯ ಮುನ್ನೆಚರಿಕೆ ಕ್ರಮ ವಹಿಸುತಿದೇವೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

About Author

Leave a Reply

Your email address will not be published. Required fields are marked *