ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನಲೆ… ತಿ. ನರಸೀಪುರ ಕ್ಷೇತ್ರದಲ್ಲಿ ಸಭೆ ನಡೆಸಿದ ಶಾಸಕ ರಾಮದಾಸ್
1 min readತಿ. ನರಸೀಪುರ: ಡಿಸಂಬರ್ 10 ನೇ ತಾರೀಕು ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ದೃಷ್ಟಿಯಿಂದ ತಿ ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಕ್ಷೇತ್ರದ ಉಸ್ತುವಾರಿಗಳಾದ ಶಾಸಕರು ಹಾಗೂ ಮಾಜಿ ಸಚಿವರಾದ ಎಸ್.ಎ ರಾಮದಾಸ್ ಅವರು ಸಭೆಯನ್ನು ತೆಗೆದುಕೊಂಡರು. ಸೋಸಲೆ ಮಹಾಶಕ್ತಿ ಕೇಂದ್ರದ ನೆರೆಕ್ಯಾತನಹಳ್ಳಿ ಯಲ್ಲಿ ಶಕ್ತಿಕೇಂದ್ರದ ವ್ಯಾಪ್ತಿಗೆ ಒಳಪಡುವ ಪಂಚಾಯಿತಿ ಸದಸ್ಯರ ಹಾಗೂ ಭಾಜಪಾ ಪ್ರಮುಖರ ಸಭೆಯನ್ನು ನಡೆಸಿದರು.
ಒಟ್ಟು ನೂರು ಜನ ಗ್ರಾಮ ಪಂಚಾಯಿತಿ ಸದಸ್ಯರಲ್ಲಿ 72 ಜನ ಖುದ್ದಾಗಿ ಹಾಜರಾಗಿದ್ದರು ಅವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ತಿಳಿಸಿ ಅದನ್ನು ಹೇಗೆ ಜನರಿಗೆ ತಲುಪಿಸಬೇಕು ಎಂದು ತಿಳಿಸಿದರು ಹಾಗೂ ಮೊದಲನೇ ಪ್ರಾಶಸ್ತ್ಯದ ಮತವನ್ನು ಭಾಜಪಾ ಅಭ್ಯರ್ಥಿ ರಘು ಕೌಟಿಲ್ಯ ಅವರಿಗೆ ನೀಡುವಂತೆ ಮನವಿ ಮಾಡಿದರು ಅದಕ್ಕೆ ಗ್ರಾಮ ಪಂಚಾಯಿತಿ ಸದಸ್ಯರು ಪೂರಕವಾಗಿ ಸ್ಪಂದಿಸಿರುತ್ತಾರೆ.
ನಂತರ ನೆರೆ ಕ್ಯಾತನಹಳ್ಳಿ ಯಲ್ಲಿ ಸೋಸಲೆ ಮಹಾ ಶಕ್ತಿಕೇಂದ್ರದ ಒಟ್ಟು 42 ಬೂತ್ ಅಧ್ಯಕ್ಷರ ಸಭೆಯನ್ನು ನಡೆಸಲಾಯಿತು. ಬೂತ್ ಅಧ್ಯಕ್ಷರಿಗೆ ಯಾವ ರೀತಿ ಮತದಾರನ ಮುಂದೆ ಹೋಗಬೇಕು ನಿಟ್ಟಿನಲ್ಲಿ ಶೀಘ್ರದಲ್ಲೇ ಒಂದು ಕಾರ್ಯಗಾರವನ್ನು ಸಹ ಮಾಡುವುದಾಗಿ ಆ ನಿಟ್ಟಿನಲ್ಲಿ ಬೂತ್ ಅಧ್ಯಕ್ಷರು ತಮ್ಮ ಜವಾಬ್ದಾರಿಯಿಂದ ಪಕ್ಷವನ್ನು ಬಲಪಡಿಸುವಂತೆ ಬೂತ್ ಅಧ್ಯಕ್ಷರ ಸಭೆಯಲ್ಲಿ ತಿಳಿಸಿದರು.
ಸದರಿ ಕಾರ್ಯಕ್ರಮದಲ್ಲಿ ತಿ ನರಸೀಪುರ ಬಿಜೆಪಿ ಅಧ್ಯಕ್ಷರಾದ ಲೋಕೇಶ್, ಮಾಜಿ ವಿಧಾನಪರಿಷತ್ ಸದಸ್ಯರಾದ ಸಿ ರಮೇಶ್, ತೋಟದಪ್ಪ ಬಸವರಾಜ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಲೋಕೇಶ್, ಸಿದ್ಧಮಲ್ಲಪ್ಪ, ಪ್ರಮುಖರಾದ ಪುಟ್ಟಸ್ವಾಮಿ, ಲಕ್ಷ್ಮಣ್ ಇನ್ನುಳಿದ ಪ್ರಮುಖರು ಹಾಜರಿದ್ದರು