ನಂದಿನಿ ಉತ್ಪನ್ನಗಳ ಪ್ಯಾಕೆಟ್ ಮೇಲೆ ಅಪ್ಪು ಭಾವಚಿತ್ರಕ್ಕಾಗಿ ಅಭಿಮಾನಿಗಳ ಅಭಿಯಾನ!

1 min read

ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಪುನೀತ್ ರಾಜಕುಮಾರ್ ಭಾವಚಿತ್ರವನ್ನು ಮುದ್ರಿಸುವಂತೆ ಸರ್ಕಾರ ಹಾಗು KMFಗೆ ಅಭಿಮಾನಿಗಳು ಮನವಿ ಮಾಡ್ತಿದ್ದಾರೆ. ಡಾ.ರಾಜಕುಮಾರ್ ಸರ್ ನಂತರ KMF ನಂದಿನಿ ಉತ್ಪನ್ನಗಳ ರಾಯಭಾರಿಯಾಗಿದ್ದ ಪುನೀತ್ ರಾಜಕುಮಾರ್ ಅವರ ಸವಿ ನೆನಪಿಗಾಗಿ ಎಲ್ಲ ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಅವರ ಭಾವ ಚಿತ್ರವನ್ನು ಮುದ್ರಿಸಲು ಸರ್ಕಾರ ಮತ್ತು KMF ಗೆ ಅಭಿಮಾನಿಗಳ ಒತ್ತಾಯ ಕೇಳಿ ಬಂದಿದೆ.

KMF ರಾಯಭಾರಿಯಾಗಿ ಡಾ ರಾಜಕುಮಾರ್ ಅವರಾಗಲಿ ಪುನೀತ್ ರಾಜಕುಮಾರ್ ಅವರಾಗಲಿ ಯಾವುದೇ ಸಂಭಾವನೆ ಪಡೆಯದೆ KMFನ ಜಾಹೀರಾತಿನಲ್ಲಿ ಭಾಗಿಯಾಗಿದ್ರು. ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು ನಂದಿನಿ ಹಾಲು ಪ್ಯಾಕೆಟ್ ಮೇಲೆ ಮುದ್ರಿಸಿದರೆ ಅವರಿಗೆ ಗೌರವ ಸೂಚಿಸುವಂತೆ ಆಗುತ್ತೆ. ಇದು ಗ್ರಾಹಕರಿಗೆ ಖುಷಿಯಾಗುವುದರ ಜೊತೆಗೆ ನಂದಿನಿ ಹಾಲಿನ ಮಾರಾಟದ ಪ್ರಮಾಣವು ಏರಿಕೆಯಾಗುತ್ತದೆ ಅಂತ ಅಭಿಮಾನಿಗಳು ಅಭಿಯಾನ ಆರಂಭಿಸಿದ್ದಾರೆ.

About Author

Leave a Reply

Your email address will not be published. Required fields are marked *