ಮೈಸೂರಿನಲ್ಲಿ ಇನ್ಮುಂದೆ ಕರ್ತವ್ಯದ ವೇಳೆ ಪ್ರಾಂಶುಪಾಲರು ಉಪನ್ಯಾಸಕರು, ಟೀ-ಶರ್ಟ್- ಜೀನ್ಸ್ ಪ್ಯಾಂಟ್ ಧರಿಸಿ ಕಾರ್ಯ ನಿರ್ವಹಿಸುವಂತಿಲ್ಲ!
1 min readಮೈಸೂರು ಜಿಲ್ಲೆಯಲ್ಲಿ ಶಿಕ್ಷಕರು ಜೀನ್ಸ್ ಪ್ಯಾಂಟ್ ಹಾಗೂ ಟಿ ಶರ್ಟ್ ಹಾಕುವಂತಿಲ್ಲ ಎಂದು ಅಧಿಕೃತ ಆದೇಶ ಹೊಡರಿಸಲಾಗಿದೆ. ಕರ್ತವ್ಯದಲ್ಲಿ ಇರುವಾಗ ಸಿಬ್ಬಂದಿಗಳ್ಯಾರು ಕೂಡ ಟೀ ಶರ್ಟ್ ಅಥವಾ ಜೀನ್ಸ್ ಪ್ಯಾಂಟ್ ಧರಿಸದಂತೆ ಡಿಡಿಪಿಯು ಶ್ರೀನಿವಾಸ್ ಮೂರ್ತಿ ಆದೇಶ ಹೊರಡಿಸಿದ್ದಾರೆ.
ಜಿಲ್ಲಾ ಉಪನಿರ್ದೇಶಕರ ಕಚೇರಿ ಮತ್ತು ಕಾಲೇಜುಗಳಲ್ಲಿ ಪ್ರಾಂಶುಪಾಲರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗೆ ಈ ಆದೇಶ ಅನ್ವಯಿಸಲಿದ್ದು, ಕರ್ತವ್ಯದ ವೇಳೆ ಟಿ – ಷರ್ಟ್ ಹಾಗು ಜೀನ್ಸ್ ಪ್ಯಾಂಟ್ ಗಳನ್ನು ಧರಿಸುವುದನ್ನು ನಿರ್ಬಂಧಿಸಲಾಗಿದೆ. ಜಿಲ್ಲಾಧಿಕಾರಿಗಳ ಮೌಖಿಕವಾಗಿ ಸೂಚನೆ ಮೇರೆಗೆ ಈ ಆದೇಶ ಹೊರಡಿಸಿದ್ದು, ಮುಂದೆ ಎಲ್ಲರು ಈ ಸೂಚನೆ ಪಾಲಿಸುವಂತೆ ತಿಳಿಸಲಾಗಿದೆ.