ರಮೇಶ್ ಉತ್ತಪ್ಪರಿಗೆ ಮೈಸೂರು ರಾಜ್ಯೋತ್ಸವ ಪ್ರಶಸ್ತಿ: ಸಾಹಿತ್ಯ, ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗೆ ಪುರಸ್ಕಾರ

1 min read

ಮೈಸೂರು: ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರಿಗೆ ಈ ಬಾರಿಯ ಮೈಸೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭ್ಯವಾಗಿದೆ.

ಮೈಸೂರು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ನೀಡುವ ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಪತ್ರಿಕೋದ್ಯಮ ಹಾಗೂ ಸಾಹಿತ್ಯ ವಿಭಾಗದಲ್ಲಿ ರಮೇಶ್ ಉತ್ತಪ್ಪ ಭಾಜನರಾಗಿದ್ದಾರೆ.

ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ನ. 1 ರಂದು ಬೆ.8.30ಕ್ಕೆ ಗಂಟೆಗೆ ನಡೆಯಲಿರುವ ರಾಜ್ಯೋತ್ಸವ ಸಮಾರಂಭದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮೈಸೂರು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಮುಖ್ಯ ವರದಿಗಾರರಾಗಿರುವ ಐತಿಚಂಡ ರಮೇಶ್ ಉತ್ತಪ್ಪ ಅವರು ಇಲ್ಲಿಯವರೆಗೆ 29 ಕೃತಿಗಳನ್ನು ರಚಿಸಿದ್ದಾರೆ. ಆನೆ ಲೋಕದ ವಿಸ್ಮಯದ ಕುರಿತು ಇತ್ತೀಚೆಗಷ್ಟೆ ನಾಲ್ಕು ಕೃತಿಗಳು ಬಿಡುಗಡೆಯಾಗಿದ್ದವು.

ಮಡಿಕೇರಿ, ಬೆಂಗಳೂರು ಹಾಗೂ ಮೈಸೂರಿನಲ್ಲಿ ರಾಜ್ಯಮಟ್ಟದ ಪತ್ರಿಕೆ ಹಾಗೂ ಟಿವಿಗಳಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ ಅವರಿಗೆ ಇಲ್ಲಿಯವರೆಗೆ “ಕರುನಾಡ ರತ್ನ’’, “ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ’’, “ವಿದ್ಯಾನಿಧಿ ಪ್ರಶಸ್ತಿ’’, ಮೈಸೂರು ಹಾಗೂ ಕೊಡಗು ಜಿಲ್ಲೆಯ “ಅತ್ಯುತ್ತಮ ವರದಿಗಾರ ಪ್ರಶಸ್ತಿ’’ ಹಾಗೂ ಪತ್ರಿಕೋದ್ಯಮದಲ್ಲಿ ರಾಜ್ಯಮಟ್ಟದ 10 ಪ್ರಶಸ್ತಿ, ಕೊಡವ ಸಾಕ್ಷö್ಯ ಚಿತ್ರಕ್ಕೆ ಚಿನ್ನದ ಪದಕ ಸೇರಿದಂತೆ ಹಲವು ಪುರಸ್ಕಾರಗಳನ್ನು ಪಡೆದಿದ್ದಾರೆ.

ಕೊಡವ ಹಾಗೂ ಕನ್ನಡ ಭಾಷೆಯಲ್ಲಿ ಹಲವು ಅಧ್ಯಯನ ಕೃತಿಗಳು, ಮಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಡಿಪ್ಲೊಮೊಗೆ ಕೊಡವ ಪಠ್ಯ ಪುಸ್ತಕ ರಚಿಸಿದ್ದಾರೆ. ರಂಗಭೂಮಿಯಲ್ಲಿ 300 ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದು, ಹಲವು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ಹಲವು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಪರಿಸರ ಗೀತೆ ಜಾಗೃತಿ ಹಾಗೂ ಸ್ವಚ್ಛತಾ ಆಂದೋಲದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಈ ಎಲ್ಲಾ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ಪ್ರಕಟಿಸಲಾಗಿದೆ.

About Author

Leave a Reply

Your email address will not be published. Required fields are marked *