ಪುನೀತ್ ಸಹಾಯಕ್ಕೆ ಸಣ್ಣ ಉದಾಹರಣೆ ಇದು- ದೊಡ್ಮನೆಯ ದೊಡ್ಡತನ!
1 min readನಿನ್ನೆ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಾವಿರಾರು ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ. ಆದರೆ ಅವರು ಮಾಡುವ ಸಹಾಯ ತಮ್ಮ ಎಡಗೈಗು ಕೂಡ ಗೊತ್ತಾಗೋದಿಲ್ಲ. ಇಂತಹದರಲ್ಲಿ 2017ರಲ್ಲಿ ಅವರು ಮಾಡಿದ ಒಂದು ಅಪರೂಪದ ಸಹಾಯ ನಾವ್ ಹೇಳ್ತೀವಿ ಕೇಳಿ.
ಅದು 2017 ವರ್ಷ. ಪುನೀತ್ ಅವರಿಗೆ ಒಂದು ವಿಚಾರ ಗಮನಕ್ಕೆ ಬರುತ್ತೆ. ಅದು ತಂದೆಯೊಬ್ಬರು ಮಗಳಿಗೆ ತನ್ನ ಕಿಡ್ನಿ ನೀಡಿ ಮಗಳನ್ನ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆಂಬ ವಿಚಾರ. ಇದು ಗೊತ್ತಾದ ಕೂಡಲೇ ಅವರಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ತಕ್ಷಣವೇ ನೆರವಾದರು.
ಅವರ ಹಿನ್ನಲೆ ಏನು? ಅವರ ಮನೆಯ ಪರಿಸ್ಥಿತಿ ಏನು ? ಇದೆಲ್ಲವನ್ನು ಗಮನಿಸಿ ಆ ಕುಡುಂಬಕ್ಕೆ ಬರೋಬ್ಬರಿ 15 ಲಕ್ಷದ ಹಣ ನೀಡಿ ಯಾರಿಗು ತಿಳಿಸದಂತೆ ಹಾಗೂ ಈ ವಿಚಾರ ಎಲ್ಲಿಯು ಹೇಳದಂತೆ ತಿಳಿಸಿದ್ದರಂತೆ.
ಆ ವಿಚಾರ ಏನು ಅಂದ್ರೆ, ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದ ಪ್ರೀತಿ ಎಂಬ ಬಾಲಕಿಗೆ ಆರೋಗ್ಯದ ಸಮಸ್ಯೆ ಎದುರಾಗಿರುತ್ತೆ. ಪ್ರೀತಿಗೆ ಎರಡು ಕಿಡ್ನಿಗಳು ವೈಫಲ್ಯವಾಗಿ ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದರು.
ಮಗಳ ಕಷ್ಟ ಕಂಡಿದ್ದ ಪ್ರೀತಿಯ ತಂದೆಯೇ ಒಂದು ಕಿಡ್ನಿ ನೀಡಿ ಮಗಳನ್ನ ಉಳಿಸಿಕೊಳ್ಳುವ ಯತ್ನ ಮಾಡಿದ್ದರು. ಆದರೆ ಉಳಿದ ಚಿಕಿತ್ಸೆ ಇಲ್ಲದೇ ಪರದಾಡುತ್ತಿದ್ದ ಪ್ರೀತಿಗೆ ನೆರವಾಗಿದ್ದು ಪುನೀತ್. 2017ರಲ್ಲಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಸುಮಾರು 15 ಲಕ್ಷ ಖರ್ಚು ಮಾಡಿ ಪುನೀತ್ ಅವರು ಪ್ರೀತಿಗೆ ಚಿಕಿತ್ಸೆ ಕೊಡಿಸಿದ್ದರು. ಆದರೆ ಈ ವಿಚಾರ ಯಾರಿಗು ಹೇಳದಂತೆ ತಿಳಿಸಿದ್ದರು ಅನ್ನೋದು ದೊಡ್ಮನೆಯ ದೊಡ್ಡ ಗುಣ ಅಂದರೆ ತಪ್ಪಿಲ್ಲ.