ಮೈಸೂರಿನಲ್ಲಿ ಚಲಿಸುವ ಕಾರಿನ ಟೈರ್ ಸಿಡಿದು ಅಮ್ಮ ಮಗ ಸಾವು!
1 min readಮೈಸೂರು : ಕಾರಿನ ಟೈರ್ ಸಿಡಿದು ಕಾರು ಅಪಘಾತವಾಗಿ ತಾಯಿ ಮಗ ಕಾರಿನಲ್ಲೆ ಸಾವನ್ನಪ್ಪಿದ ಘಟನೆ ಮೈಸೂರಿನ ದಟ್ಟಗಳ್ಳಿಯ ರಿಂಗ್ ರಸ್ತೆಯ ಬಳಿ ನಡೆದಿದೆ. 12 ವರ್ಷದ ದೈವಿಕ್, 35 ವರ್ಷದ ಗುಣಲಕ್ಷ್ಮಿ ಮೃತಪಟ್ಟಿದೆ. ಘಟನೆಯಲ್ಲಿ ಕಾರು ಚಾಲನೆ ಮಾಡುತ್ತಿದ್ದ ಪತಿ ಜಗದೀಶ್ಗೆ ಸಣ್ಣಪುಟ್ಟ ಗಾಯವಾಗಿದ್ದು, ಇಂದು ಮುಂಜಾನೆ 4.30 ಸಮಯದಲ್ಲಿ ಘಟನೆ ನಡೆದಿದೆ.
ಕಾರಿನ ಮುಂಭಾಗದ ಟೈರ್ ಗಳು ಸಿಡಿದು ಕಂಬಕ್ಕೆ ಗುದ್ದಿದೆ. ಈ ವೇಳೆ ಅಮ್ಮ ಮಗ ಇಬ್ಬರು ಮೃತಪಟ್ಟಿದ್ದಾರೆ. ಸದ್ಯ ಮೈಸೂರಿನ ಕುವೆಂಪು ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.