ಇವರೇ ಮೈಸೂರಿಗೆ ಬಂದ ವಿಶೇಷ ಅತಿಥಿಗಳು!
1 min readಮೈಸೂರು: ಮೈಸೂರು ಅಂದ್ರೆ ಅಲ್ಲೊಂದು ಸಂಭ್ರಮ ಇರುತ್ತೆ. ಈ ಸಂಭ್ರಮ ಇಲ್ಲಿನ ಸಂಸ್ಕೃತಿ, ನಗರ, ಜನರು, ಪ್ರವಾಸೋದ್ಯಮ, ಭಕ್ತಿ. ಇಂತಹ ಅದ್ಭುತವಾದ ಮೈಸೂರಿಗೆ ಪ್ರವಾಸಿಗರ ಜೊತೆ ಹೊಸ ಅತಿಥಿಗಳ ಆಗಮನವು ಆಗುತ್ತೆ. ಆ ಅತಿಥಿಗಳನ್ನ ನೋಡೋಕೆ ಸಾವಿರಾರು ಸಂಖ್ಯೆಯ ಪ್ರವಾಸಿಗರು ಬರ್ತಾರೆ.
ಇದೀಗಾ ಪ್ರವಾಸಿಗರಿಗೆ ಈ ಹೊಸ ಅತಿಥಿಗಳ ದರ್ಶನ ಕೆಲವೇ ದಿನದಲ್ಲಿ ಆಗಲಿದೆ. ಆದರೆ ಅದಕ್ಕು ಮುನ್ನವೇ ಆ ವಿಶೇಷ ಅತಿಥಿಗಳನ್ನ ‘ನನ್ನೂರು ಮೈಸೂರು’ ತಂಡ ನಿಮಗೆ ಪರಿಚಯಿಸುತ್ತಿದೆ. ಎಸ್ ಇವರೇ ಮೈಸೂರು ಮೃಗಾಲಯಕ್ಕೆ ಜರ್ಮನಿ, ಸಿಂಗಾಪುರ ಹಾಗೂ ಮಲೇಷಿಯಾದಿಂದ ಆಗಮಿಸಿದ ನೂತನ ಅತಿಥಿಗಳು. ಎರಡು ಗೋರಿಲ್ಲ, ನಾಲ್ಕು ಒರಂಗೋಟಾ ಇದೀಗಾ ಮೈಸೂರು ಮೃಗಾಲಯಕ್ಕೆ ಆಗಮಿಸಿದೆ. ಮೈಸೂರಿಗೆ ಬಂದಿಳಿದ ಅತಿಥಿಗಳನ್ನ ಇದೀಗಾ ಕ್ವಾರೈಂಟೈನ್ ಮಾಡಲಾಗಿದೆ.
ಜಯಚಾಮರಾಜೇಂದ್ರ ಮೃಗಾಲಯಕ್ಕೆ ಬಂದಿಳಿದ ಅತಿಥಿಗಳನ್ನ ನಿಗಾ ವಹಿಸಲಾಗಿದೆ. ಪ್ರಾಣಿಗಳ ವಿನಿಮಯ ಪದ್ದತಿಯಡಿ ಆಗಮಿಸಿವೆ ಈ ಗೊರಿಲ್ಲ ಹಾಗೂ ಒರಂಗೋಟಾ. ಇನ್ನು ಪ್ರಾಣಿ ವಿನಿಮಯ ಅಂದ್ರೆ ಅಲ್ಲಿಂದ ಪಡೆಯೋದು ಮಾತ್ರವಲ್ಲ. ನಮ್ಮಿಂದಲು ಕೊಂಚ ಹೆಚ್ಚುವರಿ ಆಗಿರುವ ಪ್ರಾಣಿಗಳು. ಅಥವಾ ಆ ದೇಶಕ್ಕೆ ಬೇಕಾದ ವಿಶೇಷವಾದ ಪ್ರಾಣಿ ಪಕ್ಷಿ. ಸಂತತಿ ಕ್ಷೀಣಿಸುತ್ತ ಇರುವ ಪ್ರಾಣಿಗಳ ರಕ್ಷಣೆ ಮಾಡೋ ಪ್ರಾಣಿ ಪಕ್ಷಿಗಳನ್ನ ಕೊಡಬೇಕು. ಅದರಂತೆ ನಮ್ಮಿಂದ ಜಿರಾಫೆಯನ್ನು ನೀಡಿ ಒರಂಗೋಟಾ ಹಾಗೂ ಗೊರಿಲ್ಲ ಪಡೆಯಲಾಗಿದೆ.
ಮಲೇಶಿಯಾ, ಸಿಂಗಪೂರ್ನಿಂದ ತಲಾ 2 ಗೋರಿಲ್ಲಾಗಳು ಹಾಗೂ ಜರ್ಮನಿಯಿಂದ ಗೊರಿಲ್ಲ ಬಂದಿವೆ. 50 ವರ್ಷಗಳ ನಂತರ ಮೈಸೂರು ಮೃಗಾಲಯಕ್ಕೆ ಬಂದಿರುವ ಒರಂಗೋಟಾ. 8 ವರ್ಷಗಳ ನಂತರ ಈ ಗೋರಿಲ್ಲ ಮೈಸೂರಿಗೆ ಹೊಸದಾಗಿ ಆಗಮಿಸಿವೆ. ಸದ್ಯ ದೂರದ ಊರಿಂದ ಬಂದ ಈ ಪ್ರಾಣಿಗಳು ಮೃಗಾಲಯದಲ್ಲಿ ರೆಸ್ಟ್ ಮಾಡ್ತಿವಿ. ಕೋವಿಡ್ ಹಿನ್ನಲೆ ಪ್ರತ್ಯೇಕವಾಗಿ ಈ ವಿಶೇಷ ಅತಿಥಿಗಳನ್ನ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಸದ್ಯ ಮೈಸೂರಿನ ವಾತಾವರಣಕ್ಕೆ ಈ ಪ್ರಾಣಿಗಳು ಹೊಂದಿಕೊಳ್ಳಬೇಕಿದೆ.