ನಗರಪಾಲಿಕೆ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಕಾಂಗ್ರೆಸ್, ಜೆಡಿಎಸ್ ಫೈಟ್
1 min readಮೈಸೂರುಸೆ.30-ಮೈಸೂರು ಮಹಾನಗರ ಪಾಲಿಕೆಯ ವಿರೋಧಪಕ್ಷ ನಾಯಕ ಸ್ಥಾನಕ್ಕಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಪೈಪೋಟಿ ಏರ್ಪಟ್ಟಿದೆ.
ನಗರಪಾಲಿಕೆಯಲ್ಲಿ ಇಂದು ನಡೆದ ಕೌನ್ಸಿಲ್ ಸಭೆಯಲ್ಲಿ ಎರಡೂ ಪಕ್ಷಗಳು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಫೈಟ್ ನಡೆಸಿವೆ.
ಪಾಲಿಕೆ ಸದಸ್ಯರ ಸಂಖ್ಯೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮಬಲ (ತಲಾ 22)ದಲ್ಲಿವೆ. ಹೀಗಾಗಿ, ವಿರೋಧ ಪಕ್ಷದ ನಾಯಕ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿವೆ. ಯಾರಿಗೆ ಆ ಸ್ಥಾನ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.
ಕೌನ್ಸಿಲ್ ಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆಗೆ ಸಿದ್ಧತೆ ನಡೆದಿದ್ದು, ಕಾಂಗ್ರೆಸ್ ಪಕ್ಷವನ್ನು ವಿರೋಧ ಪಕ್ಷವಾಗಿ ಘೋಷಿಸುವಂತೆ ಒತ್ತಾಯ ಕೇಳಿಬರುತ್ತಿದೆ. ಕಾಂಗ್ರೆಸ್ ಪಕ್ಷ ಫಲಿತಾಂಶ ಕೊಟ್ಟು ನಾಯಕತ್ವ ವಹಿಸಿಕೊಳ್ಳಲಿ ಎಂದು ಉಪಮೇಯರ್ ಶಫಿ ಅಹಮ್ಮದ್ ಹೇಳಿದ್ದಾರೆ.
ಹೆಚ್ಚು ಸದಸ್ಯರು ಇರುವ ಕಾರಣ ಜೆಡಿಎಸ್ ಅನ್ನು ವಿರೋಧ ಪಕ್ಷವಾಗಿ ಘೋಷಿಸಿ ಅಶ್ವಿನಿ ಅನಂತು ಆಯ್ಕೆ ಮಾಡಿ ಎಂದು ಎಸ್ಬಿಎಂ ಮಂಜು ಒತ್ತಾಯಿಸಿದ್ದಾರೆ.