ನಾಳೆ ಸಿಡಿಮದ್ದಿನ ತಾಲೀಮು’ ಅಕ್ಟೋಬರ್ ಮೊದಲ ವಾರ ಮರದ ಅಂಬಾರಿ ತಾಲೀಮು!
1 min readವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಹಿನ್ನಲೆಯಲ್ಲಿ ನಾಳೆ ಫಿರಂಗಿ ತಾಲೀಮಿಗೆ ಸಿದ್ದತೆ ನಡೆದಿದ್ದು, ನಾಳೆ ಬೆಳಗ್ಗೆ 11.30ಕ್ಕೆ ಫಿರಂಗಿ ತಾಲೀಮು ನಡೆಯಲಿದೆ.
ಈ ಬಗ್ಗೆ ಮೈಸೂರಿನ ಅರಮನೆಯಲ್ಲಿ ಡಿಸಿಎಫ್ ಕರಿಕಾಳನ್ ಮಾಹಿತಿ ನೀಡಿದ್ದು, ಈಗಾಗಲೇ ಅರಮನೆ ಮುಂಭಾಗ ಡ್ರೈ ತಾಲೀಮು ನಡೆಸಿರುವ ಸಿಬ್ಬಂದಿಗಳು ನಾಳೆಯ ಫಿರಂಗಿ ಸಿಡಿಸುವ ತಾಲೀಮಿಗೆ ಸಜ್ಜಾಗಿದ್ದಾರೆ.
ಒಟ್ಟು ಮೂರು ಬಾರಿ ಫಿರಂಗಿ ತಾಲೀಮು ನಡೆಸಲಿದ್ದು, ಆನೆಗಳು, ಅಶ್ವಗಳು ಬೆದರಂತೆ ಸಿದ್ದತೆ ಇದಾಗಿದ್ದು, ರಾಷ್ಟ್ರಗೀತೆ ವೇಳೆ 21 ಸುತ್ತು ಸಿಡಿಮದ್ದು ಗೌರವ ಸಲ್ಲಿಕೆಗೆ ಈ ತಯಾರಿ ಶುರುವಾಗಿದೆ.
*ಅಕ್ಟೋಬರ್ ಮೊದಲ ವಾರ ಮರದ ಅಂಬಾರಿ ತಾಲೀಮು*
ಅಕ್ಟೋಬರ್ ಮೊದಲ ವಾರದಲ್ಲಿ ಮರದ ಅಂಬಾರಿ ತಾಲೀಮು ನಡೆಯಲಿದ್ದು, ಈಗಾಗಲೇ ಗಜಪಡೆಯ ಮೂರು ಆನೆಗಳಿಗೆ ತೂಕದ ತಾಲೀಮು ನಡೆಯುತ್ತಿದೆ. ಆನೆಗಳಾದ ಅಭಿಮನ್ಯು, ಗೋಪಾಲಸ್ವಾಮಿಗು ಭಾರದ ತಾಲೀಮು ಮುಗಿದಿದ್ದು ಸಾವಿರ ಕೆಜಿವರೆಗು ತೂಕ ಹೊರಿಸಿ ತಾಲೀಮು ಮಾಡಿಸಲಾಗಿದೆ.
ಹಾಗಾಗಿ ಅಕ್ಟೋಬರ್ ಮೊದಲ ವಾರದಲ್ಲಿ ಮರದ ಅಂಬಾರಿ ತಾಲೀಮು ನಡೆಯಲಿದೆ ಎಂದು ಮೈಸೂರಿನ ಅರಮನೆಯಲ್ಲಿ ಡಿಸಿಎಫ್ ಕರಿಕಾಳನ್ ಮಾಹಿತಿ ನೀಡಿದ್ದಾರೆ.