ಮೈಸೂರಿನಲ್ಲಿ ಮಾದಕ ವಸ್ತುಗಳ ಜಾಲ: 3 ವರ್ಷದಲ್ಲಿ 61 ಕೇಸ್, 104 ಜನರ ಬಂಧನ; ಸಚಿವ ಅರಗ ಜ್ಞಾನೇಂದ್ರ

1 min read

ಮೈಸೂರು,ಸೆ.28- ನಗರದಲ್ಲಿ ಮಾದಕ ವಸ್ತುಗಳ ಜಾಲ ದೊಡ್ಡ ಪ್ರಮಾಣದಲ್ಲಿ ಕಂಡುಬರುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ ೬೧ ಕೇಸ್ ದಾಖಲಿಸಿದ್ದು, ೧೦೪ ಜನರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಮಾಹಿತಿ ನೀಡಿದರು.
ನಗರದ ಜಲದರ್ಶಿ‌ನಿ ಅತಿಥಿಗೃಹದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹುಕ್ಕಾಬಾರ್ ಗಳ ಸಂಖ್ಯೆ ಕೂಡ ಜಾಸ್ತಿಯಾಗುತ್ತಿದೆ. ಯುವಕರು ಹಾಗೂ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ. ಆದ್ದರಿಂದ ಪೊಲೀಸರಿಗೆ ಹೆಚ್ಚು ರೈಡ್ ಮಾಡಲು ಸೂಚಿಸಿದ್ದೇನೆ ಎಂದರು.
ಈಗಾಗಲೇ ಪೊಲೀಸರು ಗಸ್ತು ವ್ಯವಸ್ಥೆ ಮಾಡಿದ್ದು, ಆದರೆ ಇನ್ನು ಹೆಚ್ಚು ವ್ಯಾಪಕವಾಗಿ ಗಸ್ತು ವ್ಯವಸ್ಥೆಯಾಗಬೇಕು. ೨೫೦ ಮಂದಿ‌ ಪೊಲೀಸರು ಗಸ್ತು ತಿರುಗುತ್ತಿದ್ದು, ರಾತ್ರಿ ವೇಳೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಗಸ್ತು ತಿರುಗಬೇಕೆಂದು ಸೂಚನೆ ನೀಡಿದ್ದೇನೆ ಎಂದರು.
ಕ್ರೈಮ್ ಕನ್ವಿಕ್ಷನ್ ಪ್ರಮಾಣ ಜಾಸ್ತಿಯಾಗಬೇಕಿದೆ. ೨೦೨೧ ರಲ್ಲಿ ೩೭.೭೭ ರಷ್ಟು ಕ್ರೈಮ್ ಕನ್ವಿಕ್ಷನ್ ಪ್ರಮಾಣವಿದೆ. ಎಫ್ ಐ ಆರ್ ಹಾಕಿ ಚಾರ್ಜ್ ಶೀಟ್ ಸಲ್ಲಿಸಿದರೆ ಸಾಲದು, ಸಾಕ್ಷಿಗಳ ಮನವೊಲಿಸಿ ಕೋರ್ಟ್‌ನಲ್ಲಿ ಸಾಕ್ಷಿ ಹೇಳುವಂತೆ ಮಾಡಿ ಅಪರಾಧಿಗಳಿಗೆ ಶಿಕ್ಷಯಾಗುವಂತೆ ಮಾಡಬೇಕು ಎಂದು ಹೇಳಿದರು.
ಪೊಲೀಸರಿಗರ ಸಮನ್ಸ್ ಜಾರಿ ಹೊರೆಯಾಗುತ್ತಿದ್ದು, ಅಂಚೆ ಇಲಾಖರ ನೆರವಿನೊಂದಿಗೆ ಸಮನ್ಸ್ ಜಾರಿ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಇದೇ ವೇಳೆ ಹೇಳಿದರು.‌

About Author

Leave a Reply

Your email address will not be published. Required fields are marked *