ಬೆಳಗಾವಿಯಲ್ಲಿ ಕೈಮಗ-ಜವಳಿ, ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ್ ಸಂಚಾರ!
1 min readಬೆಳಗಾವಿ : ಕೈಮಗ್ಗ & ಜವಳಿ ಹಾಗೂ ಸಕ್ಕರೆ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಅವರು ಬೆಳಗಾವಿ ವಿಭಾಗ ಮಟ್ಟದ ಕೈಮಗ್ಗ, ಜವಳಿದಾರರು & ನೇಕಾರರೊಂದಿಗೆ ಬೆಳಗಾವಿ ಸುವರ್ಣ ಸೌಧದಲ್ಲಿ ಸಂವಾದ ನಡೆಸಿದರು. ಈ ವೇಳೆ ಕೈಮಗ್ಗ & ಜವಳಿ ಇಲಾಖೆಯ ಸಮಸ್ಯೆಗಳನ್ನು ನೇಕಾರರಿಂದ ಅಲಿಸಿದರು. ಕೇಂದ್ರ ಸರ್ಕಾರ & ರಾಜ್ಯ ಸರ್ಕಾರ ಕೈಮಗ್ಗ & ಜವಳಿ ಕ್ಷೇತ್ರಕ್ಕೆ ನೀಡಿರುವ ಆದ್ಯತೆಯನ್ನು ವಿವರಿಸಿದರು ಹಾಗೂ ಸಂವಾದದಲ್ಲಿ ನೇಕಾರರು ತಿಳಿಸಿರುವ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸಿ, ಮತ್ತೊಂದು ಸಭೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಈ ಸಮಯದಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಸಿದ್ದು ಸವದಿ, ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ಉಪಾಧ್ಯಕ್ಷರಾದ ನೀಲಕಂಠ ಮಾಸ್ತಮರಡಿ, ಶಾಸಕರಾದ ಮಹಾದೇವಪ್ಪ ಯದವಾಡ್, ಸಂಸದೆ ಶ್ರೀಮತಿ ಮಂಗಳ ಅಂಗಡಿ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಬಳಿಕ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ರಾಜ್ಯದ ಸಕ್ಕರೆ ಉದ್ದಿಮೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರ ವೇತನವನ್ನು ಪರಿಷ್ಕರಿಸಲು ವೇತನ ಸಮಿತಿಯ ಸಭೆ ನಡೆಸಿದರು.
ಸಭೆಯಲ್ಲಿ ಕಾರ್ಮಿಕರಿಗೆ ಮೂಲ ವೇತನದಲ್ಲಿ ಹೆಚ್ಚಳ, ವೇತನ ಶ್ರೇಣಿಗಳ ಪರಿಷ್ಕರಣೆಗೆ ಹಾಗೂ ಕಾರ್ಮಿಕರಿಗೆ ಹಾಗೂ ಅವರ ಕುಟುಂಬಸ್ಥರಿಗೆ ವೈದ್ಯಕೀಯ ಸೌಲಭ್ಯಗಳ ಭತ್ಯೆ ನೀಡುವ ಕುರಿತಂತೆ ವಿಸ್ತೃತವಾಗಿ ಚರ್ಚಿಸಿ, ಅಗತ್ಯ ಸಲಹೆ ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಕಾರ್ಮಿಕ ಸಚಿವರಾದ ಶ್ರೀ ಶಿವರಾಮ ಹೆಬ್ಬಾರರವರು, ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದಾದ ಬಳಿಕ ಸಚಿವರು ಬೆಳಗಾವಿಯಲ್ಲಿರುವ ಶ್ರೀ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಗೆ ಭೇಟಿ, ಕಬ್ಬು ಬೆಳೆ, ಕಬ್ಬು ಅಭಿವೃದ್ಧಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು ಮತ್ತು ಸಂಸ್ಥೆಯಲ್ಲಿ ಕಬ್ಬಿನ ಬೆಳೆಯ ಕುರಿತು ಕೈಗೊಂಡಿರುವ ವಿವಿಧ ಸಂಶೋಧನಾ ಕಾರ್ಯಗಳನ್ನು ಪರಿಶೀಲಿಸಿದರು.
ಇದೇವೇಳೆ ಬೆಳಗಾವಿಯ ಕೈಗಾರಿಕ ಪ್ರದೇಶದಲ್ಲಿರುವ ರೇಷ್ಮೆ ಸೀರೆ ತಯಾರಿಕಾ ಕಾರ್ಖಾನೆ ಮತ್ತು ಸಿದ್ಧ ಉಡುಪುಗಳ ತಯಾರಿಕಾ ಕಾರ್ಖಾನೆಯಾದಗೆ ಭೇಟಿ ನೀಡಿ, ಜವಳಿ ಘಟಕಗಳ ಕಾರ್ಯಯೋಜನೆಗಳ ಕುರಿತು ಮಾಹಿತಿ ಪಡೆದರು.