ಆರ್.ಗುಂಡೂರಾವ್ ಜನ್ಮದಿನ ಆಚರಣೆ: ಕಲಾಮಂದಿರಕ್ಕೆ ಗುಂಡೂರಾವ್ ಕಲಾಮಂದಿರ ಎಂದು ನಾಮಕರಣ‌ ಮಾಡುವಂತೆ ಒತ್ತಾಯ

1 min read

ಮೈಸೂರು,ಸೆ.27-ರಾಜ್ಯಕ್ಕೆ ಗುಂಡೂರಾವ್ ಅವರ
ಕೊಡುಗೆ ಅಪಾರ ಹಾಗೂ ಅವರು ಬಡವರ ಪಾಲಿಗೆ ನಂದಾದೀಪವಾಗಿದ್ದರು ಎಂದು ಮಾಜಿ ಶಾಸಕ ಎಂ.ಕೆ ಸೋಮಶೇಖರ್ ಹೇಳಿದರು.
ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರ 84ನೇ ಜನ್ಮದಿನೋತ್ಸವದ ಅಂಗವಾಗಿ ಗುಂಡೂರಾವ್
ಅಭಿಮಾನಿಗಳ ಬಳಗದ ವತಿಯಿಂದ ಕರ್ನಾಟಕ ಕಲಾಮಂದಿರದ ಆವರಣದಲ್ಲಿ ಗುಂಡುರಾವ್ ಅವರ ನೆನೆಪಿನಂಗಳ ಕಾರ್ಯಕ್ರಮದಲ್ಲಿ ಗುಂಡೂರಾವ್ ಅವರಿಗೆ ಪುಷ್ಪನಮನ ಸಲ್ಲಿಸಿ ಸೋಮಶೇಖರ್ ಮಾತನಾಡಿದರು.
ರಾಜ್ಯಕ್ಕೆ ಗುಂಡೂರಾವ್ ಅವರ
ಕೊಡುಗೆ ಅಪಾರ. ಬಡವರ್ಗದ ಮನೆಗಳವರಿಗೆ ಸರ್ಕಾರಿ ಕೆಲಸ
ನೀಡುವ ಮೂಲಕ ಅವರ ಜೀವನಕ್ಕೆ
ನಂದಾದೀಪವಾಗಿ ಲಕ್ಷಾಂತರ ಮಂದಿ ಸ್ವಾಭಿಮಾನಿಯಾಗಿ
ದುಡಿಯಲು ಪ್ರೇರೇಪಿಸಿದರು. ಅಲ್ಲದೆ ಸಾಕಷ್ಟು ಜನಪರ ಯೋಜನೆಯನ್ನು ಮುಖ್ಯಮಂತ್ರಿಯಾಗಿ ಅನುಷ್ಠಾನಗೊಳಿಸಿದ್ದಾರೆ ಎಂದರು.
ಹಿರಿಯ ಸಮಾಜ ಸೇವಕರಾದ ಡಾ. ಕೆ ರಘುರಾಂ ವಾಜಪೇಯಿ
ಮಾತನಾಡಿ,ಕರ್ನಾಟಕ ಕಲಾಮಂದಿರ ನಮ್ಮ ಹಿಂದಿನ ಜನಪ್ರಿಯ
ಮುಖ್ಯಮಂತ್ರಿಗಳಾಗಿದ್ದ ಆರ್.ಗುಂಡೂರಾವ್ ಅವರ ಕನಸಿನ
ಕೂಸು. ಹೀಗಾಗಿ ಕನ್ನಡ ಸಂಸ್ಕೃತಿ ಇಲಾಖೆಯವರು ಆರ್.ಗುಂಡೂರಾವ್ ಅವರ
ಪ್ರತಿಮೆಯನ್ನು ಕಲಾಮಂದಿರದ ಮುಂಭಾಗದಲ್ಲಿ ಸ್ಥಾಪಿಸಿ,
ಕಲಾಮಂದಿರಕ್ಕೆ ಆರ್.ಗುಂಡೂರಾವ್ ಕರ್ನಾಟಕ
ಕಲಾಮಂದಿರ ಎಂದು ನಾಮಕರಣ ಮಾಡಬೇಕೆಂದು
ಒತ್ತಾಯಿಸಿದರು.
ಕಾಂಗ್ರೆಸ್ ಯುವ ಮುಖಂಡ ಎನ್.ಎಂ.ನವೀನ್ ಕುಮಾರ್, ಕಾಂಗ್ರೆಸ್‌ ನಗರಾಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ
ಶಿವಣ್ಣ ,ನಗರ ಉಪಾಧ್ಯಕ್ಷ ರಾಜಾರಾಂ,ಮಾಜಿ ನಗರ ಪಾಲಿಕಾ
ಸದಸ್ಯರಾದ ಎಂ. ಕೆ.ಅಶೋಕ್ ಶಿವಮಲ್ಲು ,ಗುಂಡೂರಾವ್
ಅಭಿಮಾನಿ ಬಳಗದ ಅಧ್ಯಕ್ಷ ವಿನಯ್ ಕಣಗಾಲ್, ಸಿ.ಎಸ್
ರಘು ,ಚಿಕ್ಕಣ್ಣ ಕೃಷ್ಣರಾಜ ಯುವ ಬಳಗದ ಅಧ್ಯಕ್ಷ ನವೀನ್
ಕೆಂಪಿ ,ರಾಕೇಶ್ ಕುಂಚಿಟಿಗ ,ವೀಣಾ, ಚಕ್ರಪಾಣಿ ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *