ರೈತರಿಂದ ಮೈಸೂರಿನ ರಸ್ತೆಯಲ್ಲಿ ಚಡ್ಡಿ ಮೆರವೆಣಿಗೆ!
1 min readಮೈಸೂರು : ಸೆ.27ರ ಭಾರತ್ ಬಂದ್ ಬೆಂಬಲಿಸುವಂತೆ ಮೈಸೂರಿನಲ್ಲಿ ರೈತರಿಂದ ಚಡ್ಡಿ ಮೆರವಣಿಗೆ ನಡೆಸಲಾಯಿತು.
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ರೈತರ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಮಾಡಿ ಶಾಸನಬದ್ಧ ಕಾಯ್ದೆ ಜಾರಿಯಾಗಬೇಕೆಂದು ಒತ್ತಾಯಿಸಲು ಭಾರತ್ ಬಂದ್ಗೆ ಕರೆ ನೀಡಲಾಗಿದೆ. ಜನಸಾಮಾನ್ಯರಿಗೆ ಹೊರೆಯಾಗಿರುವ ಅಡುಗೆ ಅನಿಲ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಲು ಸಂಯುಕ್ತ ಕಿಸಾನ್ ಮೋರ್ಚಾ ಭಾರತ್ ಬಂದ ಕರೆ ನೀಡಿದೆ. ಸಾರ್ವಜನಿಕರು ಕೂಡ ಬಂದ್ಗೆ ಬೆಂಬಲ ನೀಡಬೇಕೆಂದು ಮನವಿ ಮಾಡಲು ಕರ್ನಾಟಕ ರಾಜ್ಯ ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಮೈಸೂರಿನಲ್ಲಿ ಇಂದು ಚಡ್ಡಿ ಬನಿಯನ್ ಹಾಕಿ ಕಬ್ಬಿನ ಜಲ್ಲೆ ಹಿಡಿದು ಪಾದಯಾತ್ರೆ ಮೆರವಣಿಗೆ ನಡೆಸಿದರು.
-ಸಾರ್ವಜನಿಕರಿಗೆ ಕರಪತ್ರ ನೀಡಿ ರೈತರ ಉಳಿವಿಗಾಗಿ ಸ್ವಯಂ ಪ್ರೇರಿತವಾಗಿ ಬಂದ್ ಗೆ ಬೆಂಬಲ ನೀಡಬೇಕು, ಸರ್ವಾಧಿಕಾರಿ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಕುರುಬೂರು ಶಾಂತಕುಮಾರ್ ಪ್ರಜಾಸರ್ಕಾರದ ಪ್ರಧಾನಮಂತ್ರಿ ಎಂದು ವರ್ತಿಸದೆ ಕಂಪನಿಗಳ ಮಾಲೀಕರು ಬಂಡವಾಳಶಾಹಿಗಳ ಮರ್ಜಿರೈತರ ಯಲ್ಲಿ, ದೇಶದ ರೈತರ ಮರಣ ಶಾಸನ ಬರೆಯುತ್ತಿದ್ದಾರೆ. ಜನರಿಗೆ ತೊಂದರೆ ಕೊಡಬೇಕೆಂದು ಬಂದ ಆಚರಿಸುತ್ತಿಲ್ಲ. ಪ್ರಜಾಸರ್ಕಾರ ಪ್ರಜೆಗಳ ಹಿತವನ್ನು ಮರೆತು ಆಡಳಿತ ನಡೆಸುತ್ತಿರುವ ಕಾರಣ, ಈ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಲು ದೇಶದ ಜನತೆಯ ಪರವಾಗಿ ಸ್ವಯಂ ಪ್ರೇರಿತ ಬಂದ್ ಆಚರಿಸುವ ಮೂಲಕ ಪ್ರಧಾನಿಗಳಿಗೆ ಎಚ್ಚರಿಸುವ ಕಾರ್ಯಕ್ಕಾಗಿ ಬಂದ್ ಆಚರಿಸಲಾಗುತ್ತಿದೆ.
-ಜನಸಾಮಾನ್ಯರಿಗೆ ಸ್ವಲ್ಪ ತೊಂದರೆಯಾದರೂ ಬಂದಗೆ ಸಹಕರಿಸಬೇಕು ಎಂದು ಕರಪತ್ರ ನೀಡುವ ಮೂಲಕ ಹಳೆ ಸಂತೆಪೇಟೆ, ದೇವರಾಜ ಅರಸು ರಸ್ತೆ ವ್ಯಾಪಾರಸ್ಥರಿಗೆ ಹೋಟೆಲ್ ಮಾಲೀಕರಿಗೆ ರಸ್ತೆ ಬದಿ ವ್ಯಾಪಾರಿಗಳಿಗೆ ಆಟೋ ರಿಕ್ಷಾ ಚಾಲಕರಿಗೆ ಎಲ್ಲ ವರ್ಗದ ಜನರಿಗೆ ಮನವಿ ಮಾಡಿದರು ಈ ಚಡ್ಡಿ ಮೆರವಣಿಗೆಯಲ್ಲಿ ಕನ್ನಡ ಕಾವಲುಪಡೆಯ ಮೋಹನ್ ಕುಮಾರ್ ಗೌಡ, ದಲಿತ ಸಂಘರ್ಷ ಸಮಿತಿಯ ಬನ್ನಳ್ಳಿಹುಂಡಿ ಸೋಮಣ್ಣ, ಹತ್ತಳ್ಳಿ ದೇವರಾಜ್ ಪುಟ್ಟಲಕ್ಷ್ಮಮ್ಮ ಕಿರಗಸೂರು ಶಂಕರ , ಡಿಪಿಕೆ ಪರಮೇಶ್ ಮೈಸೂರು ಹೃದಯವಂತ ಕನ್ನಡಿಗ ಕನ್ನಡ, ಬರಡನಪುರ ನಾಗರಾಜ್, ಕೆರೆಹುಂಡಿ ರಾಜಣ್ಣ ,ದೇವೇಂದ್ರ ಕುಮಾರ್, ಗಳಗನಹುಂಡಿ ವೆಂಕಟೇಶ್, ಅಂಬಳೆ ಮಹದೇವಸ್ವಾಮಿ, ರಾಜೇಂದ್ರ, ಬಿ ಪಿ ಪರಶಿವಮೂರ್ತಿ, ಹೆಬ್ಬೂರು ರಂಗರಾಜ್, ಮುಂತಾದವರಿದ್ದರು.