ವಿಷ್ಣು ಪ್ರತಿಮೆ‌ ನಿರ್ಮಿಸುವಂತೆ ಒತ್ತಾಯ: ಸಂಸದ ಪ್ರತಾಪ್ ಸಿಂಹರಿಗೆ ಮನವಿ ಪತ್ರ ಸಲ್ಲಿಕೆ

1 min read

ಮೈಸೂರು, ಸೆ.24- ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಉದ್ಯಾನವನಕ್ಕೆ ಅಧಿಕೃತವಾಗಿ ವಿಷ್ಣು ಹೆಸರು ನಾಮಕರಣ ಮಾಡಬೇಕು, ಪ್ರತಿಮೆ ನಿರ್ಮಾಣ ಮಾಡಬೇಕು ಎಂದು ಡಾ.ವಿಷ್ಣು ಸೇನಾ ಸಮಿತಿ ಸಂಸದರಿಗೆ ಮನವಿ ಪತ್ರ ಸಲ್ಲಿಸಿತು.
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಕನ್ನಡ ಚಿತ್ರರಂಗದ ಸಾಹಸಸಿಂಹ ಡಾ. ವಿಷ್ಣುವರ್ಧನ್ ರವರ ಕೊಡುಗೆ ಅಪಾರವಾದುದು.ಮೈಸೂರಿನಲ್ಲಿಯೇ ಅವರ ಬಹುತೇಖ ಚಿತ್ರಗಳು ಚಿತ್ರೀಕರಣವಾಗಿದ್ದು ಪ್ರವಾಸೋದ್ಯಮಕ್ಕೆ ಸಹಕಾರಿಯಾಗಿದೆ, ವರನಟ ಡಾ. ರಾಜಕುಮಾರ್ ಮತ್ತು ಸಾಹಸಸಿಂಹ ವಿಷ್ಣುವರ್ಧನ್ ರವರು ಕನ್ನಡ ಚಿತ್ರರಂಗದ ಕಣ್ಣುಗಳಿದ್ದಂತೆ. ಅದಕ್ಕೆ ನಿದರ್ಶನದಂತೆ ಅರಮನೆ ಮುಂಭಾಗ ಇಬ್ಬರ ಪ್ರತಿಮೆ ಮತ್ತು ಇಬ್ಬರ ಹೆಸರಿನಲ್ಲಿ ಉದ್ಯಾನವಿದೆ. ಪುಟ್ಟ ಣ್ಣ ಕಣಗಾಲ್ ರವರ ಗರಡಿಯಲ್ಲಿ ಪಳಗಿದ ವಿಷ್ಣುವರ್ಧನ್ ಅಂಬರೀಷ್ ಇಬ್ಬರು ಮೈಸೂರಿನವರು ಎಂಬುದು ನಮಗೆ ಹೆಮ್ಮೆಯ ವಿಚಾರ, ಮೈಸೂರಿನ ಅರಮನೆ ಮುಂಭಾಗದ ಉದ್ಯಾನಕ್ಕೆ ಡಾ. ವಿಷ್ಣುವರ್ಧನ್ ರವರ ಹೆಸರನ್ನು ನಾಮಕರಣ ಮಾಡುವಂತೆ ಅವರ ಪ್ರತಿಮೆಯನ್ನು ಸ್ಥಾಪಿಸುವಂತೆ ಅಭಿಮಾನಿಗಳ ಹೋರಾಟವನ್ನು ಬೆಂಬಲಿಸುವೆ. ಮಹಾಪೌರರಾದ ಸುನಂದ ಪಾಲನೇತ್ರ ರವರೊಂದಿಗೆ ಚರ್ಚಿಸಿ ಕಾನೂನಾತ್ಮಕವಾಗಿ ಹೆಸರು ಮತ್ತು ಪ್ರತಿಮೆ ಸ್ಥಾಪಿಸುವ ವಿಚಾರವಾಗಿ ಕ್ರಮಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ವಿಷ್ಣು ಸೇನಾ ಸಮಿತಿಯ ಗೌರವಾಧ್ಯಕ್ಷ ವಿಕ್ರಮ ಅಯ್ಯಂಗಾರ್ ,ಉಪಾಧ್ಯಕ್ಷ ಹರೀಶ್ ನಾಯ್ಡು ,ನಗರಪಾಲಿಕೆ ಸದಸ್ಯೆ ಸೌಮ್ಯ ಉಮೇಶ್, ಕೇಬಲ್ ಮಹೇಶ್, ಪ್ರದೀಪ್ ಕುಮಾರ್ ,ಉಮೇಶ್ ಕುಮಾರ್ ಇತರರು ಹಾಜರಿದ್ದರು.

About Author

Leave a Reply

Your email address will not be published. Required fields are marked *