ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
1 min readಮೈಸೂರು,ಸೆ.24-ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ, ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದವರು ಇಂದು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು
ಮುಂಚೂಣಿ ಸ್ಕೀಂ ವರ್ಕರ್ ಗಳಿಗೂ ಸೇವಾ ಖಾಯಂಮಾತಿ, ಕನಿಷ್ಟ ವೇತನ ಮತ್ತು ಪಿಂಚಣಿ ಹಾಗೂ ಕೊರೋನಾ ಸಮಯದಲ್ಲಿ ಸುರಕ್ಷಾ ಸಾಮಗ್ರಿಗಳು, ಕೋವಿಡ್-19 ಅಪಾಯ ಭತ್ಯೆ ಮತ್ತು ಮರಣ ಪರಿಹಾರಕ್ಕಾಗಿ ಆಗ್ರಹಿಸಿದರು.
ಕೋವಿಡ್ ಸೇವೆಗೆ ನೇಮಿಸಲ್ಪಟ್ಟಿರುವ ಎಲ್ಲಾ ಸ್ಕೀಂ ವರ್ಕರ್ ಗಳನ್ನು ಫ್ರಂಟ್ ಲೈನ್ ನೌಕರರೆಂದು ಘೋಷಿಸಿ, ಎಲ್ಲರಿಗೂ ಈ ಕೂಡಲೇ ಉಚಿತ ಮತ್ತು ಸಾರ್ವತ್ರಿಕ ಲಸಿಕೆ ಅಭಿಯಾನ ಕೈಗೊಳ್ಳಿ. ಫ್ರಂಟ್ ಲೈನ್ ನೌಕರರಿಗೆ ಮೊದಲ ಆದ್ಯತೆ ನೀಡಿ. ವ್ಯಾಕ್ಸಿನ್ ಉತ್ಪಾದನೆ ಹೆಚ್ಚಿಸಿ, ಸೇವಾ ಅವಧಿಯಲ್ಲಿ ಸೋಂಕಿತರಾದ ಪ್ರತಿಯೊಬ್ಬರಿಗೂ ಕನಿಷ್ಟ ಹತ್ತು ಲಕ್ಷ ರೂ. ಪರಿಹಾರ ಒದಗಿಸಿ. ಬಿಸಿಯೂಟ ಕಾರ್ಮಿಕರಿಗೆ ಬೇಸಿಗೆ ರಜೆಯೂ ಸೇರಿದಂತೆ ಶಾಲೆ ಮುಚ್ಚಿದ ಅವಧಿಯಲ್ಲೂ ಸಹ ಕನಿಷ್ಠ ವೇತನ ಪಾವತಿಯಾಗಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸೀಮಾ ಜಿ. ಎಸ್, ಹರೀಶ್ ಎಸ್, ಕೋಮಲ, ಸವಿತಾ, ಗೀತಾ, ರಾಜೇಶ್ವರಿ ಇತರರು ಭಾಗವಹಿಸಿದ್ದರು.