ಡಾ.ಮಂಜುನಾಥ್ ಹುಟ್ಟುಹಬ್ಬದ ಹಿನ್ನಲೆ- ವಿಶೇಷ ಪೂಜೆ- ರಕ್ತದಾನ ಶಿಬಿರ!
1 min readಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕರು ಹಾಗೂ ಹೃದಯ ತಜ್ಞರು ಆದ ಡಾ.ಮಂಜುನಾಥ್ ಹುಟ್ಟುಹಬ್ಬದ ಅಂಗವಾಗಿ ಡಾಕ್ಟರ್ ಮಂಜುನಾಥ್ ಅಭಿಮಾನಿ ಬಳಗದ ವತಿಯಿಂದ ವಿವಿಧ ಸೇವಾ ಕಾರ್ಯಗಳನ್ನ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮಹಾಪೌರರಾದ ಸುನಂದಾ ಪಾಲನೇತ್ರ ರವರಿಂದ 101ಗಣಪತಿ ದೇವಸ್ಥಾನದಲ್ಲಿ ಡಾಕ್ಟರ್ ಮಂಜುನಾಥ್ ಅವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಗನ್ ಹೌಸ್ ವೃತ್ತದ ಲ್ಲಿರುವ ಕುವೆಂಪು ಉದ್ಯಾನವನದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು. ನಂತರ ಸಯ್ಯಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರದ ಆವರಣದಲ್ಲಿ 40ಯುವಕ ಯುವತಿಯರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲಾಯಿತು.
ಇದೇ ಸಂದರ್ಭ ಸನ್ಮಾನ ಸ್ವೀಕರಿಸಿದ ಜಯದೇವ್ ವೈದ್ಯಕೀಯ ಅಧೀಕ್ಷಕರು ಡಾ॥ ಸದಾನಂದ ,ಡಾ॥ ಹರ್ಷಬಸಪ್ಪ ,ಡಾ॥ಹರೀಶ್ ಕುಮಾರ್ ಕೆ ,ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್,ರವರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ನಿಕಟಪೂರ್ವ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ॥ವೈ ಡಿ ರಾಜಣ್ಣ, ಡಾಕ್ಟರ್ ಸಿ ಎನ್ ಮಂಜುನಾಥ್ ಅವರು ಮೈಸೂರು ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದು ವೈದ್ಯ ಪದವಿ ಪಡೆದು, ಹೃದ್ರೋಗ ಸಮಸ್ಯೆಗಳು ಕುರಿತು ಉನ್ನತ ಶಿಕ್ಷಣ ಪಡೆದರು. ಲಕ್ಷಾಂತರ ಜನರ ಹೃದಯ ಸಮಸ್ಯೆಗಳಿಗೆ ಸಂಜೀವಿನಿಯಾದವರು. ಲಕ್ಷಾಂತರ ಜನರ ಬದುಕಿಗೆ ನಂದಾದೀಪವಾಗಿ ಅವರ ಹೃದಯ ಗೆದ್ದವರು. ನಿಜ ಅರ್ಥದಲ್ಲಿ ಹೃದಯವಂತ ವೈದ್ಯರೆಂದೇ ಇಡೀ ರಾಜ್ಯ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದವರು ಉದ್ಯೋಗ ತಜ್ಞ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದ ಡಾಕ್ಟರ್ ಸಿ ಎನ್ ಮಂಜುನಾಥ್ ಎಂದರು.
ಇನ್ನು ಮಾಜಿ ಮಹಾಪೌರರಾದ ಸಂದೇಶ್ ಸ್ವಾಮಿ ಮಾತನಾಡಿ
ಡಾಕ್ಟರ್ ಸಿ ಎನ್ ಮಂಜುನಾಥ್ ರವರಿಗೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುತ್ತೇವೆ ಭಾರತರತ್ನ ನೀಡಿ ಗೌರವಿಸಬೇಕೆಂದು ಒತ್ತಾಯಿಸಿದರು. ಮಾನವೀಯತೆ ಅಂತಃಕರಣ ವೈದ್ಯರಿಗೆ ಈ ಇರಲೇಬೇಕಾದ ಪ್ರಮುಖ ಗುಣ. ಜೊತೆಗೆ ತಾಂತ್ರಿಕ ಶಿಕ್ಷಣದ ಜ್ಞಾನ ಮತ್ತು ಅದರ ಸದ್ಬಳಕೆ ಇವೆಲ್ಲವುಗಳ ಸಂಗಮ ಡಾಕ್ಟರ್ ಸಿ ಎನ್ ಮಂಜುನಾಥ್ ಕೇವಲ ಹದಿನೈದು ವರ್ಷಗಳಲ್ಲಿ ರಾಜ್ಯದ ನಾಕಾರು ಕಡೆ ಜಯದೇವ ಹೃದ್ರೋಗ ಸಂಸ್ಥೆಯನ್ನು ಆರಂಭಿಸಿ ಸರ್ಕಾರಿ ವ್ಯವಸ್ಥೆಯಲ್ಲೂ ಜನಸಾಮಾನ್ಯರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಆ ಸಂಸ್ಥೆಯನ್ನು ಕಾರ್ಪೊರೇಟ್ ಮಾದರಿಯ ಆಸ್ಪತ್ರೆಯ ರೀತಿಯಲ್ಲಿ ಹೆಚ್ಚಿನ ಸೌಲಭ್ಯ ಕಡಿಮೆ ಹಣ ಖರ್ಚು ಮೂಲಕ ರಾಜ್ಯದ ವೈದ್ಯರ ನಡುವೆ ದಾಖಲೆ ಮಾಡಿದ್ದಾರೆ. ಮೊದಲ ಚಿಕಿತ್ಸೆ ನಂತರ ಹಣ ಸಂದಾಯ ಇದು ಅವರ ಧ್ಯೇಯ. ಇದು ನಾವೆಲ್ಲ ಊಹಿಸಲು ಆಗದ ಮಾತು ಆದರೆ ಅದು ಇವತ್ತಿಗೂ ಸತ್ಯ.
ಮೊದಲ ಲೈಫ್ ನಂತರ ಫೈಲ್ ಅದು ಡಾಕ್ಟರ್ ಸಿ ಎನ್ ಮಂಜುನಾಥ್ ರ ವಿಶಿಷ್ಟ ಶೈಲಿ ಇಷ್ಟೆಲ್ಲಾ ಆದರ್ಶಗಳ ನಡುವೆಯೂ ಅವರು ಜಯದೇವ ಸಂಸ್ಥೆಯನ್ನು ರಾಷ್ಟ್ರ ಅಂತಾರಾಷ್ಟ್ರ ಮಟ್ಟದ ಹಂತಕ್ಕೆ ಸೆಳೆದಿರುವುದು ಅವರ ಭಗೀರಥ ಪ್ರಯತ್ನ ಸರ್ಕಾರ ಹಾಗೂ ದಾನಿಗಳ ನೆರವಿನಿಂದ ಬಡವರಿಗೆ ಕೂಲಿ ಕಾರ್ಮಿಕರಿಗೂ ಕೂಡ ಉನ್ನತ ಚಿಕಿತ್ಸೆ ನೀಡುವಲ್ಲಿ ಅವರು ನಮಗೆಲ್ಲ ಹೊಸದಾರಿ, ಮಾದರಿ.
ಮೈಸೂರಿನಲ್ಲೇ ಎಂಬಿಬಿಎಸ್ ಪದವಿ ಪಡೆದು ಜನಪ್ರಿಯ ತಜ್ಞರಾಗಿರುವುದೂ ಮೈಸೂರಿಗೂ ಹೆಮ್ಮೆ. ವೈದ್ಯೋ ನಾರಾಯಣೋ ಹರಿ ಎನ್ನುವ ಮಾತಿಗೆ ಡಾ. ಸಿ. ಎನ್. ಮಂಜುನಾಥ್ ಅನ್ವರ್ಥ ರಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು
ಇದೇ ಸಂದರ್ಭದಲ್ಲಿ ಡಾಕ್ಟರ್ ಸದಾನಂದ, ಡಾಕ್ಟರ್ ಹರ್ಷಬಸಪ್ಪ , ಹರೀಶ್, ಯೋಗಾನಂದ್, ಡಾಕ್ಟರ್ ಸಿ ಎನ್ ಮಂಜುನಾಥ್ ಅಭಿಮಾನಿ ಬಳಗದ ಅಧ್ಯಕ್ಷ ಮಹೇಂದ್ರ ಎಂ ಶೈವ, ಮಾಜಿ ಮಹಾಪೌರರಾದ ಸಂದೇಶ್ ಸ್ವಾಮಿ, ನಿಕಟಪೂರ್ವ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೈ ಡಿ ರಾಜಣ್ಣ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ಸಿ ನಾರಾಯಣಗೌಡ, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ನಿಗಮದ ರಾಜ್ಯ ನಿರ್ದೇಶಕಿ ರೇಣುಕಾ ರಾಜ್, ಮೃಗಾಲಯ ಪ್ರಾಧಿಕಾರ ನಿರ್ದೇಶಕರಾದ ಜ್ಯೋತಿ ರೇಚಣ್ಣ, ಕೆಂಪೇಗೌಡರ ಸಹಕಾರಿ ಸಂಘದ ಅಧ್ಯಕ್ಷ ಸಿ ಜೆ ಗಂಗಾಧರ್ ಗೌಡ
ಶರತ್ ಪಾಳ್ಯ, ಪವನ್ ಕುಮಾರ್ ಆರಾಧ್ಯ, ಕಾರ್ತಿಕ್, ಲೋಹಿತ್, ನವೀನ್ ಕೆಂಪಿ, ಹರೀಶ್ ನಾಯ್ಡು, ಹಾಗೂ ಇನ್ನಿತರರು ಹಾಜರಿದ್ದರು.