ನಿಯಮ ಉಲ್ಲಂಘನೆ: ಮುಡಾದಿಂದ ಸಂಘ ಸಂಸ್ಥೆಗಳಿಗೆ ಮಂಜೂರಾಗಿದ್ದ ನಾಗರೀಕ ಸೌಕರ್ಯ ನಿವೇಶನ ರದ್ದು
1 min readಮೈಸೂರು,ಸೆ.22-ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಈ ಹಿಂದೆ ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಲಾಗಿದ್ದ ನಾಗರೀಕ ಸೌಕರ್ಯ ನಿವೇಶನಗಳನ್ನು ನಿಯಮ ಉಲ್ಲಂಘಿಸಿರುವ ಕಾರಣ ರದ್ದುಗೊಳಿಸಿ ಪ್ರಾಧಿಕಾರ ಹಿಂಪಡೆದಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಮುಡಾ, ಪ್ರಾಧಿಕಾರದಿಂದ ಈ ಹಿಂದೆ ವಿವಿಧ ಸಾರ್ವಜನಿಕರ ಉದ್ದೇಶಗಳಿಗಾಗಿ
ನಾಗರೀಕ ಸೌಕರ್ಯ ನಿವೇಶನಗಳನ್ನು ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಲಾಗಿತ್ತು. ಸದರಿ ಸಂಘ
ಸಂಸ್ಥೆಯವರು ನಿಯಮಾವಳಿಯಂತೆ ನಿಗದಿತ ಸಮಯದಲ್ಲಿ ಕಟ್ಟಡ ನಿರ್ಮಿಸದೇ ಹಾಗೂ ಮಂಜೂರಾದ ಉದ್ದೇಶಕ್ಕೆ ನಿವೇಶನವನ್ನು ಬಳಕೆ ಮಾಡದೇ ಮಂಜೂರಾತಿ ನಿಯಮಾವಳಿಯನ್ನು ಉಲ್ಲಂಘಿಸಿರುವ ಕಾರಣ ಹಲವಾರು ನಾಗರೀಕ ಸೌಕರ್ಯ ನಿವೇಶನಗಳನ್ನು ರದ್ದುಗೊಳಿಸಿ ಪ್ರಾಧಿಕಾರಕ್ಕೆ ಹಿಂಪಡೆಯಲಾಗಿರುತ್ತದೆ.
ಪ್ರಾಧಿಕಾರವು ಸೆ.23 ರಂದು ನಾಗರೀಕ ಸೌಕರ್ಯ
ಪ್ರಕಟಣೆ ಹೊರಡಿಸುತ್ತಿದ್ದು, ಮಂಜೂರಾತಿಯಾಗಿ ರದ್ದಾಗಿರುವ ಸಂಘ ಸಂಸ್ಥೆಗಳವರು ಪ್ರಸ್ತುತ ಹಂಚಿಕೆ ಮಾಡುತ್ತಿರುವ ನಾಗರೀಕ
ಸೌಕರ್ಯ ನಿಯಮಾವಳಿಗಳಿಗೆ ಬದ್ಧರಾಗಿ ಅರ್ಜಿ ಸಲ್ಲಿಸಬಹದಾಗಿದೆ ಎಂದು ಸಂಘ ಸಂಸ್ಥೆಗಳಿಗೆ ಈ ಮೂಲಕ ತಿಳಿಯಪಡಿಸಿದೆ.