ಅನ್ನದಾತರಿಗೆ ಗೌರವ ಡಾಕ್ಟರೇಟ್!
1 min readಬೆಂಗಳೂರು,ಸೆ.21- ಕೃಷಿ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ,
ದೇಶದ ಬೆನ್ನೆಲುಬಾಗಿರುವ ರೈತನಿಗೆ ಗೌರವ ಡಾಕ್ಟರೇಟ್ ನೀಡಿ
ಗೌರವಿಸಲು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ನಿರ್ಧರಿಸಿದೆ.
ರಾಜ್ಯದ ಇತಿಹಾಸದಲ್ಲೇ ಇದೇ ಮೊದಲು ರೈತನಿಗೆ ಗೌರವ
ಡಾಕ್ಟರೇಟ್ ನೀಡುತ್ತಿರುವುದು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಬೆಂಗಳೂರು ಕೃಷಿ
ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್. ರಾಜೇಂದ್ರ ಪ್ರಸಾದ್,
ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರ ಮಾಡಿದ ಮಾದರಿ
ರೈತರನ್ನು ಗುರುತಿಸಿ ಗೌರವಿಸುವುದು ಕೃಷಿ ವಿವಿಯ
ಉದ್ದೇಶವಾಗಿದೆ. ಯಾವ ವಿವಿಯೂ ಇದುವರೆಗೆ ಇಂತಹ
ನಿರ್ಧಾರ ಕೈಗೊಂಡಿರಲಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ವರ್ಷವೇ ರೈತರಿಗೂ ಕೃಷಿ ವಿವಿಯಿಂದ ಗೌರವ ಡಾಕ್ಟರೆಟ್
ನೀಡುವ ಕುರಿತು ಚರ್ಚೆ ನಡೆದಿತ್ತು. ಆದರೆ ಕೋವಿಡ್
ಹಿನ್ನೆಲೆಯಲ್ಲಿ ತೊಡಕಾಯಿತು. ಮುಂದಿನ ವರ್ಷದಿಂದ ಇದು
ಜಾರಿಗೆ ಬರಲಿದೆ ಎಂದರು.