ನೀವೂ ಕ್ರಮ ತಗೊಂಡ್ರು ಸರಿ ನಾಳೆ ಮೈಸೂರಲ್ಲಿ ಅಂಗಡಿ ಓಪನ್ ಮಾಡ್ತಿವಿ!
1 min readಮೈಸೂರು : ವೀಕೆಂಡ್ ಕರ್ಫ್ಯೂಗೆ ಮೈಸೂರಿನಲ್ಲಿ ಭಾರೀ ವಿರೋಧ ವ್ಯಕ್ತವಾಗಿದ್ದು ಸಂಘ ಸಂಸ್ಥೆಗಳು, ಉದ್ಯಮಿಗಳು ಸಾಕಷ್ಟು ಆಕ್ರೋಶ ಹೊರಹಾಕಿದ್ದಾರೆ. ಮಾತ್ರವಲ್ಲದೆ ನಾಳೆ ಮೈಸೂರಿನಲ್ಲಿ ಅಂಗಡಿಗಳನ್ನು ಓಪನ್ ಮಾಡಲು ನಿರ್ಧಾರ ಮಾಡಿದ್ದು ಸರಕಾರ ನಮ್ಮನ್ನು ಬಂಧಿಸಿದರು ಪರವಾಗಿಲ್ಲ ನಾವು ಮಳಿಗೆ ಓಪನ್ ಮಾಡುತ್ತೇವೆ ಎಂದು ಮೈಸೂರಿನ ಸಂಘ ಸಂಸ್ಥೆಗಳ ಒಕ್ಕೂಟ ನಿರ್ಧಾರ ಮಾಡಿದೆ.
ಈ ನಡುವೆ ಮೈಸೂರಲ್ಲಿ ಕರ್ಫ್ಯೂ ಇದ್ದರು ಕೂಡ ವಾಹನ ಸಂಚಾರ ಬಲು ಜೋರಾಗಿದ್ದು, ಅನಗತ್ಯವಾಗಿ ಅತಿ ಹೆಚ್ಚಿನ ವಾಹನಗಳು ರಸ್ತೆಗಿಳಿದಿದ್ದವು. ಆದರೆ ವಾಹನ ಇದ್ದರು ಸಹ ಪೊಲೀಸರಿಂದ ಯಾವುದೇ ತಪಾಸಣೆಯೂ ಇರದೆ ಸಂಚಾರ ತಗ್ಗಿಸಲು ರಸ್ತೆಗಳಲ್ಲೂ ಬ್ಯಾರಿಕೇಡ್ ಕೂಡ ಇಲ್ಲದೆ ಅಂಗಡಿಗಳನ್ನ ಮಾತ್ರ ಬಂದ್ ಮಾಡಿ ಜನರ ಓಡಾಟಕ್ಕೆ ಮಾತ್ರ ಎಂದಿನಂತೆ ಅನವು ಮಾಡಿಕೊಡಲಾಗಿತ್ತು.