ದೇಶದ ಮೊದಲ ಹೆಣ್ಣು ಮಕ್ಕಳ ಶಾಲೆ ಉಳಿವಿಗಾಗಿ ಕಲೆಯ ಮೂಲಕ ಹೋರಾಟಕ್ಕೆ ಬೆಂಬಲ ಸೂಚಿಸಿದ ಕಲಾವಿದ
1 min readಮೈಸೂರು: ಮೈಸೂರಿನಲ್ಲಿರುವ ದೇಶದ ಮೊದಲ ಹೆಣ್ಣು ಮಕ್ಕಳ ಶಾಲೆ, NTMS ಶಾಲೆ ಉಳಿವಿಗಾಗಿ ಕಳೆದ ಎರಡು ವಾರದಿಂದ ನಿರಂತರ ಹೋರಾಟ ನಡೆಯುತ್ತಲೇ ಇದೆ. ಕನ್ನಡಪರ ಸಂಘಟನೆಗಳು, ಹಿರಿಯ ಸಾಹಿತಿಗಳು, ಹೋರಾಟಗಾರು ಹಾಗೂ ಮಾಜಿ ಸಚಿವರು, ಶಾಸಕರು ಸೇರಿ ಹಲವರು ಈ ಹೋರಾಟಕ್ಕೆ ಸಾಥ್ ನೀಡಿದ್ದಾರೆ.
ಹಲವು ದಿನಗಳಿಂದ ನಡೆಯುತ್ತಿರುವ ಈ ಹೋರಾಟಕ್ಕೀಗಾ ಹೆಸರಾಂತ ಚಿತ್ರ ಕಲಾವಿದ ಬಾದಲ್ ನಂಜುಂಡಸ್ವಾಮಿ ಸಾಥ್ ನೀಡಿದ್ದಾರೆ. ಮಾತ್ರವಲ್ಲದೆ ತಮ್ಮ ಕಲೆಯ ಮೂಲಕ ಶಾಲೆಯ ಪೆನ್ಸಿಲ್ ಸ್ಕೆಚ್ ಮಾಡಿ ಶಾಲೆ ಉಳಿಸಿ ಹೋರಾಟಕ್ಕೆ ವಿನೂತನವಾಗಿ ಬೆಂಬಲ ಸೂಚಿಸಿದ್ದಾರೆ. ಸದ್ಯ ಕಲಾವಿದನ ವರ್ಣನೆಯಲ್ಲಿ ಚಿತ್ರ ಬಿಡಿಸಿರುವ ಬಾದಲ್ ಕಲೆಯ ಮೂಲಕ ಕನ್ನಡ ಶಾಲೆಯ ಉಳಿವಿಗಾಗಿ ಕೈ ಜೋಡಿಸಿದ್ದಾರೆ.