ಪ್ರಿಯಕರನ‌ ಜೊತೆ ಸೇರಿ ಪತಿ ಹತ್ಯೆ ಮಾಡಿದ ಪತ್ನಿ: 9 ತಿಂಗಳ‌ ನಂತರ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು

1 min read

ಮೈಸೂರು: ಪತ್ನಿ ಪ್ರಿಯಕರನ‌ ಜೊತೆ ಸೇರಿ ಪತಿ ಹತ್ಯೆ ಮಾಡಿದ ಪ್ರಕರಣವೊಂದನ್ನು 9 ತಿಂಗಳ‌ ನಂತರ ಪೊಲೀಸರು ಬೇಧಿಸಿದ್ದಾರೆ.

ಮೈಸೂರು ಜಿಲ್ಲೆಯ ಬನ್ನೂರು‌ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ಟೋಬರ್ 2020ರಲ್ಲಿ ವೆಂಕಟರಾಜು 50 ಕೊಲೆಯಾಗಿದ್ದ ಪ್ರಕರಣದಲ್ಲಿ ಪತ್ನಿ ಉಮಾ 29 ಪ್ರಿಯಕರ ಅವಿನಾಶ್ ಬಂಧಿಸಿದ್ದಾರೆ. ಮೈಸೂರು ಜಿಲ್ಲೆ ಟಿ ನರಸೀಪುರ ತಾಲ್ಲೂಕಿನ ಹುಣಸಗಳ್ಳಿ ಗ್ರಾಮದಲ್ಲಿ ಕೊಲೆ ನಡೆದಿತ್ತು.

https://twitter.com/SPmysuru/status/1417031445512540163?s=20

ವೆಂಕಟರಾಜು ಮೂಲತಃ ಮಂಡ್ಯ ಜಿಲ್ಲೆ ಹೊನಗಾನಹಳ್ಳಿ ಗ್ರಾಮದ ನಿವಾಸಿ. 10 ವರ್ಷದ ಹಿಂದೆ ಉಮಾಳನ್ನು ಮದುವೆಯಾಗಿದ್ದ. ಉಮಾ ಶ್ರೀರಂಗಪಟ್ಟಣ ತಾಲ್ಲೂಕಿನ ಬಳ್ಳೆಕರೆ ಗ್ರಾಮದ ನಿವಾಸಿ. 8 ವರ್ಷದ ಒಂದು ಹೆಣ್ಣು ಮಗು 6 ವರ್ಷದ ಗಂಡು ಮಗು ಇದೆ. ವಯಸ್ಸಿನ ಅಂತರದಿಂದಾಗಿ ಗಂಡ ಹೆಂಡತಿ ನಡುವೆ ಬಿರುಕು ಮೂಡಿತ್ತು. ಈ ವೇಳೆ ಉಮಾಗೆ ಪರಿಚಯವಾಗಿದ್ದ ಅವಿನಾಶ್. ಅವಿನಾಶ್ ಉಮಾ ಪಕ್ಕದ ಮನೆಯ ನಿವಾಸಿ. ಇಬ್ಬರು ಸೇರಿ ವೆಂಕಟರಾಜು ಕೊಲೆ ಮಾಡಿದ್ದರು.

ಅವಿನಾಶ್ ಅಜ್ಜಿ‌ ಮನೆ ಹುಣಸಗಳ್ಳಿಗೆ ಕರೆಸಿಕೊಂಡು ಕೊಲೆ ಮಾಡಿದ್ದಾರೆ. ಆರೋಪಿಗಳು ಕಾಫಿಯಲ್ಲಿ ನಿದ್ದೆ ಮಾತ್ರೆ ಬೆರೆಸಿ ನಿದ್ರಾವಸ್ಥೆಯಲ್ಲಿದ್ದಾಗ ಖಾಸಗಿ ಭಾಗಕ್ಕೆ ಹಲ್ಲೆ ಮಾಡಿದ್ದಾರೆ. ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ನಂತರ ಸ್ವಾಭಾವಿಕ ಸಾವು ಎಂಬಂತೆ ಪತ್ನಿ ಉಮಾ ಬಿಂಬಿಸಿದ್ದರು. ಈ‌ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

About Author

Leave a Reply

Your email address will not be published. Required fields are marked *