ನಾನು‌ ಮಾಡಿರುವಷ್ಟು ಚಳವಳಿ ಪ್ರಪಂಚದಲ್ಲಿ ಯಾರು ಮಾಡಿಲ್ಲ: ವಾಟಾಳ್ ನಾಗರಾಜ್

1 min read

ಮೈಸೂರು: ಕನ್ನಡ ಚಳವಳಿ ವಾಟಾಳ್ ಪಕ್ಷದ ವತಿಯಿಂದ ರಾಜ್ಯಾಧ್ಯಕ್ಷರಾದ ಶ್ರೀ ವಾಟಾಳ್ ನಾಗರಾಜ್ ರವರು ನಗರದ ಆರ್.ಗೇಟ್ ವೃತ್ತದ ಬಳಿ ಮೇಕೆಧಾಟು ಯೋಜನೆಯನ್ನು ಕೈಗೆತ್ತಿಕೊಳ್ಳದಿರುವ ಸರ್ಕಾರದ ನೀತಿಯನ್ನು ಖಂಡಿಸಿ ಹಾಗೂ ತಮಿಳುನಾಡಿನಲ್ಲಿ ನದಿ‌ ಜೋಡಣೆ ಮಾಡುತಿದ್ದಾರೆ ಕರ್ನಾಟಕ ಸರ್ಕಾರಕ್ಕೆ ಈ ಬಗ್ಗೆ ಯಾವುದೇ ಚಿಂತನೆಯಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.

ಈ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮೇಕೆಧಾಟು ವಿಳಂಬವಾಗುತ್ತಿರುವುದು ಕರ್ನಾಟಕದಿಂದಲೇ. ಮೇಕೆಧಾಟು ಆರಂಭವಾಗದಿರಲು ಕಾಂಗ್ರೆಸ್, ಬಿಜೆಪಿ ಹಾಗೂ ಜಂಟಿ ಸರ್ಕಾರ ಹೊಣೆ. ಮುಖ್ಯಮಂತ್ರಿ ಆಗಬೇಕು, ದರ್ಬಾರ್ ಮಾಡಬೇಕು. ಜನರ ಬಯ ಚಿಂತೆ ಇಲ್ಲ. ಮೇಕೆಧಾಟು ಯೋಜನೆ ಬಗ್ಗೆ ತಮಿಳುನಾಡಿನ ಮುಖ್ಯಮಂತ್ರಿ ರವರಿಗೆ ಏಕೆ ಪತ್ರ ಬರೆದರು. ಈ‌ಮುಲಕ ಕರ್ನಾಟಕದ ಹಿತವನ್ನು ಹಾಗೂ ಕರ್ನಾಟಕ ಜನತೆಗೆ ಅಗೌರವ ಉಂಟು ಮಾಡಿದ್ದಾರೆ.

ಯಡಿಯೂರಪ್ಪ ರವರೇ ಮೇಕೆಧಾಟು ಯೋಜನೆ ಆರಂಭಿಸಲು ಯಾವ ಕ್ರಮ ತೆಗೆದುಕೊಂಡಿದ್ದೀರಿ. ಇದು ಕಡಲೆ ಪುರಿ ತಿನ್ನುವ ರೀತಿಯಲ್ಲ. ಯೋಜನೆ ಆರಂಭಿಸಲು ನಿಮ್ಮ‌ ಬಳಿ‌ ಇರುವ ಸಲಕರಣೆಗಳು ಏನು, ಎಲ್ಲಿ ಆರಂಬ ಮಾಡುತ್ತೀರಾ. ಬ್ಲೂ ಪ್ರಿಂಟ್ ರೆಡಿ ಇದಿಯೇ. ಈ ಬಗ್ಗೆ ಹೇಳಬೇಕು.

ತಮಿಳುನಾಡಿನವರು ಹೆಜ್ಜೆ ಹೆಜ್ಎಗೂ ಯಡಿಯೂರಪ್ಪ ರವರೇ ನಿಮಗೆ ಗಂಡಸುತನ, ತಾಕತ್ತು ಇದ್ದರೆ ಒಂದು ವಾರದಲ್ಲಿ ಯೋಜನೆ ಬಗ್ಗೆ ಮಾಹಿತಿ ಕೊಡಿ. ತಮಿಳುನಾಡಿ ನಲ್ಲಿ ದೊಡ್ಡ‌ ನದಿ‌ ಜೋಡಣೆ ಕೆಲಸ ಕಳೆದ 06 ತಿಂಗಳಲ್ಲಿ ಪ್ರಾರಂಭವಾಯಿತು. ಮೋದಿ ರವರಿಗೆ ಕರ್ನಾಟಕದ ಮೇಲೆ‌ ಗೌರವ ಇದ್ದರೆ ಯೋಜನೆ ಗೆ ಹಣ ನೀಡಿ ಎಂದರು.

ಮುಂದಿನ ವಾರ ದಿನಾಂಕ 11/07/2021 ರಂದು ರಾಮನಗರ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗುತ್ತದೆ. SSLC ಪರೀಕ್ಷೆ ರದ್ದು ಮಾಡಿ‌ ಸುರೇಶ್ ಕುಮಾರ್…… PUC ಖಾಸಗಿ ವಿದ್ಯಾರ್ಥಿಗಳನ್ನು ಕೂಡಲೇ ಪಾಸ್ ಮಾಡಿ.

ಯತ್ನಾಳ್ ರವರಿಗೆ ಮೈಸೂರು ಮೀಡಿಯಾ ಸಾಕಷ್ಟು ಪ್ರಚಾರ ಕೊಟ್ಟಿದ್ದೀರಿ. ಯತ್ನಾಳ್ ಟುಸ್ ಪಟಾಕಿ. ಯಡಿಯೂರಪ್ಪ ಭ್ರಷ್ಟಾಚಾರಿ ಇವರನ್ನು ತೆಗೆಯಲು ಯತ್ನಾಳ್ ರಿಂದ ಆಗುವುದಿಲ್ಲ. ‌ ನೂರು ಜನ ಯತ್ನಾಳ್ ಬಂದರು ಸಾಧ್ಯವಿಲ್ಲ.

ಕೇಂದ್ರ ಸರ್ಕಾರವೇ‌ ಹಿಂದೆ ಮುಂದೆ ನೋಡುತ್ತಿದೆ. ಯಡಿಯೂರಪ್ಪ ಈ ರಾಜ್ಯದ ಮುಖ್ಯಮಂತ್ರಿ ಹುದ್ದೆಯಿಂದ ತೆಗೆದರೆ ಬಿಜೆಪಿಯ ಪಕ್ವ ಉಳಿಯುವುದಿಲ್ಲ. ಯಡಿಯೂರಪ್ಪ ಬಹಳ‌ ಮಾಯಾವಿ. ನಾನೊಬ್ಬನೇ ಅವರ ವ್ಯಕ್ತಿತ್ವ ಜೀವಾಳ ತಿಳಿದಿರುವುದು.

ಯಡಿಯೂರಪ್ಪ ಅಧಿಕಾರಕ್ಕೆ ಬಂದಿದ್ದೇ ಭ್ರಷ್ಟಾ ಮಾರ್ಗದಿಂದ. ಬಳ್ಳಾರಿ ಹಣದಿಂದ ಅಧಿಕಾರ ಪಡೆದಿದ್ದಾರೆ. ಕಾಂಗ್ರೆಸ್ ‌ಪಕ್ಷದಲ್ಲಿ ಸಿಎಂ ಬಗ್ಗೆ ಚರ್ಚೆ ಬಗ್ಗೆ ಪ್ರಶ್ನೆಗೆ ಉತ್ತರಿಸಿ. ಸೈಕಲ್ ಚಳವಳಿ ನಮ್ಮ ಕಾರ್ಯಕ್ರಮ. ಇದರಿಂದ ನಮಗೆ ಸಂತೋಷವಾಗಿದೆ. ನಾನು ಇಲ್ಲೇ ಈ ಹಿಂದೆ ಸೈಕಲ್ ಚಳವಳಿ ಮಾಡಿದ್ದೆ. ನಾನು‌ಮಾಡಿರುವಷ್ಟು ಚಳವಳಿ ಪ್ರಪಂಚದಲ್ಲಿ ಯಾರು ಮಾಡಿಲ್ಲ.

ಕಾಂಗ್ರೆಸ್ ನಲ್ಲಿ‌ ಯಾರೇ ಮುಖ್ಯಮಂತ್ರಿ ಆದರೂ ಏನೂ ಬದಲಾವಣೆ ಆಗುವುದಿಲ್ಲ. 100 ರೂ ಇರುವ ಪೆಟ್ರೋಲ್ ಬೆಲೆ 130 ರೂ ಆಗುತ್ತದೆ ಅಷ್ಟೇ ಎಂದು ಮಾತನಾಡಿದರು.

About Author

Leave a Reply

Your email address will not be published. Required fields are marked *