September 9, 2024

ನಮ್ಮ ಸರ್ಕಾರ ಇದ್ದಿದ್ರೆ ಬಡವರಿಗೆ 10 ಸಾವಿರ, 10 ಕೆಜಿ ಅಕ್ಕಿ ಕೊಡ್ತಿದ್ವಿ: ಸಿದ್ದರಾಮಯ್ಯ

1 min read

ಮೈಸೂರು: ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಕಾಂಗ್ರೆಸ್ ಸಹಾಯಹಸ್ತ ಹಾಗೂ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಈ ವೇಳೆ ಸ್ಥಳದಲ್ಲಿ ನೂರಾರು ಸಂಖ್ಯೆಯ ಕಾರ್ಯಕರ್ತರು ಜಮಾವಣೆಗೊಂಡಿದ್ದರು. ವೇದಿಕೆ ಮೇಲೆ ಅನಗತ್ಯವಾಗಿ ಜಮಾವಣೆಗೊಂಡು ಗುಂಪುಗೂಡಿದ ಕಾರ್ಯಕರ್ತರನ್ನ ಸಿದ್ದರಾಮಯ್ಯ ಅವರು ಓಡಿಸಿ ಕರೋನಾ ನಿಯಮ ಪಾಲಿಸಿ‌ ಅಂತ ತಿಳಿ ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನನಗೆ, ನನ್ ಹೆಂಡ್ತಿಗೆ, ನನ್ ಮಗನಿಗೆ ರೋಗ ಬಂದಿತ್ತು. ಒಂದೇ ಆಸ್ಪತ್ರೆಯಲ್ಲಿ ಮೂವರು ಬೇರೆ ಬೇರೆ ವಾರ್ಡ್‌ನಲ್ಲಿ ಇದ್ವಿ. ಯಾರನ್ನು ಯಾರು ನೋಡಲು ಆಗೋದಂತ ಕೆಟ್ಟ ರೋಗ ಇದು. ಕೋವಿಡ್ ರೋಗ ಸರಿಯಿಲ್ಲ- ಅತ್ಯಂತ ಕೆಟ್ಟ ರೋಗ. ಹೆಂಡ್ತಿ ಮಕ್ಕಳು ಸಹ ನಮ್ಮ ಜೊತೆ ಬರಲ್ಲ. ಅಷ್ಟು ಕೆಟ್ಟ ರೋಗ ಈ ಕರೋನಾ. ಕರೋನಾ ಹೋಗುವವರೆಗು ಸೆಲ್ಪಿ ಗಿಲ್ಪಿ ಬೇಡ. ಫೋಟೋಗಳನ್ನ ತೆಗೆಸಿಕೊಳ್ಳೊದು ನಿಲ್ಲಬೇಕು. ಮೊದಲು ಎಲ್ಲರು ಕರೋನಾ ನಿಯಮ ಪಾಲಿಸಿ. ಮಾಸ್ಕ್ ಹಾಕಿಕೊಳ್ಳಿ‌, ಲಸಿಕೆ ಹಾಕಿಸಿಕೊಳ್ಳಿ. ಎಲ್ಲರು ತಪ್ಪದೆ ಕಡ್ಡಾಯವಾಗಿ 2 ಡೋಸ್ ವಾಕ್ಸಿನ್ ಹಾಕಿಸಿಕೊಳ್ಳಿ ಅಂತ ಸಿದ್ದರಾಮಯ್ಯ ಕೈ ಕಾರ್ಯಕರ್ತರಿಗೆ ಕರೋನಾ ಪಾಠ ಮಾಡಿದ್ದಾರೆ.

ಬಡವರಿಗೆ 10 ಸಾವಿರ ಕೊಡಿ- 10 ಕೆಜಿ ಅಕ್ಕಿ ಕೊಡಿ ಎಂದ್ವಿ. ಆದರೆ ಮಾನವೀಯತೆ ಇಲ್ಲದಿರುವ ಯಡಿಯೂರಪ್ಪ ಏನು ಮಾಡಲಿಲ್ಲ. ನಮ್ಮ ಸರ್ಕಾರ ಇದ್ದಿದ್ರೆ 10 ಸಾವಿರ ಹಾಗೂ 10 ಕೆಜಿ ಅಕ್ಕಿ ಕೊಡ್ತಿದ್ವಿ. ಇದನ್ನ ಕೊಡಲಿಲ್ಲ ಅಂದ್ರೆ ಏನು? ಹಾಗಾದ್ರೆ ಸರ್ಕಾರ ಬರೋದು ದುಡ್ಡು ಹೊಡೆಯೋಕಾ? ಅಪ್ಪ ಅಮ್ಮ ಮಗ ಇಬ್ಬರು ಸೇರಿ ಜೆಸಿಬಿಯಲ್ಲಿ ತೆಗೆದು ಹಣ ದೋಚುತ್ತಿದ್ದಾರೆ. ಇಂತಹ ಕೆಟ್ಟ ಸರ್ಕಾರ ನನ್ನ 40 ವರ್ಷದ ರಾಜಕಾರಣದಲ್ಲಿ ನೋಡಿಲ್ಲ. ಅಪ್ಪ ಮಗ ಸೇರಿ ರಾಜ್ಯದಲ್ಲಿ ಹಣ ಲೂಟಿ‌ ಮಾಡ್ತಿದ್ದಾರೆ. ನಾಚಿಕೆ ಮಾನ ಮರ್ಯಾದೆ ಇಲ್ಲದ ಸರ್ಕಾರ ಇವರದ್ದು. ಕೇವಲ ಭಾಷಣ ಮಾಡಿಕೊಂಡು ಕಾಲ‌ಕಳೆಯುತ್ತಿದೆ ಸರ್ಕಾರ. ಇದು ಲಂಚದ ಸರ್ಕಾರ- ಎಲ್ಲದಕ್ಕು ಲಂಚ ಕೇಳ್ತಾರೆ. ಅಧಿಕಾರಿಗಳ ವರ್ಗಾವಣೆ, ಕಾಮಗಾರಿಗು ಲಂಚ ಕೇಳ್ತಿದ್ದಾರೆ.

ಪೇಮೆಂಟ್ ಮಾಡಲು ಸಹ 10 ಪರ್ಸೆಂಟ್ ಸರ್ಕಾರ. ಸ್ವಾತಂತ್ರ್ಯ ಬಂದ ಬಳಿಕ ಅತ್ಯಂತ ಕೆಟ್ಟ ಸರ್ಕಾರ ಯಡಿಯೂರಪ್ಪನದ್ದು. ಇಂತಹ ಭ್ರಷ್ಟಾಚಾರದ ಸರ್ಕಾರ ಅದು ಯಡಿಯೂರಪ್ಪನದ್ದು. ಹಣ ಘೋಷಣೆ ಮಾಡೋದು ಯಾರಿಗು ಆ ಹಣ ಕೊಡೋದಿಲ್ಲ. ಇವರದ್ದು ಬಡವರ ವಿರೋಧಿ, ಭ್ರಷ್ಟಾಚಾರ ಸರ್ಕಾರ. ನಾವು ಅಧಿಕಾರಕ್ಕೆ ಬರೋದಕ್ಕಿಂತ ರಾಜ್ಯ ಉಳಿಯುವ ಕೆಲಸ ಆಗಬೇಕಿದೆ. ಒಂದೂವರೆ ವರ್ಷದಲ್ಲಿ ಒಂದೂವರೆ ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇನ್ನೂಳಿದ ಕಾಲ‌ ಎರಡೂವರೆ ಲಕ್ಷ ಕೋಟಿ ಸಾಲ ಮಾಡ್ತಾರೆ ಅಂತ ಬಿಎಸ್ವೈ ವಿಜೇಂದ್ರ, ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ, ಶಾಸಕ ವೆಂಕಟೇಶ್, ಮಾಜಿ ಶಾಸಕರಾದ ವಾಸು, ಕಳಲೇ ಕೇಶವಮೂರ್ತಿ ಸೇರಿ ಹಲವು ಮುಖಂಡರು ಉಪಸ್ಥಿತಿ. ಕಾರ್ಯಕ್ರಮಕ್ಕೆ ಶಾಸಕ ಯತೀಂದ್ರ ಸಿದ್ದರಾಮಯ್ಯ ಹಾಗೂ ತನ್ವೀರ್ ಸೇಠ್ ಗೈರು.

About Author

Leave a Reply

Your email address will not be published. Required fields are marked *