ಮೈಸೂರಿನಲ್ಲಿ 15 ಸಾವಿರ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ
1 min read
ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 15 ಸಾವಿರ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಶ್ರೀ ಎಸ್ ಟಿ ಸೋಮಶೇಖರ್ ರವರು ವಿಜಯನಗರ 4ನೇ ಹಂತ ಬಡಾವಣೆಯ ಉದ್ಯಾನವನದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಹೆಚ್.ವಿ .ರಾಜೀವ್ ರವರು ಮೈಸೂರು ಹಾಗೂ ಕೊಡಗು ಸಂಸದರಾದ ಶ್ರೀ ಪ್ರತಾಪ್ ಸಿಂಹ ಹಾಗೂ ಶಾಸಕರಾದ ನಾಗೇಂದ್ರರವರು ಹಾಗು ಪ್ರಾಧಿಕಾರದ ಸದಸ್ಯರುಗಳಾದ ಶ್ರೀಮತಿ ಲಕ್ಷ್ಮಿದೇವಿ ಮತ್ತು ಶ್ರೀ ನವೀನ್ ಕುಮಾರ್ ರವರು ಪ್ರಾಧಿಕಾರದ ಆಯುಕ್ತರಾದ ಶ್ರೀ ನಟೇಶ್ ರವರು ಮತ್ತು ಸಿಬ್ಬಂದಿಯವರು ಹಾಜರಿದ್ದರು.

