ಎನ್.ಟಿ.ಎಂ ಶಾಲೆ ಉಳಿಸಲು ಹೋರಾಟ: ಮಕ್ಕಳಿಗೆ ವಿವೇಕಾನಂದರ ವೇಷಭೂಷಣ ತೊಡಿಸಿ ವಿನೂತನ ಪ್ರತಿಭಟನೆ
1 min readಮೈಸೂರು: ಎನ್.ಟಿ.ಎಂ ಶಾಲೆ ಉಳಿಸಲು ಪ್ರತಿಭಟನೆ ಮುಂದುವರೆದಿದ್ದು, ಮಕ್ಕಳಿಗೆ ವಿವೇಕಾನಂದರ ವೇಷಭೂಷಣ ತೊಡಿಸಿ ವಿನೂತನ ಪ್ರತಿಭಟನೆ ಮಾಡಲಾಗುತ್ತಿದೆ.
ಎನ್.ಟಿ.ಎಂ ಶಾಲೆ ಉಳಿಸಿ ಹೋರಾಟ ಸಮಿತಿಯಿಂದ ಈ ಪ್ರತಿಭಟನೆ ನಡೆಯುತ್ತಿದೆ. ಶಾಲೆ ಉಳಿವಿಗಾಗಿ ನಿರಂತರ ಹೋರಾಟ ನಡೆಸಲಾಗುತ್ತಿದೆ. ಕನ್ನಡ ಶಾಲೆ ಮುಚ್ಚಿ ವಿವೇಕಾನಂದ ಸ್ಮಾರಕ ನಿರ್ಮಾಣ ಮಾಡಲು ಮುಂದಾಗಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಶಾಲೆಯು ಇರಲಿ, ಸ್ಮಾರಕವು ಇರಲಿ ಎಂದು ಪ್ರತಿಭಟನ ನಿರಂತರ ಆಗ್ರಹ. ವಿವೇಕಾನಂದರ ಸ್ಮಾರಕ ನಿರ್ಮಾಣ ಮಾಡಿ ಶಾಲೆ ಮುಚ್ವುವುದು ಸರಿಯಲ್ಲ ಎಂದು ಆಗ್ರಹಿಸಿದ್ದಾರೆ.