ಸಿಡಿಮದ್ದು ಉಂಡೆ ತಿಂದು ಕಾಡುಹಂದಿ ಸಾವು
1 min readಮೈಸೂರು: ಸಿಡಿಮದ್ದು ಉಂಡೆ ತಿಂದು ಕಾಡುಹಂದಿ ಸಾವನ್ನಪ್ಪಿದ ಘಟನೆ ನಂಜನಗೂಡಿನ ಕೋಣನೂರು ಗ್ರಾಮದಲ್ಲಿ ನಡೆದಿದೆ.
ಶ್ರೀ ಕಟ್ಟೆ ಮಹದೇಶ್ವರಸ್ವಾಮಿ ದೇವಸ್ಥಾನದ ಬಳಿ ಬೇಟೆಗಾರರು ಇಟ್ಟಿದ್ದ ಸಿಡಿಮದ್ದು ತುಂಬಿದ್ದ ಉಂಡೆ ತಿಂದ ಹಂದಿ ಸಾವನ್ನಪ್ಪಿದೆ. ಕಾಡು ಪ್ರಾಣಿಗಳನ್ನು ಬೇಟೆಯಾಡಲು ಸಿಡಿಮದ್ದು ಬಳಕೆ ಮಾಡಲಾಗಿದೆ. ದೇವಸ್ಥಾನದ ಬಳಿ ಇರುವ ಕೆರೆ ಆವರಣದಲ್ಲಿ ಸ್ಪೋಟಗೊಂಡು ಹಂದಿ ಮೃತಪಟ್ಟಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೈಸೂರಿನ ದೊಡ್ಡ ಕವಲಂದೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.