ಮೈಸೂರಿನ ಡೋಲಾ 650- ರಾಗಿಮುದ್ದೆ ಹುಡುಗಿಯ ವೈರಲ್ ಕಥೆ! ಈಗ ಹೇಗಿದೆ ಗೊತ್ತಾ ಆಕೆಯ ಲೈಫೂ!
1 min readಮೈಸೂರು : ಅದೊಂದು ವಿಡಿಯೋ ಆಕೆಯನ್ನ ರಾತ್ರೋ ರಾತ್ರಿ ವೈರಲ್ ಸ್ಟಾರ್ ಆಗಿ ಮಾಡಿತ್ತು. ತಾನಾಯ್ತು ತನ್ನ ಕೆಲಸವಾಯ್ತು ಎಂಬಂತಿದ್ದ ಆಕೆ- ಮೈಸೂರಿನ ಸ್ಥಳೀಯ ಸುದ್ದಿ ವಾಹಿನಿಯಲ್ಲಿ ತನ್ನ ಕಷ್ಟ ಹಾಗೂ ಕರೋನಾ ಬಗ್ಗೆ ವ್ಯಂಗ್ಯವಾಗಿ ಮಾತಾನಾಡಿದ್ದ ಆಕೆಯ ವಿಡಿಯೋ ರಾತ್ರೋರಾತ್ರಿ ಸಂಚಲನ ಮೂಡಿಸಿತ್ತು. ನೋಡ ನೋಡುತ್ತಿದ್ದಂತೆ ಎಲ್ಲರು ಆಕೆಯಂತೆಯೇ ಮೈಮ್ ಮಾಡಲು ಸಹ ಮುಂದಾಗಿದ್ರು. ಇದೀಗಾ ಆಕೆಯ ಕುಟುಂಬಕ್ಕೆ ನೆರವಿನ ಹಸ್ತ ಬರುತ್ತಿದ್ದು ಎಲ್ಲರು ಆಕೆಯನ್ನ ಹೊಗಳುತ್ತಿದ್ದಾರೆ.
- ಬುಟ್ಟಿ ಎಣಿಯುವ ಕೆಲಸ ಮಾಡುವ ಮೈಸೂರಿನ ಜನತಾನಗರದ ನಿವಾಸಿ ಶಶಿರೇಖಾ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ನನಗೆ ಏನು ಬೇಡ ನಮ್ಮ ಸಮುದಾಯಕ್ಕೆ ನೆರವಾಗಬೇಕು. ನಮ್ಮವರು ತೀರ ಕಷ್ಟದಲ್ಲಿದ್ದಾರೆ.
- ಅವರಿಗೆ ಆಧಾರ್ ಕಾರ್ಡ್, ಐಡಿ ಕಾರ್ಡ್, ಬಿಪಿಎಲ್, ಸರ್ಕಾರಿ ಸವಲತ್ತು, ಜಾತಿ ಪ್ರಮಾಣ ಪತ್ರ ಯಾವುದು ಇಲ್ಲ. ಹಾಗಾಗಿ ಇದು ನಮಗೆ ಮೊದಲು ಆಗಬೇಕಿರುವ ಕೆಲಸ ಎಂದು ತನ್ನಗಿಂತ ತಮ್ಮ ಮೇದಾರ ಜನಾಂಗಕ್ಕೆ ಆದ್ಯತೆ ಬೇಕೆಂದು ಗಟ್ಟಿ ಧ್ವನಿಯಲ್ಲಿ ಹೇಳಿದ್ದಳು.
ಅದರಂತೆ ಇವತ್ತು ಆಕೆಯ ಜನತಾ ನಗರದ ನಿವಾಸಕ್ಕೆ ಇವತ್ತು ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಮೈಸೂರಿನ ಸುಜೀವ್ ಸಂಸ್ಥೆ ಇವತ್ತು ಆಕೆಯ ನಿವಾಸಕ್ಕೆ ಭೇಟಿ ನೀಡಿ 50 ಕುಟುಂಬಕ್ಕೆ ಬೇಕಾಗುವಂತ ಒಂದು ತಿಂಗಳಿಗೆ ಅವಶ್ಯಕತೆ ಇರುವ ದಿನಸಿ ಕಿಟ್ ನೀಡಿ ರಾಜಾರಾಂ ಅವರು ಔದಾರ್ಯತೆ ಮೆರೆದಿದ್ದಾರೆ. ಅಲ್ಲದೆ ಈ ಕುಟುಂಬದ ಸದಸ್ಯರಿಗೆ ಸುಜೀವ್ ಸಂಸ್ಥೆ ಮೂಲಕವೇ ನೆರವಾಗುವ ಭರವಸೆ ನೀಡಿದ್ದಾರೆ.
- ಪಾಲಿಕೆ ಸದ್ಯರಿಂದಲು ನೆರವು-
ಅಜ್ಜು ಬ್ರದರ್ಸ್ ಎಂದೇ ಖ್ಯಾತಿರಾದ ಎನ್.ಆರ್.ಮೊಹಲ್ಲಾದ ಅಜ್ಜು ಎಂಬುವವರಿಂದಲು ಈ ಕುಟುಂಬಕ್ಕೆ ದಿನಸಿ ಕಿಟ್ ನೀಡಿ ಔದಾರ್ಯತೆ ಮೆರೆದಿದ್ದಾರೆ. ಅಲ್ಲದೆ ಮುಂದಿನ ಜೀವನಕ್ಕೆ ಅಗತ್ಯ ಕ್ರಮವನ್ನು ವಹಿಸುತ್ತೇವೆಂದು ಹೇಳಿದ್ದಾರೆ.
- ವೈರಲ್ ಆಯ್ತು ಶಶಿರೇಖಾ ಮಾತು-
ಎಲ್ಲೋ ಇದ್ದವರು ಒಂದೇ ಒಂದು ರಾತ್ರಿಯಲ್ಲಿ ಸ್ಟಾರ್ ಆಗ್ತಾರೆಂಬುದಕ್ಕೆ ಅನೇಕ ಉದಾಹರಣೆಗಳಿವೆ. ಅದರಲ್ಲಿ ಶಶಿರೇಖಾ ಕೂಡ ಒಬ್ಬಳು. ಡೋಲಾ 650, ರಾಗಿಮುದ್ದೆ ಇದ್ರೆ ಸಾಕು ಕರೋನಾ ಬರಲ್ಲ ಎಂಬ ಗಟ್ಟಿ ಧ್ವನಿಯ ಈ ಮಾತು ಸಾಮಾಜಿಕ ಜಾಲತಾಣದಲ್ಲಿ ಮಿಂಚಿನಂತೆ ಪಸರಿಸುವ ಮೂಲಕ ಮೆಮ್ಸ್ಗಳಿಗೆ ಆ ದಿನದ ಆಹಾರಕ್ಕೆ ಮೃಷ್ಟಾನ್ನವೇ ಸಿಕ್ಕಿದಂತಾಗಿತ್ತು.
ಆದ್ರೆ ಇದು ಈಕೆಗೆ ಈ ರೀತಿ ದೊಡ್ಡ ಪ್ರಚಾರ ಹಾಗೂ ಸಿರಿಯಲ್ ಸ್ಟಾರ್ಗಳು ಕೂಡ ಇದನ್ನ ವಿಡಿಯೋ ಮಾಡುವ ಮುಖಾಂತರ ಬರುತ್ತೆ ಎಂದು ಭಾವಿಸಿರಲಿಲ್ಲ. ಸದ್ಯಕ್ಕೆ ಈಕೆಯ ಆಡಿಯೋವನ್ನ ವಿಡಿಯೋ ಮೂಲಕ ಎಲ್ಲರು ಇಮಿಟೆಟ್ ಮಾಡುತ್ತಿದ್ದು, ಇದಕ್ಕೆ ತಕ್ಕಂತೆ ಜನತಾ ನಗರದಲ್ಲಿ ಶಶಿರೇಖಾ ಫುಲ್ ಮನೆ ಮಾತಾಗಿದ್ದಾಳೆ. ಅಕ್ಕಪಕ್ಕದ ನಿವಾಸಿಗಳು ಕೂಡ ಈಕೆಯ ಮಾತಿಗೆ ಫಿದಾ ಆಗಿ ಈಕೆಯನ್ನ ನಮ್ಮ ಸಮುದಾಯದ ನಾಯಕಿ ಎಂದು ಬಿಂಬಿಸುತ್ತಿದ್ದಾರೆ.
- ಕಡೆ ಮಾತು-
ನಮ್ಮ ಹಸಿವು ನಮ್ಮ ಕಷ್ಟ ಎಲ್ಲವು ಹೀಗೆ ವೈರಲ್ ಆದಾಗಲೇ ಮುನ್ನೆಲೇಗೆ ಬರೋದಿಲ್ಲ. ಕೆಲವೊಂದು ಅಚ್ಚರಿ ಕ್ಷಣಗಳು ಮಾತ್ರ ಹೀಗೆ ಗೊತ್ತೋ ಗೊತ್ತಿಲ್ಲದಂತೆ ದೊಡ್ಡ ಮಟ್ಟದ ಪ್ರಚಾರ ಸಿಗುವಂತೆ ಮಾಡುತ್ತದೆ. ಹಾಗಾಗಿ ಎಲ್ಲರು ಈ ರೀತಿಯಾಗಿ ಬೆಳೆಯಲು ಯತ್ನಿಸದೆ ತಮ್ಮ ಜೀವನದ ರೂಪವನ್ನ ತಾವೇ ರೂಪಿಸಿಕೊಳ್ಳುವುದು ಉತ್ತಮ.