ಮೈಸೂರಲ್ಲಿ ಲಾಕ್ಡೌನ್ ಉಲ್ಲಂಘನೆ/ ಇಂದು 313 ವಾಹನ ಸೀಜ್!
1 min read![](https://nannurumysuru.com/wp-content/uploads/2021/06/IMG-20210625-WA0125.jpg)
ಮೈಸೂರಿನಲ್ಲಿ ಕರೋನಾ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಪೊಲೀಸರು ಶಾಕ್ ನೀಡಿದ್ದಾರೆ. ಲಾಕ್ಡೌನ್ ಇದ್ದರು ಸಹ ಅನಗತ್ಯವಾಗಿ ಹೊರಗೆ ಬಂದ ಬರೋಬ್ಬರಿ 313 ವಾಹನಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.
![](https://nannurumysuru.com/wp-content/uploads/2021/06/IMG-20210625-WA0126-789x1024.jpg)
ಇದರಲ್ಲಿ 284 ದ್ವಿಚಕ್ರ ವಾಹನ, 22 ಕಾರುಗಳು, 7 ಆಟೋ ರಿಕ್ಷಾ ಸೇರಿ 313 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
![](https://nannurumysuru.com/wp-content/uploads/2023/09/Nayana-Kumars.jpg)
![](https://nannurumysuru.com/wp-content/uploads/2021/06/IMG-20210625-WA0125.jpg)
ಇನ್ನೂ ಇದನ್ನ ಮೈಸೂರು ನಗರದ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಚಾರ ವಿಭಾಗದ ಪೊಲೀಸರು ಜಂಟಿಯಾಗಿ ಕಾರ್ಯಚರಣೆ ನಡೆಸಿದ್ದು, ಹಲವು ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಅಗತ್ಯವಾಗಿ ಹೊರಗೆ ಬರಬೇಡಿ. ಆಗೊಮ್ಮೆ ಹೊರಗೆ ಅಗತ್ಯ ಕೆಲಸ ಇದ್ದರೆ ಸೂಕ್ತ ದಾಖಲೆ ಜೊತೆಯಲ್ಲಿಟ್ಟುಕೊಂಡು ಹೊರಗೆ ಬರುವಂತೆಯು ಸಾರ್ವಜನಿಕರಿಗೆ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.