ಯೋಗನಗರಿಯಲ್ಲಿ ಯೋಗ ಮೂಲಕ ಕೊರೋನ ಮೆಟ್ಟಿನಿಲ್ಲಲು ಫೀಲ್ಡ್’ಗಿಳಿದ ಯೋಗಪಟುಗಳು
1 min readಮೈಸೂರು: ಯೋಗನಗರಿಯಲ್ಲಿ ಯೋಗ ಮೂಲಕ ಕೊರೋನ ಮೆಟ್ಟಿನಿಲ್ಲಲು ಕೋವಿಡ್ ಸೋಂಕನ್ನು ಲೆಕ್ಕಿಸದ ಯೋಗಪಟುಗಳು ಕೊರೋನ ಅಟ್ಟಡಗಿಸಲು ಫೀಲ್ಡ್’ಗಿಳಿದಿದ್ದಾರೆ.
ಮೈಸೂರಿನ ಮಂಡಕಳ್ಳಿ ಕೋವಿಡ್ ಸೆಂಟರ್ ನಲ್ಲಿ ಸೋಂಕಿತರಿಗೆ ಯೋಗ-ಧ್ಯಾನದ ಪಾಠ ಮಾಡುತ್ತಿದ್ದಾರೆ ಯೋಗಪಟುಗಳು. ಹೌದು. ಮೈಸೂರಿನ ಸ್ವಯಂಪ್ರೇರಿತ ಯೋಗಪಟುಗಳಿಂದ ಯೋಗ ಪಾಠ ನಡೆಯುತ್ತಿದೆ. ಪಿಪಿಇ ಕಿಟ್ ಧರಿಸಿ ಕೋವಿಡ್ ಸೋಂಕಿತರಿಗೆ ಯೋಗಭ್ಯಾಸ ಮಾಡಿಸುತ್ತಿದ್ದಾರೆ.
ಸೋಂಕಿತರ ಮನಸ್ಥಿತಿ ಅರಿತು ಯೋಗ, ಧ್ಯಾನ, ಪ್ರಾಣಾಯಾಮ ಕಲಿಸುತ್ತಿದ್ದು ಮೈಸೂರಿನ ಕೋವಿಡ್ ಸೆಂಟರ್ ನಲ್ಲಿ ಯೋಗಾಭ್ಯಾಸ ಗಮನ ಸೆಳೆಯುತ್ತಿದೆ. ಮೈಸೂರಿನ ಸ್ವಯಂಪ್ರೇರಿತ ಯೋಗಪಟುಗಳು ಪ್ರಾರಂಭದಲ್ಲಿ ಸೋಂಕಿತರಿಗೆ ಆನ್ಲೈನ್ ಯೋಗಾಭ್ಯಾಸ ನಡೆಯುತ್ತಿದ್ದರು. ಇದೀಗ ಕೋವಿಡ್ ಕೇಂದ್ರಕ್ಕೆ ತೆರಳಿ ಸೋಂಕಿತರೊಂದಿಗೆ ಯೋಗಾಭ್ಯಾಸ ಮಾಡಿಸುತ್ತಿದ್ದಾರೆ.
ಕೊರೋನ ಸೋಂಕಿತರ ಮನಸ್ಥಿತಿ ಬದಲಿಸಿ ಆತ್ಮಸ್ಥೈರ್ಯ ತುಂಬಲು ಕೋವಿಡ್ ಕೇಂದ್ರಗಳಿಗೆ ತೆರಳಿ ಯೋಗಪಾಠ ಮಾಡುತ್ತಿದೆ ಮೈಸೂರಿನ ಮಂಜುನಾಥ್ ಕುಲ್ವಾಡಿ ಹಾಗೂ ಅಮಿತ್ ಶಂಕರ್ ಹಾಗೂ ತಂಡ.