ತೂಗುದೀಪ್ ದರ್ಶನ್ ಅಭಿಮಾನಿ ಬಳಗದಿಂದ ಚಿತ್ರಮಂದಿರ ನೌಕರರಿಗೆ ದಿನಸಿ ಕಿಟ್ ವಿತರಣೆ
1 min readಮೈಸೂರು: ಮಹಾಮಾರಿ ಕೊರೋನಾ ನಿಯಂತ್ರಣದ ಹಿನ್ನೆಲೆಯಲ್ಲಿ ದೇಶವೇ ಲಾಕ್ ಡೌನ್ ಘೋಷಣೆಯಾಗಿದ್ದು, ತೂಗುದೀಪ್ ದರ್ಶನ್ ಅಭಿಮಾನಿ ಬಳಗದಿಂದ ಚಿತ್ರಮಂದಿರ ಎಲ್ಲಾ ವರ್ಗದ ನೌಕರರಿಗೆ ದಿನಸಿ ಕಿಟ್ ವಿತರಿಸಲಾಯಿತು.
ಗಾಯಿತ್ರಿ ಟಾಕೀಸ್ ಆವರಣ ದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಟ ಮಂಡ್ಯ ರಮೇಶ್ ಕಿಟ್ ವಿತರಿಸಿ ಮಾತನಾಡಿ ದರ್ಶನ್ ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿಗಳಿಗೂ ಪಕ್ಷಿಗಳಿಗೂ ಅನುಕೂಲವಾಗಲಿ ಎಂದು ಒಂದೇ ಒಂದು ಕರೆ ಕೊಟ್ಟಿದ್ದಕ್ಕೆ ಕೋಟ್ಯಾಂತರ ರೂ.ಸಂಗ್ರಹವಾಗಿ ಎಲ್ಲಾ ಮೃಗಾಲಯಗಳಿಗೂ ಕೂಡ ನಮ್ಮ ಪ್ರಾಣಿಪಕ್ಷಿಗಳಿಗೆ ಏನೂ ಕೊಡಲಿಕ್ಕಿರಲಿಲ್ಲ, ಒಳ್ಳೆಯದಾಯಿತು ಒಂದು ಆದರ್ಶಮಯವಾದ ಕೆಲಸ ಮಾಡಿದ್ದಾರೆ. ಬಹಳ ಸಂತೋಷ ಎಂದು ಖುಷಿಪಡುವಂತಾಯಿತು. ಅದನ್ನೇ ಸ್ಪೂರ್ತಿಯಾಗಿರಿಸಿಕೊಂಡ ದರ್ಶನ್ ಅಭಿಮಾನಿ ಸಂಘದವರು ಮಹತ್ವದ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ನೀವು ನೀಡಿರುವುದು ಇವತ್ತು ಅಂತಲ್ಲ, ಮುಂದಿನ ತಲೆಮಾರನ್ನು, ಅದಕ್ಕೂ ಮುಂದಿನ ತಲೆಮಾರನ್ನು ಕಾಪಾಡತ್ತೆ ಅನ್ನೋ ಬಲವಾದ ನಂಬಿಕೆ. ಹಾಗಾಗಲಿ ಅಂತ ಆಶಿಸುತ್ತೇನೆ. ಯೋಜಿತರಿಲ್ಲದಿದ್ದರೆ ಏನೂ ಮಾಡಕ್ಕಾಗಲ್ಲ. ಈ ಕ್ಷಣಕ್ಕೆ ತುಂಬಾ ಮುಖ್ಯವಾಗಿರುವುದು ಆಪತ್ತಿನಲ್ಲಿರುವವರಿಗೆ ಏನಾದರೂ ಸಹಾಯ ಮಾಡಬೇಕು ಎನ್ನುವುದು. ಪ್ರತಿಯೊಬ್ಬರೂ ಅದಕ್ಕೆ ತುಡಿಯುತ್ತಿರುತ್ತಾರೆ. ನಾನು ಪ್ರತಿದಿನ ದೇವರಲ್ಲಿ ಬೇಡುವುದೊಂದೇ. ಜೀವಿತಾವಧಿಯಲ್ಲೇ ಇಂತಹ ಒಂದು ಕಾಯಿಲೆಯನ್ನು ನೋಡಿರಲಿಲ್ಲ, ಇದು ಇಲ್ಲಿಗೇ ಕೊನೆಯಾಗಲಿ, ಪ್ರಪಂಚದಿಂದನೇ ಕೊರೋನಾ ತೊಲಗಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.
ಬಹುಕಾರ್ಮಿಕರು, ಕಲಾವಿದರು ಎಲ್ಲರಿಗೂ ಸಹಾಯ ಹಸ್ತ ನೀಡಿರುವುದು ನೋಡಿದ್ದೇನೆ. ಆದರೆ ಚಿತ್ರಮಂದಿರ ಕೆಲಸಗಾರರಿಗೆ ಕಿಟ್ ಕೊಡಲು ಹೊರಟಿರುವುದು ನಿಜಕ್ಕೂ ಶ್ಲಾಘನೀಯ, ಕೊಡುವವರಿಗೆ, ತಗೊಳ್ಳುವವರಿಗೆ ಎಲ್ಲರಿಗೂ ಒಳ್ಳೆಯದಾಗಲಿ, ಕೊರೋನಾ ಆದಷ್ಟು ಬೇಗ ತೊಲಗಿ ಚಿತ್ರಮಂದಿರಗಳು ಜನರಿಂದ ತುಂಬಿ ಗಿಜಿಗುಟ್ಟಲಿ. ಸಾಂಸ್ಕೃತಿಕ ವಲಯ ಕ್ರಿಯಾಶೀಲವಾಗಲಿ. ಕೊರೋನಾ ರಾಕ್ಷಸ ತೊಲಗಲಿ, ನೂರು ಕಲಾವಿದರನ್ನು ಸೃಷ್ಟಿಸುವ ಶಕ್ತಿ ಚಾಮುಂಡೇಶ್ವರಿ ನೀಡಲಿ ಎಂದರು.
ನಂತರ ಮಾತನಾಡಿದ ಮಾಜಿ ಮಹಾಪೌರರಾದ ಸಂದೇಶ್ ಸ್ವಾಮಿ ಮೈಸೂರು ಕಲಾತವರೂರು ಸಾಂಸ್ಕೃತಿಕ ರಾಜಧಾನಿಯಾದ ಮೈಸೂರಿನಲ್ಲೇ ಮೊದಲ ಒಳಾಂಗಣ ಕಲಾಕ್ಷೇತ್ರವಾದ ಜಗನ್ಮೋಹನ ಅರಮನೆ, ಕಲಾಮಂದಿರ ರಂಗಾಯಣ ಅಷ್ಟೇ ಅಲ್ಲದೇ ಚಿತ್ರಮಂದಿರಗಳು, ಆಕಾಶವಾಣಿ, ಚಿತ್ರೀಕರಣಕ್ಕಾಗಿ ಪ್ರೀಮಿಯರ್ ಸ್ಟೂಡಿಯೋ ನಿರ್ಮಾಣವಾಗಿದ್ದವು, ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್, ನಟರಾದ ವಿಷ್ಣುವರ್ಧನ್ ಅಂಬರೀಶ್ ಹಿರಿಯನಟ ಅಶ್ವಥ್ ರಿಂದ ಇಂದಿನ ಮೇರುನಟರಾದ ದರ್ಶನ್ ಯಶ್ ವರೆಗೂ ಎಲ್ಲರೂ ಮೈಸೂರಿನವರೇ ಆಗಿದ್ದಾರೆ ಎನ್ನಯವುದು ಸಂತಸದ ವಿಚಾರ ಆದರೆ ವಿಪರ್ಯಾಸವೆಂದರೆ ಅದನ್ನ ಉಳಿಸಿಕೊಂಡು ಉದ್ಯಮವಾಗಿ ಬೆಳಸುವಲ್ಲಿ ನಗರಪಾಲಿಕೆಯು ವಾಣೀಜ್ಯ ಮನರಂಜನೆ ತೆರಿಗೆ ವಿಚಾರವಾಗಿ ಚಿತ್ರಮಂದಿರ ನಿರ್ವಹಣೆಯಲ್ಲಿ ತೊಡಕಾಗಿರುವ ಸಂಗತಿ ಕೇಳಿಬರುತ್ತಿದೆ ಇದರ ಬಗ್ಗೆ ಸರ್ಕಾರ ಬಳಿ ಮಾತಾನಾಡಿ ಸಮಸ್ಯೆ ಪರಿಶೀಲಿಸಲು ಮುಂದಾಗುತ್ತೇವೆ ಎಂದರು.
ಈ ಸಂದರ್ಭ ದಲ್ಲಿ ಹಾಸ್ಯ ಕಲಾವಿದರಾದ ಮಂಡ್ಯ ರಮೇಶ್ ,ಮಾಜಿ ಮಹಾಪೌರರಾದ ಸಂದೇಶ್ ಸ್ವಾಮಿ ,ಗಾಯತ್ರಿ ಚಿತ್ರಮಂದಿರದ ಮಾಲಿಕರಾದ ರಾಜಾರಾಮ ,ತೂಗುದೀಪ್ ದರ್ಶನ್ ಅಭಿಮಾನಿ ಬಳಗದ ಸದಸ್ಯರು ಗಳಾದ ಮಹೇಂದ್ರ ಸಿಂಗ್ ಕಾಳಪ್ಪ ಬನ್ನೂರು, ಎಂ ಡಿ ಪಾರ್ಥಸಾರಥಿ, ಹರೀಶ್ ನಾಯ್ಡು, ಕಡಕೊಳ ಜಗದೀಶ್, ಜೀವಧಾರ ಗಿರೀಶ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.