ವಿಶ್ವ ಯೋಗ ದಿನಕ್ಕೆ ಮನೆಯಲ್ಲಿ ಮಾಡಿ ಯೋಗ- ಪೋಟೋ ಕಳ್ಸಿ ಸರ್ಟಿಫಿಕೇಟ್ ಪಡೆಯಿರಿ!
1 min readಮೈಸೂರು : ಜೂನ್ 21ಕ್ಕೆ 7ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಇದ್ದು ಕರೋನಾ ಸಂದರ್ಭದ ಕಾರಣ ಸಾಮೂಹಿಕ ಯೋಗ ಪ್ರದರ್ಶನವನ್ನ ರದ್ದು ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಇದರ ಬದಲಾಗಿ ಕೊರೊನಾ ನಡುವೆ ಸರಳ ಯೋಗ ದಿನಾಚರಣೆ ಮಾಡಲು ಕರೆ ನೀಡಿದೆ.
ಅದು ತಮ್ಮ ತಮ್ಮ ಮನೆಯಲ್ಲೇ ಯೋಗಾಭ್ಯಾಸ ಮಾಡುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಹೌದು, ಮನೆಯಲ್ಲಿ ಯೋಗ ಮಾಡಿ ಫೋಟೊ ಕಳುಹಿಸಿದ್ರೆ ಯೋಗಾಭ್ಯಾಸದ ಸರ್ಟಿಫಿಕೇಟ್ ನೀಡಲು ಜಿಲ್ಲಾಡಳಿತ ಹೊಸದಾದ ಮಾರ್ಗೋಪಾಯ ಮಾಡಿದೆ.
ಜಿಲ್ಲಾಡಳಿತ, ಮೈಸೂರು ಪಾಲಿಕೆ, ಆಯುಷ್ ಇಲಾಖೆ, ಯೋಗಸಂಸ್ಥೆಗಳ ಸಹಯೋಗದೊಂದಿಗೆ ಈ ಯೋಜನೆ ಆಯೋಜನೆ ಮಾಡಿದ್ದು ಜೂನ್ 21ರಂದು ಯೋಗಾಚರಣೆ ಮಾಡಿ ಜೂ.22ರ ಒಳಗೆ ಫೋಟೊ ಕಳುಹಿಸಿದ್ರೆ ಸರ್ಟಿಫಿಕೇಟ್ ನೀಡಲಾಗುತ್ತಿದೆ.
ಇನ್ನು 9611591119 ಈ ನಂಬರ್‌ಗೆ ವಾಟ್ಸಪ್ ಫೋಟೊ ಕಳುಹಿಸಿದ್ರೆ ಇ-ಸರ್ಟಿಫಿಕೇಟ್ ಲಭ್ಯವಾಗಲಿದೆ ಎಂದು ಜಿಲ್ಲಾಡಳಿತ ಸೂಚಿಸಿದೆ.