6 ದಿನದಲ್ಲಿ 1 ಕೋಟಿ: ನಟ ದರ್ಶನ್’ಗೆ ಧನ್ಯವಾದ ತಿಳಿಸಿದ ಮೃಗಾಲಯ ಪ್ರಾಧಿಕಾರ
1 min read![](https://nannurumysuru.com/wp-content/uploads/2021/06/DBoss-1.jpg)
ಮೈಸೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಮೃಗಾಲಯ ಪ್ರಾಧಿಕಾರ ಧನ್ಯವಾದ ತಿಳಿಸಿದೆ. ಮೃಗಾಲಯದ ಸಂಕಷ್ಟದ ಬಗ್ಗೆ ನಟ ದರ್ಶನ್ ಬಳಿ ಮೃಗಾಲಯ ಪ್ರಾಧಿಕಾರ ಹೇಳಿತ್ತು. ನಂತರ ವೀಡಿಯೋ ಮೂಲಕ ದರ್ಶನ್ ನೆರವನ್ನು ಕೇಳಿದ್ದರು.
ದರ್ಶನ್ ಅಭಿಯಾನಕ್ಕೆ ಭಾರಿ ಬೆಂಬಲ ವ್ಯಕ್ತವಾಗಿದೆ. ವನ್ಯಪ್ರಿಯರು ಹಾಗೂ ದರ್ಶನ್ ಅಭಿಮಾನಿಗಳು ಮೃಗಾಲಯಕ್ಕೆ ನೆರವಿನ ಹಸ್ತಚಾಚಿದ್ದಾರೆ. ಕಳೆದ 6 ದಿನದಲ್ಲಿ ಮೃಗಾಲಯ ಪ್ರಾಧಿಕಾರಕ್ಕೆ 1 ಕೋಟಿ ರೂ ದೇಣಿಗೆ ಬಂದಿದೆ. ಜೂ ಆ್ಯಪ್ ಹಾಗೂ ಮೃಗಾಲಯಕ್ಕೆ ಭೇಟಿ ನೀಡಿ ಪ್ರಾಣಿಗಳ ದತ್ತು ಸ್ವೀಕಾರ ಮಾಡಿದ್ದಾರೆ.
![](https://nannurumysuru.com/wp-content/uploads/2023/09/Nayana-Kumars.jpg)
ಕಳೆದ ವರ್ಷ ಸಚಿವ ಸೋಮಶೇಖರ್ ನೆರವು ನೀಡಿದ್ದರು. ಅವರ ಸ್ನೇಹಿತರ ಸಹಾಯದಿಂದಲೆ ಎರಡು ಕೋಟಿಗು ಹೆಚ್ಚು ಹಣವನ್ನು ಮೃಗಾಲಯಕ್ಕೆ ನೀಡಿದ್ದರು. ಸದ್ಯ ಇನ್ನು ಸಾಕಷ್ಟು ನೆರವನ್ನು ಮೃಗಾಲಯ ನಿರೀಕ್ಷೆ ಮಾಡುತ್ತಿದೆ. ಮೈಸೂರು ಮೃಗಾಲಯ ಒಂದಕ್ಕೆ ಎರಡು ಕೋಟಿ ಹಣ ತಿಂಗಳ ನಿರ್ವಹಣೆಗೆ ಬೇಕು. ಸದ್ಯ ರಾಜ್ಯದ 9 ಮೃಗಾಲಯಕ್ಕೆ ನೆರವು ಬೇಕಿದೆ.
ಕಳೆದ ಒಂದು ವಾರದಲ್ಲಿ ಬಂದ ನೆರವು:
- ಮೈಸೂರು ಮೃಗಾಲಯ-51,76,700 ರೂ
- ಬನ್ನೇರುಘಟ್ಟ -29,83,000 ರೂ
- ಶಿವಮೊಗ್ಗ-7,24,800 ರೂ
- ಗದಗ-2,66,400 ರೂ
- ಹಂಪಿ-2,42,200 ರೂ
- ಬೆಳಗಾವಿ-2,22,300 ರೂ
- ದಾವಣಗೆರೆ- 1,94,900 ರೂ
- ಚಿತ್ರದುರ್ಗ-1,49,300 ರೂ
- ಕಲಬುರ್ಗಿ-83,300 ರೂ
- ಒಟ್ಟು-1,00,47,900 ರೂ.