ದಲಿತ ಕವಿ ಡಾ. ಸಿದ್ದಲಿಂಗಯ್ಯ ನಿಧನ.!

1 min read

ಬೆಂಗಳೂರು: ಕನ್ನಡದ ಖ್ಯಾತ ಕವಿ, ಪ್ರಸಿದ್ಧ ಬಂಡಾಯ ಸಾಹಿತಿ ಡಾ. ಸಿದ್ದಲಿಂಗಯ್ಯ ಅವರು ಹೃದಯಾಘಾತದಿಂದ ಇಂದು ಮೃತಪಟ್ಟಿದ್ದಾರೆ. ಕರೋನಾದಿಂದ ಚೇತರಿಕೆ ಕಂಡಿದ್ದ ಅವರು ಇಂದು ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಡಾ.ಸಿದ್ದಲಿಂಗಯ್ಯ ಈ ನಾಡು ಕಂಡ ಶ್ರೇಷ್ಠ ಬರಹಗಾರರಲ್ಲಿ ಒಬ್ಬರಾಗಿದ್ದು, ತಮ್ಮ ಸ್ನಾತಕೋತ್ತರ ಪದವಿಗೆ ಬರೆದ ಗ್ರಾಮದೇವತೆಗಳು ಮೂಲಕವೇ ಕನ್ನಡಿಗರಿಗೆ ತಮ್ಮ ಪ್ರತಿಭೆಯ ಪರಿಚಯ ಮಾಡಿಸಿದವರು. ಸಾವಿರಾರು ನದಿಗಳು, ಊರುಕೇರಿ, ಹೊಲೆಮಾದಿಗರ ಹಾಡು, ಮುಂತಾದ ಕೃತಿಗಳು ಕನ್ನಡ ಸಾಹಿತ್ಯಕ್ಕೆ ಸದಾ ಸ್ಪೂರ್ತಿಯ ಸೆಲೆಯಾಗಿವೆ. ವಿಧಾನಪರಿಷತ್ ಸದಸ್ಯರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಸಹ ಅವರು ಮಾಡಿದ ಕೆಲಸ ಅನನ್ಯವಾದದ್ದು.

ಕನ್ನಡ ಪ್ರಾಧಿಕಾರದ ಮೇಷ್ಟ್ರು, ಎಂದೇ ಖ್ಯಾತಿ ಪಡೆದಿದ್ದು, ಅಪಾರ ಶಿಷ್ಯವೃಂದ ಹೊಂದಿದ್ದು, ಅಪಾರ ಓದುಗರನ್ನು ಹೊಂದಿದ್ದ ಬರಹಗಾರ.

ಪ್ರಶಸ್ತಿ- ಕನ್ನಡ ರಾಜ್ಯೋತ್ಸವ ಪ್ರಶಸ್ತಿ ,ಪಂಪ ಪ್ರಶಸ್ತಿ ಸೇರಿದಂತೆ ಅಸಂಖ್ಯಾತ ಸನ್ಮಾನಗಳಿಗೆ ಭಾಜನರಾಗಿದ್ದರೂ ಸಹ ಎಂದು ಖ್ಯಾತಿಯನ್ನು ತಲೆಗೇರಿಸಿಕೊಂಡವರಲ್ಲ.

ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿದವರು ಡಾ. ಸಿದ್ದಲಿಂಗಯ್ಯರವರು.

ಅವರು, ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ಸೃಷ್ಟಿಸಿದ್ದರು.

ದಲಿತ ಚಳವಳಿಗೆ ಹೊಸ ವೇಗ, ಹೊಸ ಸ್ಪರ್ಶ ಕೊಟ್ಟ ಡಾ. ಸಿದ್ದಲಿಂಗಯ್ಯರವರ ನಿಧನ, ಅವರ ಕುಟುಂಬ ವರ್ಗಕ್ಕಷ್ಟೆ ಅಲ್ಲ, ರಾಜ್ಯಕ್ಕೆ ನಷ್ಟವಾಗಿದೆ.

About Author

Leave a Reply

Your email address will not be published. Required fields are marked *