ಮೈಸೂರಿನಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣ ಹೆಚ್ಚಾಗಿದೆ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾಹಿತಿ
1 min readಮೈಸೂರು: ಮೈಸೂರಿನಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣ ಹೆಚ್ಚಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಫೇಸ್ ಬುಕ್ ಲೈವ್ನಲ್ಲಿ ಮಾಹಿತಿ ನೀಡಿದ್ದಾರೆ.
ಸದ್ಯ ಮೈಸೂರಿನಲ್ಲಿ 35 ಬ್ಲ್ಯಾಕ್ ಫಂಗಸ್ ಪ್ರಕರಣವಿದೆ. 3 ಸಾವಾಗಿದೆ. ಹೈ ಡಯಾಬಿಟಿಸ್ನಿಂದ ಬ್ಲ್ಯಾಕ್ ಫಂಗಸ್ ಹೆಚ್ಚಾಗುತ್ತಿದೆ. ಭಾರತ ಡಯಾಬಿಟಿಸ್ ರಾಜಧಾನಿಯಾಗಿದೆ. ಸ್ಟಿರಾಯಿಡ್ ಜಾಸ್ತಿ ಕೊಡುತ್ತಿರುವುದಿಂದ ಇಮ್ಯುನಿಟಿ ಕಡಿಮೆಯಾಗುತ್ತಿದೆ. ಇದಕ್ಕೆ ಫಂಗಸ್ ಆಗದಂತೆ ಮುಂಜಾಗೃತೆಯೇ ಪರಿಹಾರ. ಇದಕ್ಕಾಗಿ ಆಸ್ಪತ್ರೆ ಆಕ್ಸಿಜನ್ ಬೆಡ್ ವ್ಯವಸ್ತೆ ವ್ಯವಸ್ಥಿತವಾಗಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಆಕ್ಸಿಜನ್ ಬೆಡ್ ಕೊರತೆ ಇಲ್ಲ ಆಕ್ಸಿಜನ್ ಬೆಡ್ ಬೇಡಿಕೆ ಕಡಿಮೆಯಾಗಿದೆ. ಆದರೂ ಆಕ್ಸಿಜನ್ ಬೆಡ್ ಸಮಸ್ಯೆ ಸಂಪೂರ್ಣ ಬಗೆಹರಿದಿಲ್ಲ. ಬ್ಲ್ಯಾಕ್ ಫಂಗಸ್ ಔಷಧಿ ಕೊರತೆಯಿದೆ. ಸರ್ಕಾರ ನೀಡುತ್ತಿದೆ ಆದರೆ ಔಷಧಿ ಕೊರತೆ ಇದೆ ಬ್ಲ್ಯಾಕ್ ಫಂಗಸ್ಗೆ ನಿಖರ ಕಾರಣ ಗೊತ್ತಿಲ್ಲ. ಇಮ್ಯುನಿಟಿ ಕಡಿಮೆಯಾದವರಲ್ಲಿ ಇದು ಕಾಣಿಸಿಕೊಳ್ಳುತ್ತಿದೆ ಎಂಬ ಮಾಹಿತಿ ನೀಡಿದ್ದಾರೆ.
ಜನರ ಇಮ್ಯುನಿಟಿ ಹೆಚ್ಚಿಸಲು ಹೊಸ ಪ್ಲ್ಯಾನ್
ಇನ್ನು ಮೈಸೂರಿನಲ್ಲಿ ಜನರ ಇಮ್ಯುನಿಟಿ ಹೆಚ್ಚಿಸಲು ಮೈಸೂರು ಜಿಲ್ಲಾಡಳಿತ ಹೊಸ ಪ್ಲ್ಯಾನ್ ಮಾಡಿದೆ. ಇದಕ್ಕಾಗಿ ಜಿಲ್ಲೆಯಲ್ಲಿ ಜಂತು ಹುಳ ಮಾತ್ರೆ ಅಭಿಯಾನಕ್ಕೆ ಮುಂದಾಗಿದೆ.
ನಾಳೆ ಮೈಸೂರು ಜಿಲ್ಲೆಯಲ್ಲಿ ಜಂತುಹುಳ ನಿವಾರಣಾ ದಿನ ಆಚರಣೆ ಮಾಡಲಾಗುವುದು. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಂತುಹುಳು ನಿವಾರಣಾ ಮಾತ್ರೆ ನೀಡಲಾಗುವುದು. ಎಲ್ಲರೂ ಅದನ್ನು ಸೇವಿಸಿ ಮನೆಯಲ್ಲೇ ಇರಿ ಎಂದು ಫೇಸ್ಬುಕ್ ಲೈವ್ನಲ್ಲಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕರೆ ನೀಡಿದ್ದಾರೆ.
ಮನೆ ಮನೆ ಸಮೀಕ್ಷೆ ಯಶಸ್ವಿಯಾಗಿ ನಡೆದಿದೆ. ಜನರು ಕೋವಿಡ್ ಮಿತ್ರಗೆ ಬನ್ನಿ ಅಗತ್ಯ ಮಾಹಿತಿ ಪಡೆಯಿರಿ. ಕೆ ಆರ್ ನಗರದಲ್ಲಿ ಕೊರೊನಾ ಸೋಂಕಿತರ ಹೆಚ್ಚಿನ ಸಾವು ಆಗುತಿತ್ತು. ಇದಕ್ಕೆ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಸಿರಾಯಿಡ್ ನೀಡಿದ್ದು, ಈ ಬಗ್ಗೆ 18 ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದವರನ್ನು ಕರೆದು ಮಾತನಾಡಲಾಗಿದೆ. ಇದರಲ್ಲಿ 5ನ್ನು ಮುಚ್ಚಿಸಲಾಗಿದೆ. ಈಗ ಕೆ ಆರ್ ನಗರದಲ್ಲಿ ಸಾವಿನ ಸಂಖ್ಯೆ ಕಡಿಮೆಯಾಗಿದೆ ಎಂದಿದ್ದಾರೆ.
ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಾಗಿದೆ. ಆದರೆ ಸಾವಿನ ಶೇಕಡಾವಾರು ಪ್ರಮಾಣ ಕಡಿಮೆಯಿದೆ. ರಾಜ್ಯದಲ್ಲಿ ಸಾವಿನ ಪ್ರಮಾಣ 1.86% ಇದೆ ಮೈಸೂರು ಜಿಲ್ಲೆಯಲ್ಲಿ 0.63% ಇದೆ. ಇದಕ್ಕೆ ಕಾರಣ ಮೈಸೂರಿನಲ್ಲಿ ಲಸಿಕೆ ಅಭಿಯಾನ ಚೆನ್ನಾಗಿ ಮಾಡಲಾಗಿದೆ. ಗ್ರಾಮೀಣ ಪ್ರದೇಶ ಹಾಗೂ ನಗರದಲ್ಲಿ ಉತ್ತಮವಾಗಿ ಆಗಿದೆ. ಸಾವಿಗೆ ಕಾರಣ ಕೊನೆ ಕ್ಷಣದಲ್ಲಿ ಸೋಂಕಿತರು ಬರುತ್ತಿದ್ದರು. ಕೋವಿಡ್ ಮಿತ್ರದಿಂದ ಪರಿಸ್ಥಿತಿ ಬದಲಾಗಿದೆ. ಟಾರ್ಗೆಟ್ ಪರೀಕ್ಷೆಯಿಂದಾಗಿ ಪಾಸಿಟಿವ್ ಜಾಸ್ತಿಯಾಗಿದೆ ಎಂದು ಫೇಸ್ಬುಕ್ ಲೈವ್ನಲ್ಲಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾಹಿತಿ ನೀಡಿದ್ದಾರೆ.