ಮೈಸೂರು ಜಿಲ್ಲಾಡಳಿತದಿಂದ ಕೋವಿಡ್ ಅಂಕಿ ಅಂಶ ಬಿಡುಗಡೆ: ಕೊರೋನಾ ಪ್ರಕರಣಗಳಿಲ್ಲದ ವಾರ್ಡ್, ಗ್ರಾಮಗಳಿವು!
1 min readಮೈಸೂರು: ಮೈಸೂರಿನಲ್ಲಿ ಕೋವಿಡ್ ಪ್ರಕರಣಗಳ ಕುರಿತು ಜಿಲ್ಲಾಡಳಿತ ಅಂಕಿ ಅಂಶ ಬಿಡುಗಡೆ ಮಾಡಿದೆ. ಜಿಲ್ಲೆಯ ೧೫೬೦ ಗ್ರಾಮಗಳ ಪೈಕಿ ೩೪೩ ಗ್ರಾಮಗಳಲ್ಲಿ ಒಂದೇ ಒಂದು ಕೊವಿಡ್ ಪ್ರಕರಣ ಇಲ್ಲ.
ಕೊವಿಡ್ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಶೂನ್ಯ ಸಂಪಾದಿಸಿ ವಾರ್ಡ್ಗಳು ಸಹ ಇವೆ. ಮೈಸೂರು ಮಹಾ ನಗರಪಾಲಿಕೆ ಹೊರತು ಪಡಿಸಿ ಜಿಲ್ಲೆಯ ೨೪೭ ವಾರ್ಡ್ಗಳ ಪೈಕಿ ೨೭ ವಾರ್ಡ್ಗಳಲ್ಲಿ ಶೂನ್ಯ ಕೊವಿಡ್ ಪ್ರಕರಣವಿದೆ.
ಯಾವುದೇ ಕೊವಿಡ್ ಪ್ರಕರಣ ಇರದ ಜಿಲ್ಲೆಯ ಏಕಮಾತ್ರ ಗ್ರಾಮ ಪಂಚಾಯತಿ ಡಿಬಿ ಕುಪ್ಪೆ ಗ್ರಾಪಂ. ಸುಮಾರು ೭ ಸಾವಿರ ಜನಸಂಖ್ಯೆ ಹೊಂದಿದೆ ಈ ಗ್ರಾಪಂ.
ಜಿಲ್ಲೆಯ ೧೬೦ ಗ್ರಾಮಗಳಲ್ಲಿ ೨೦ ಕ್ಕಿಂತ ಹೆಚ್ಚಿನ ಪ್ರಕರಣಗಳಿವೆ ಎಂದು ಮೈಸೂರು ಜಿಲ್ಲಾಡಳಿತ ಅಧಿಕೃತ ಮಾಹಿತಿ ನೀಡಿದೆ.