ಮೈಸೂರಿನಿಂದ ಗಂಗಾವತಿಯ ವರೆಗೆ ಹೋಗಿ ಸಹಾಯ ಹಸ್ತ ಚಾಚಿದ ಹರ್ಷವರ್ಧನ್ ಎಂಬ ಹೃದಯವಂತ
1 min readಮೈಸೂರು: ಕೊಪ್ಪಳದ ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಮದ ಗಣೇಶ ಎನ್ನುವ ವ್ಯಕ್ತಿ ನಿಧನರಾಗಿ ಸುಮಾರು 10 ಹತ್ತು ವರ್ಷಗಳ ಕಳೆದಿದೆ. ಗಣೇಶನ ಪತ್ನಿ ಸುನಂದಾ ಕುಟುಂಬದ ಮೂರು ಜನ ಬುದ್ಧಿಮಾಂದ್ಯಾ ವಿಕಲಚೇತನ ಮಕ್ಕಳು ಅತ್ತೆ ಹಾಗೂ ವಿಕಲಚೇತನೆ ಮಾವ ಈ ಸುನಂದಾ ಈ ಐದು ಜನರ ಜೀವನ ನಡೆಸುವದು ತುಂಬಾ ಕಷ್ಟ ಸಾಧ್ಯ.
ಸರ್ಕಾರ ಮಾಸಿಕ ಮೂರು ಸಾವಿರ ರೂ ಪಿಂಚಣಿ ಬರುತ್ತೆ. ಈ ಮೂರು ಸಾವಿರ ದಲ್ಲಿ ಆರು ಜನರ ಜೀವನ ನಡೆಸುವುದು ಹೇಗೆ ಈ ಕುಟುಂಬದ ಕಷ್ಟಗಳನ್ನು ಕಣ್ಣಾರೆ ಕಂಡ ವಾಯ್ ಆಫ್ ಪೀಪಲ್ ಅಧ್ಯಕ್ಷರು ಸಂಪೂರ್ಣ ವಿಡಿಯೋ ಮಾಡಿ ಫೇಸ್ ಬುಕ್ ದಲ್ಲಿ ಹಾಗೂ ಇತರೆ ಜಾಲಗಳಲ್ಲಿ ಹಾಕಿದ್ದರು ಇದನ್ನು ಇದನ್ನು ನೋಡಿದ ಮೈಸೂರಿನ ಹರ್ಷವರ್ಧನ್ ಗೌಡ ಅವರು ಹೃದಯವಂತಿಕೆ ಮೇರೆದಿದ್ದಾರೆ ..
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ನೋಡಿದ ತಕ್ಷಣ ತಮ್ಮ ಸ್ನೇಹಿತರ ಪಡೆಯೊಂದಿಗೆ ದೂರದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಮದ ಸುನಂದಾ ಮನೆಗೆ ತೆರಳಿ ಸ್ವಂತ ಆ ಕುಟುಂಬದ ಕಷ್ಟಗಳನ್ನು ಕಣ್ಣಾರೆ ಕಂಡು ಕುಟುಂಬದ ಅತ್ತೆ ಮಾವ ಸುನಂದಾ ಎಲ್ಲರಿಗೂ ಧೈರ್ಯ ತುಂಬಿ ಸ್ಥಳದಲ್ಲೇ ಇಪ್ಪತ್ತೈದು ಸಾವಿರ ಆರ್ಥಿಕ ನೆರವು ನೀಡಿ ಮಾನವೀಯತೆಯ ಮೆರೆದಿದ್ದಾರೆ..
ಮೈಸೂರಿನ ಯುವ ಉದ್ಯಮಿ ಹರ್ಷವರ್ಧನ್ ಗೌಡ ಅವರು ಈಗಾಗಲೇ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು, ಮೈಸೂರಿನಿಂದ ಕೊಪ್ಪಳದ ವರೆಗೂ ಹೋಗಿ ಸಹಾಯ ಹಸ್ತ ಚಾಚಿರುವುದು ನಿಜಕ್ಕೂ ಶ್ಲಾಘನೀಯ.