ಕರ್ನಾಟಕಕ್ಕೆ ಬೀಗ- 14 ದಿನ ರಾಜ್ಯ ಲಾಕ್ಡೌನ್! ಸಿಎಂ ಯಡಿಯೂರಪ್ಪ ಘೋಷಣೆ!
1 min readಬೆಂಗಳೂರು: ಕೋವಿಡ್ ರಾಜ್ಯದಲ್ಲಿ ತೀವ್ರ ಸಮಸ್ಯೆ ತಂದಿದ್ದು ಸಾಕಷ್ಟು ಪರಿಣಾಮ ಉಂಟು ಮಾಡಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಕಠಿಣ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಈ ಕಾರಣ ದಿನಾಂಕ 10/05/2021 ರಿಂದ 24/05/2021 ರ ವರೆಗು ರಾಜ್ಯಾದ್ಯಂತ ಲಾಕ್ಡೌನ್ ವಿಧಿಸಿ ಸಿಎಂ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.
ಬೆಳಗ್ಗೆ 6 ರಿಂದ 10 ಗಂಟೆವರೆಗು ಮಾತ್ರ ದಿನಸಿಗೆ ಅವಕಾಶ. ನಂದಿನಿ ಹಾಲಿನ ಕೇಂದ್ರ ಸಂಜೆಯವರೆಗು ಅನುವು- ತಳ್ಳುವ ಗಾಡಿಗೆ ಸಂಜೆ 6ರ ವರೆಗು ಅವಕಾಶ. ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಲಾಗಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.