ಪ್ರವಾಸೋದ್ಯಮಕ್ಕೆ ಪುಷ್ಠಿ ನೀಡಿದ ದಸರಾ: ಒಂದೇ ದಿನ 27,೦೦೦ ಪ್ರವಾಸಿಗರಿಂದ ಮೃಗಾಲಯ ವೀಕ್ಷಣೆ
1 min readಮೈಸೂರು: ದಸರಾ ಮಹೋತ್ಸವ ಹಿನ್ನೆಲೆ ಮೈಸೂರಿಗೆ ಪ್ರವಾಸಿಗರ ದಂಡೆ ಹರಿದುಬಂದಿದ್ದು ಮೈಸೂರು ಪ್ರವಾಸೋದ್ಯಮಕ್ಕೆ ಪುಷ್ಠಿ ನೀಡಿದೆ ದಸರಾ.
ಒಂದೇ ದಿನ 27 ಸಾವಿರ ಪ್ರವಾಸಿಗರು ಮೃಗಾಲಯ ವೀಕ್ಷಣೆ ಮಾಡಿದ್ದಾರೆ. ವಿಜಯದಶಮಿ ದಿನದಂದು 27 ಸಾವಿರ ಮಂದಿಯಿಂದ ಮೃಗಾಲಯ ವೀಕ್ಷಣೆ ಮಾಡಿದ್ದಾರೆ. ಇದರಿಂದ ಒಂದೇ ದಿನಕ್ಕೆ 26,67,880ರೂ ಮೃಗಾಲಯಕ್ಕೆ ಆದಾಯ ಬಂದಿದೆ.
ದಸರಾ ಹಬ್ಬದ 10ದಿನಗಳ ಅವಧಿಯಲ್ಲಿ 75 ಸಾವಿರ ಮಂದಿ ಮೃಗಾಲಯ ವೀಕ್ಷಣೆ ಮಾಡಿದ್ದಾರೆ. ಒಟ್ಟು 77.63ಲಕ್ಷ ಮೃಗಾಲಯಕ್ಕೆ ಆದಾಯ ಬಂದಿದೆ. ಕಳೆದ ಬಾರಿ ಕೊರೊನಾದಿಂದ ಮೃಗಾಲಯದ ಆದಾಯ ನೆಲಕಚ್ಚಿತ್ತು. ಇದೀಗ ದಸರಾ ಹಿನ್ನೆಲೆ ಪ್ರವಾಸೋದ್ಯಮ ಚಟುವಟಿಕೆಯಲ್ಲಿ ಚೇತರಿಕೆ ಕಂಡಿದೆ.