ವಾಹನ ಸವಾರರಿಗೆ ಗುಡ್ ನ್ಯೂಸ್- ಕೇಂದ್ರದಿಂದ ಪೆಟ್ರೋಲ್ ಡೀಸೆಲ್ ಬೆಲೆ ಇಳಿಸಿ ಆದೇಶ- ರಾಜ್ಯ ಸರ್ಕಾರದಿಂದಲು ತೆರಿಗೆ ಇಳಿಕೆ!
1 min readಕಡೆಗೂ ಕೇಂದ್ರ ಸರ್ಕಾರ ಸಾಮಾನ್ಯ ಜನರ ಮೇಲೆ ಆಡುತ್ತಿದ್ದ ಕಣ್ಣಾಮುಚ್ಚಾಲೇ ಆಟಕ್ಕೆ ಬ್ರೇಕ್ ನೀಡಿದ್ದು ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯನ್ನ ಕೊಂಚ ಪ್ರಮಾಣದಲ್ಲಿ ಇಳಿಸಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದ ಬೆನ್ನಲ್ಲೇ ಇದೀಗಾ ರಾಜ್ಯ ಸರ್ಕಾರ ಸಹ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ತಲಾ 7 ರೂ.ಗಳಷ್ಟು ಕಡಿಮೆ ಮಾಡಿದೆ. ನಾಳೆ ಸಂಜೆಯಿಂದ ಈ ದರ ಜಾರಿಗೆ ಬರಲಿದ್ದು, ಕೇಂದ್ರ ಸರ್ಕಾರ ಡೀಸೆಲ್ ಮೇಲೆ 10ರೂ. ಹಾಗೂ ಪೆಟ್ರೋಲ್ ಮೇಲೆ 5ರೂ. ಕಡಿಮೆ ಮಾಡಿ ಆದೇಶ ಹೊರಡಿಸಿದೆ.
ಸದ್ಯ ಈ ನಿರ್ಧಾರದಿಂದ ಬಡ ಹಾಗೂ ಮಧ್ಯಮ ವರ್ಗದ ಜನರು ನಿಟ್ಟುಸಿರು ಬಿಟ್ಟಿದ್ದು ಮತ್ತೇ ಪೆಟ್ರೋಲ್ ಏರಿಸದಂತೆ ಮನವಿ ಮಾಡಿದ್ದಾರೆ. ಸದ್ಯದ ಈ ನಿರ್ಧಾರದಿಂದ ರಾಜ್ಯಸರ್ಕಾರಕ್ಕೆ ಅಂದಾಜು 2 ಸಾವಿರಕ್ಕು ಹೆಚ್ಚು ಕೋಟಿ ರೂ ಬೊಕ್ಕಸಕ್ಕೆ ನಷ್ಟವಾಗಬಹದು ಎಂದು ಅಂದಾಜಿಸಲಾಗಿದೆ.